ಕಂಪ್ಲಿ ಪಟ್ಟಣದ ಸನಾ ಪೇಟೆ ಕ್ಲಸ್ಟರ್‌ನಲ್ಲಿ ಕೊನೆ ಹಂತದ ಎಫ್‌ಎಲ್‌ಎನ್ ಮೌಲ್ಯಾಂಕನ
ಕಂಪ್ಲಿ 05: ಪಟ್ಟಣದ ಸತ್ಯನಾರಾಯಣ ಪೇಟೆ ಕ್ಲಸ್ಟರ್ ವ್ಯಾಪ್ತಿಯ ಸೋಮಪ್ಪನ ಕೆರೆ ಹತ್ತಿರದ ಜಿಎಂಎಚ್‌ಪಿಎಸ್ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಳ ಕಚೇರಿಯಿಂದ ಕೊನೆ ಹಂತದ ಎಫ್‌ಎಲ್‌ಎನ್ ಮೌಲ್ಯಾಂಕನ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಎಮ್ಮಿಗನೂರು ಕ್ಲಸ್ಟರ್‌ನ ಸಿಆರ್‌ಪಿ ಸ್ವಯಂಪ್ರಭಾ ಮಾತನಾಡಿ ಕನ್ನಡ,ಆಂಗ್ಲಭಾಷೆ ಸೇರಿದಂತೆ ಗಣಿತ ವಿಷಯದಲ್ಲಿ ಮಕ್ಕಳ ಕಲಿಕಾ ಸಾಮಾರ್ಥ್ಯವನ್ನು ಕಂಡುಕೊಳ್ಳಲು ಸಹಾಯಕವಾಗಿದೆ. ಅಲ್ಲದೆ ಆರಂಭಿಕ ಹಂತದಿಂದ ಶೈಕ್ಷಣಿಕ ವರ್ಷದ ಕೊನೆ ಹಂತದಲ್ಲಿ ಮಕ್ಕಳ ಓದುಗಾರಿಕೆ ಮತ್ತು ಬರವಣಿಗೆಯಲ್ಲಿ ಬದಲಾವಣೆ ತರಲು ಸಹಾಯಕವಾಗಿದೆ ಎಂದರು.
ಶಾಲೆಯ ಮುಖ್ಯ ಶಿಕ್ಷಕಿ ನಾಗರತ್ನ ಅಗಳಿ, ಮೌಲ್ಯಾಂಕನ ತಂಡದ ಸದಸ್ಯರಾದ ಸರ್ವೇಶ್, ಮಂಜುನಾಥ್, ರಮೇಶ್, ಮಹ್ಮದ್ ತಸ್ಲಿಮ್, ಪಾಂಡುರಂಗ,ಕನಕರಾಯಪ್ಪ, ಶಿವನೇಗೌಡರ ರಾಮಪ್ಪ, ಶೇಖಣ್ಣ ಸೇರಿದಂತೆ ವಿದ್ಯಾರ್ಥಿಗಳು ಶಿಕ್ಷಕರು ಇದ್ದರು.