ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮಾಣಕ್ಕೆ ಕಾರಣವಾದಲ್ಲಿ ದಂಡ: ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ

ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮಾಣಕ್ಕೆ ಕಾರಣವಾದಲ್ಲಿ ದಂಡ: ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ Fines will be imposed if mosquito breeding sites are created: District Collector Lakshmipriya

ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮಾಣಕ್ಕೆ ಕಾರಣವಾದಲ್ಲಿ ದಂಡ: ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ

ಕಾರವಾರ, 04 ; ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮಾಣಕ್ಕೆ ಕಾರಣವಾದಲ್ಲಿ ದಂಡ ರಾಜ್ಯದ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಡೆಂಗ್ಯೂ ರೋಗ ನಿಯಂತ್ರಣ ಸಾಧಿಸುವ ಹಿನ್ನಲೆಯಲ್ಲಿ ಸರ್ಕಾರದ ಅಧಿಸೂಚನೆ ಹೊರಡಿಸಿದೆ. ಈಡೀಸ್ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಿರ್ಮೂಲನೆ ಮಾಡುವಲ್ಲಿ ಸಾರ್ವಜನಿಕರ ಸಹಭಾಗಿತ್ವವನ್ನು ಸರ್ಕಾರ ನೀರೀಕ್ಷಿಸಿದೆ. ಮನೆಯ ಮಾಲೀಕರು ಈಡೀಸ್ ಸೊಳ್ಳೆಗಳ ಉತ್ಪತ್ತಿಯನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ಅಲ್ಲದೆ ಈ ಕಾರ್ಯಕ್ರಮದ ಬಗ್ಗೆ ಮೊದಲು ಜಾಗ್ರತೆ ಮೂಡಿಸಲು ಸ್ಥಳೀಯ ಆಡಳಿತಕ್ಕೆ ಅದೇಶಿಸಿದೆ. ಈ ನಿಯಮಗಳನ್ನು ಉಲ್ಲಂಘಿಸಿದವರಿಗೆ ನೋಟಿಸ್ ನೀಡುವುದು ಮತ್ತು ದಂಡ ವಿಧಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ಸರ್ಕಾರ ನೀಡಿದೆ. ಅದರಂತೆ ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕರ್ನಾಟಕ ಸಾಂಕ್ರಾಮಿಕ ರೋಗಗಳ (ತಿದ್ದುಪಡಿ) ವಿನಿಯಮಗಳು 2024 ರಲ್ಲಿನ ನಿಯಮಗಳ ಉಲ್ಲಂಘನೆ ಬಗ್ಗೆ ದಂಡ ವಸೂಲಿ ಮಾಡಲು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಗ್ರಾಮ ಪಂಚಾಯಿತಿ ಮತ್ತು ಸ್ಥಳೀಯ ನಗರ ಸಂಸ್ಥೆಗಳ ಮಟ್ಟದಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಉತ್ತರ ಕನ್ನಡ ಜಿಲ್ಲಾ ಸಕ್ಷಮ ಪ್ರಾಧಿಕಾರಿ (ಜಿಲ್ಲಾಧಿಕಾರಿ) ಯಿಂದ ಸಕ್ಷಮ ಪ್ರಾಧಿಕಾರದ ಪ್ರತಿನಿಧಿಯಾಗಿ ಅಧಿಕಾರವನ್ನು ಹಾಗೂ ನಿಗಧಿಯಂತೆ ದಂಡ ವಸೂಲಿ ಅಧಿಕಾರವನ್ನು ಪ್ರತ್ಯಾಯೋಜಿಸಿ ಆದೇಶಿಸಿದೆ.  

