ಲೋಕದರ್ಶನ ವರದಿ
ಹೊಸಪೇಟೆ12: ಸ್ತ್ರೀ ಸಬಲೀಕರಣದ ಸೂಕ್ಷ್ಮ ಚಿತ್ರಣಗಳನ್ನು ಹಿರಿಯ ರಂಗಕಮರ್ಿ ಮ.ಬ.ಸೋಮಣ್ಣನವರ ಅರಣ್ಯ ರೋಧನ ನಾಟಕ ನಿರೂಪಿಸುತ್ತದೆ ಎಂದು ಡಾ.ಟಿ.ಎಂ.ಉಷಾರಾಣಿ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಕಮಲಾಪುರ ಹೋಬಳಿ ಘಟಕ ಹಾಗೂ ಕನರ್ಾಟಕ ವಚನ ಸಾಹಿತ್ಯ ಅಕಾಡೆಮಿ ತಾಲೂಕು ಘಟಕ ವತಿಯಿಂದ 63ನೇ ಕನರ್ಾಟಕ ರಾಜ್ಯೋತ್ಸವ ನಿಮಿತ್ತ ನುಡಿ ಸಪ್ತಾಹ ಕಾರ್ಯಕ್ರಮದ ಮೊದಲನೆಯ ದಿನ ನಗರದ ಅಪೂರ್ವ ಕೋಚಿಂಗ್ ಸೆಂಟರ್ನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಕೃತಿ ಕುರಿತು ಮಾತನಾಡಿ, ಎರಡು ನವಿಲುಗಳನ್ನು ಸಾಂಕೇತವಾಗಿಟ್ಟುಕೊಂಡು, ಮಾನವನು ಕಾಡಿನ ಮೇಲೆ ನಡೆಸುವ ಅತಿಕ್ರಮಣವನ್ನು ಮತ್ತು ಮಹಿಳೆಯ ಮೇಲೆ ನಡೆಸುವ ದೌರ್ಜನ್ಯಗಳನ್ನು ದುಶಂತ ಮತ್ತು ಶಕುಂತಲೆಯರ ಪಾತ್ರಗಳ ಮೂಲಕ ಚಿತ್ರಿಸುತ್ತಾ ಹೋಗಿದ್ದಾರೆ.
ಅಲ್ಲಿ ಬರುವ ಎಲ್ಲಾ ಪಾತ್ರಗಳನ್ನು ಇಂದಿನ ವರ್ತಮಾನಕ್ಕೆ ತೌಲನಿಕವಾಗಿ ಮ.ಬ.ಸೋಮಣ್ಣ ಹೋಲಿಕೆ ಮಾಡುತ್ತಾ ಹೋಗಿದ್ದಾರೆ. ಕಳೆದು ಹೋದ ಉಂಗುರವನ್ನು ಕೇವಲ ಸಾಂಕೇತವಾಗಿಟ್ಟುಕೊಂಡು ಹೆಣ್ಣು ಅನುಭವಿಸುವ ರೋಧನೆಯನ್ನು ನಾಟಕದಲ್ಲಿ ಕಟ್ಟುತ್ತಾ ಹೋಗಿದ್ದಾರೆ.
ಭಾಷೆ ಹಿಡಿತ ಮತ್ತು ಪ್ರಸ್ತುತ ಪಡಿಸುವ ಪ್ರಸಂಗಗಳು ಅತ್ಯಂತ ಮನೋಜ್ಞವಾಗಿವೆ. ರಾಜಕೀಯದಲ್ಲಿ ಭಾಷೆಗೆ ಪ್ರಾಮುಖ್ಯತೆ ಇರದೇ ಭರವಸೆಗಳ ಭರಾಟೆ ಹೆಚ್ಚು ಪ್ರಾತಿನಿಧ್ಯ ದೊರಕುತ್ತದೆ ಎಂಬ ನಾಟಕ ಸಂಭಾಷಣೆಯು ಎರಡೂ ಕಾಲಘಟ್ಟಗಳನ್ನು ಕಟ್ಟಿಕೊಡುತ್ತದೆ ಎಂದು ಉಷಾರಾಣಿ ತಿಳಿಸಿದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸೈಯದ್ ಹುಸೇನ್ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕೃತ ಡಾ.ಎತ್ನಳ್ಳಿ ಮಲ್ಲಯ್ಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಮ.ಬ.ಸೋಮಣ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ.ನಾಗಪುಷ್ಪಲತಾ ಅಧ್ಯಕ್ಷತೆ ವಹಿಸಿದ್ದರು. ಡಾ.ದಯಾನಂದ ಕಿನ್ನಾಳ್ ಸ್ವಾಗತಿಸಿ ಪ್ರಾಸ್ತವಿಕ ನುಡಿಗಳನ್ನಾಡಿದರೆ, ನಾಗರಾಜಪತ್ತಾರ್ ನಾಡು-ನುಡಿ ಕುರಿತಾದ ಗೀತೆಗಳನ್ನು ಪ್ರಸ್ತುತಪಡಿಸಿದರು. ಕಿಚಡಿ ಪ್ರಭು ಕಾರ್ಯಕ್ರಮ ನಿರೂಪಿದರೆ, ಶ್ರೀಕಾಂತ ತಾಮ್ರಪಣರ್ಿ ವಂದಿಸಿದರು.