ಆರ್ಯುವೇದಿಕ ಚಿಕಿತ್ಸೆ ಮೂಲಕ ಪರಿಹಾರ ಕಂಡುಕೊಳ್ಳಿರಿ : ಡಾ. ಮಿಲಿಂದ
ಶಿಗ್ಗಾವಿ 01: ದೈನಂದಿನ ಜೀವನದಲ್ಲಿ ನಮಗೆ ಅನೇಕ ಆರೋಗ್ಯ ಸಮಸ್ಯೆಗಳಿರುತ್ತವೆ ಅವುಗಳಿಗೆ ನಾವು ಆರ್ಯುವೇದಿಕ ಚಿಕಿತ್ಸೆ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂದು ನಿತ್ಯ ನೂತನ ಆರ್ಯುವೇದ ಸಂಶೋಧನಾ ಸಂಸ್ಥೆ ಡಾ. ಮಿಲಿಂದ ಹುಕ್ಕೇರಿ ಹೇಳಿದರು.
ತಾಲೂಕಿನ ಗಂಜೀಗಟ್ಟಿ ಗ್ರಾಮದ ಚರಮೂರ್ತೇಶ್ವರ ನಿತ್ಯ ನೂತನ ಸಭಾ ಭವನದಲ್ಲಿ ನಡೆದ ಆರ್ಯುವೇದಿಕ ತಪಾಸಣಾ ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಅವರು ಇಂದಿನ ದಿನಗಳಲ್ಲಿ ಆರ್ಯುವೇದಾ ಚಿಕಿತ್ಸೆಗೆ ಎಲ್ಲಿಲ್ಲದ ಬೇಡಿಕೆ ಇದ್ದು ಇದರ ಸದುಪಯೋಗವನ್ನು ರೋಗಿಗಳು ಪಡೆದುಕೊಳ್ಳಬೇಕು ಮತ್ತು ಕಡಿಮೆ ಬೆಲೆಯಲ್ಲಿ ಉತ್ತಮವಾದ ಚಿಕಿತ್ಸೆಯನ್ನು ಪಡೆದು ನಿಮ್ಮ ಆರೋಗ್ಯವನ್ನು ನಿಮ್ಮ ಹತೋಟಿಯಲ್ಲಿಡಬಹುದು ಎಂದರು.
ಸಾನಿಧ್ಯವಹಿಸಿ ಡಾ. ವೈಜನಾಥ ಶಿವಲಿಂಗೇಶ್ವರ ಶ್ರೀಗಳು ಮಾತನಾಡಿ ತಾಲೂಕಿನ ಸಮಸ್ತ ರೋಗಿಗಳು ಇದರ ಸದುಪಯೋಗ ಪಡೆದುಕೊಳ್ಳಿರಿ ಏಕೆಂದರೆ ನನಗೂ ಸಹಿತ ಶಸ್ತ್ರಚಿಕಿತ್ಸೆ ಆದರೂ ಸಹಿತ ನೋವು ಕಡಿಮೆ ಆಗಿರಲಿಲ್ಲ ನಂತರ ಇವರ ಚಿಕಿತ್ಸೆ ಪಡೆದ ನಂತರ ಆರಾಮವಾಗಿದ್ದೇನೆ ಎಂದರು.
ಡಾ. ಮಂಜುನಾಥ ಹಾಗೂ ನಿತ್ಯ ನೂತನ ಆರ್ಯುವೇದ ಸಂಶೋಧನಾ ಸಂಸ್ಥೆಯ ಸಿಬ್ಬಂದಿಗಳು, ರೋಗಿಗಳು ಉಪಸ್ಥಿತರಿದ್ದರು.