ಸಕ್ಷಮ ಪ್ರಾಧಿಕಾರದಿಂದ ಪ್ರತ್ಯಾಯೋಜನೆಗೊಂಡ ನಗರ ಮತ್ತು ಗ್ರಾಮಾಂತರ ಪ್ರದೇಶದ ಅಧಿಕಾರಿಗಳಿಗೆ ಕರ್ತವ್ಯದ ವ್ಯಾಪ್ತಿ ಮತ್ತು ಜವಾಬ್ದಾರಿಯನ್ನು ನೀಡಲಾಗಿದೆ. ಪಂಚಾಯಿತ್ ಅಭಿವೃದ್ಧಿ ಅಧಿಕಾರಿಗಳು, ಸ್ಥಳೀಯ ನಗರ ಸಂಸ್ಥೆಗಳ ಮಟ್ಟದಲ್ಲಿ ಆಯುಕ್ತರು ನಗರಸಭೆ ಅಥವಾ ಆರೋಗ್ಯ ನೀರೀಕ್ಷಣಾಧಿಕಾರಿ ದಂಡ ಹಾಕು ಲವ ಪ್ರಾಧಿಕಾರವಾಗಿರುತ್ತಾರೆ. ಎಲ್ಲಾ ಸಾರ್ವಜನಿಕರಿಗೆ ಈಡೀಸ್ ಸೊಳ್ಳೆ ಉತ್ಪತ್ತಿ ತಾಣಗಳ ಬಗ್ಗೆ ಅಧಿಸೂಚನೆಯಲ್ಲಿನ ಜವಾಬ್ದಾರಿಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಈಡೀಸ್ ಲಾರ್ವಾ ನಿರ್ಮೂಲನಾ ಕ್ರಮಗಳನ್ನು ಕೈಗೊಳ್ಳಲು ನಿರ್ಲಕ್ಷಿಸಿದ ಅಥವಾ ನಿರಾಕರಿಸಿದ ಅಥವಾ ವಿಫಲನಾದ ಯಾವುದೇ ವ್ಯಕ್ತಿಗೆ ಯಿಂದ ದಂಡ ವಿಧಿಸಲು ಮತ್ತು ವಸೂಲಿ ಮಾಡಲು ಅಧಿಕಾರಗಳನ್ನು ಹೊಂದಿದ್ದಾರೆ. ಸೊಳ್ಳೆಗಳ ಸಂತಾನೋತ್ಪತ್ತಿ ಕಂಡುಬರುವ ಮನೆಗಳು (ಒಳಾಂಗಣ ಮತ್ತು ಹೊರಾಂಗಣಗಳೆರಡೂ) ಪ್ರದೇಶದಲ್ಲಿ ನಗರ ಪ್ರದೇಶದ ವ್ಯಾಪ್ತಿಯಲ್ಲಿ ರೂ.800 ಮತ್ತು ಗ್ರಾಮೀಣ ಪ್ರದೇಶದಲ್ಲಿ ರೂ. 400 ದಂಡ ವಿಧಿಸಬಹುದಾಗಿದ್ದು, ವಾಣಿಜ್ಯ ಸಂಸ್ಥೆಗಳು, ಕಛೇರಿಗಳು, ವಸತಿ ಒಳಗೊಂಡ ಸೌಲಭ್ಯಗಳನ್ನು ಒಳಗೊಂಡ ಶಾಲಾ ಮತ್ತು ಕಾಲೇಜುಗಳು, ಆರೋಗ್ಯ ಪಾಲನಾ ಸೌಲಭ್ಯಗಳು, ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು, ಉಪಹಾರ ಗೃಹಗಳು, ವಸತಿಗೃಹಗಳು, ರೆಸಾರ್ಟ, ಹೋಂ ಸ್ಟೇಗಳು, ಮನೋರಂಜನಾ ಉದ್ಯಾನವನಗಳು, ಮಾಲ್‌ಗಳು, ಸೂಪರ್ ಮಾರ್ಕೆಟ್‌ಗಳು, ಸಣ್ಣ ಅಂಗಡಿಗಳು, ಎಳನೀರು ವ್ಯಾಪಾರಿಗಳು, ಕಾರ್ಖಾನೆಗಳು ಮತ್ತು ಕೈಗಾರಿಕೆಗಳು, ಪಂಚರ್ ಹಾಕುವ ಶಾಪುಗಳು, ಘನತ್ಯಾಜ್ಯ ಸಂಗ್ರಹಣ ಯಾರ್ಡ್‌ ಗಳು, ಪ್ಲಾಂಟ್ ನರ್ಸರಿಗಳು, ಸಿನಿಮಾ ಥಿಯೇಟರ್‌ಗಳು, ಸಮ್ಮೇಳನ ಮುಂತಾದ ಸಭಾಂಗಣಗಳು ಯಾವುದೇ ಇತರೆ ನಿರ್ಮಿತ ಸ್ಥಳಗಳಲ್ಲಿ ನಗರ ಪ್ರದೇಶದ ವ್ಯಾಪ್ತಿಯಲ್ಲಿ ರೂ.2000 ಮತ್ತು ಗ್ರಾಮೀಣ ಪ್ರದೇಶದಲ್ಲಿ ರೂ.1000 ದಂಡ ವಿಧಿಸಬಹುದಾಗಿದೆ.  

ನಿರ್ಮಾಣ ಕಾರ್ಯ ಪ್ರಗತಿಯಲ್ಲಿರುವ ನಿವೇಶನಗಳು, ಪಾಳುಬಿದ್ದ ನಿರ್ಮಾಣಗಳ ನಿವೇಶನಗಳು, ಖಾಲಿ ನಿವೇಶನಗಳು, ಬಯಲು ಜಮೀನು ಮುಂತಾದವುಗಳಲ್ಲಿ ನಗರ ಪ್ರದೇಶದ ವ್ಯಾಪ್ತಿಯಲ್ಲಿ ರೂ.4000 ಮತ್ತು ಗ್ರಾಮೀಣ ಪ್ರದೇಶದಲ್ಲಿ ರೂ.2000 ದಂಡ ವಿಧಿಸಬಹುದಾಗಿದೆ.****ಕೋಟ್‌.... 

ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕರ್ನಾಟಕ ಸಾಂಕ್ರಾಮಿಕ ರೋಗಗಳ (ತಿದ್ದುಪಡಿ) ವಿನಿಯಮಗಳು 2024 ರಲ್ಲಿನ ನಿಯಮಗಳ ಉಲ್ಲಂಘನೆ ಬಗ್ಗೆ ದಂಡ ವಸೂಲಿ ಮಾಡುವ ಜಿಲ್ಲಾಧಿಕಾರಿಗಳ ಅಧಿಕಾರವನ್ನು ಪ್ರತ್ಯಾಯೋಜಿಸಲಾಗಿದೆ. ದಂಡ ವಸೂಲಾದ ಮೊತ್ತವನ್ನು ಆಯಾ ಗ್ರಾಮ ಪಂಚಾಯಿತಿಗಳು ಅಧಿಕೃತ ಬ್ಯಾಂಕ್ ಖಾತೆಯಲ್ಲಿ ಸಂಗ್ರಹಿಸಬೇಕು. ದಂಡದ ಮೊತ್ತದಲ್ಲಿ ಶೇಕಡ 40 ನ್ನು ಡೆಂಗೂ ನಿಯಂತ್ರಣ ಚಟುವಟಿಕೆಗಳಿಗೆ ಬಳಕೆ ಮಾಡುವಂತೆ ಸೂಚನೆ ನೀಡಲಾಗಿದೆ.- ಕೆ.ಲಕ್ಷ್ಮಿಪ್ರಿಯಾ, ಜಿಲ್ಲಾಧಿಕಾರಿ, ಉತ್ತರ ಕನ್ನಡ ಜಿಲ್ಲೆ.