ತುಂಬಿದ ಕೊಡ ತುಳುಕಿತಲೇ ಪರಾಕ್ ಮೈಲಾರ ಲಿಂಗೇಶ್ವರ ಕಾರ್ಣಿಕ
ಹೂವಿನಹಡಗಲಿ 14: ತಾಲ್ಲೂಕಿನ ಮೈಲಾರ ಸುಕ್ಷೇತ್ರದಲ್ಲಿ ಗೊರವಯ್ಯ ರಾಮಣ್ಣ ವಾರ್ಷಿಕ ಭವಿಷ್ಯದ ವಾಣಿಯನ್ನು ಶುಕ್ರವಾರ ಸಂಜೆ 5.30ಕ್ಕೆ ತುಂಬಿದ ಕೊಡ ತುಳುಕಿತಲೇ ಪರಾಕ್ ನುಡಿದಿದ್ದಾರೆ. ಸುಕ್ಷೇತ್ರ ಮೈಲಾರದ ಪುಣ್ಯಭೂಮಿ ಡೆಂಕಣಮರಡಿಯಲ್ಲಿ ಶುಕ್ರವಾರ ಸಂಜೆ ಸುಮಾರು ಲಕ್ಷಾಂತರ ಭಕ್ತ ಸಮೂಹದ ಮಧ್ಯೆ ಸ್ವಾಮಿಯ ಪಾದಕೆಗಳು ನಂತರ ಕುದುರೆಯ ಏರಿ ಬರುವ ದೇಗುಲ ವಂಶಪರಂಪರೆಯ ಧರ್ಮಕರ್ತ ಗುರು ವೆಂಕಪ್ಪ ಒಡೆಯರು ಆಶೀರ್ವಾದ ನಂತರ ತುಪ್ಪ ಸವರಿದ 20 ಅಡಿ ಉದ್ದದ ಐತಿಹಾಸಿಕ ಬಿಲ್ಲನೇರಿದ ಗೊರವಯ್ಯ ಕಾರ್ಣಿಕದ ರಾಮಣ್ಣ ದಶದಿಕ್ಕುಗಳತ್ತ ನೋಡುತ್ತಾ ಸದ್ದಲೇ...! ಎಂದು ಏರುಧ್ವನಿಯಲ್ಲಿ ವರ್ಷದ ಭವಿಷ್ಯ ವಾಣಿ ಉನ್ನು ಕೂಗಿದರು.
ಈ ಸಂದರ್ಭದಲ್ಲಿ ಸಂಸದ ತುಕರಾಂ. ಶಾಸಕ ಕೃಷ್ಣನಾಯ್ಕ, ಕಾಗಿನೆಲೆಯ ನಿರಂಜನಾನಂದ ಪುರಿ ಸ್ವಾಮೀಜಿ, ಹಿರೇಹಡಗಲಿಹಾಲ ವೀರ್ಪಜ್ಜ ಸ್ವಾಮೀಜಿ.ಜಿಲ್ಲಾಧಿಕಾರಿ ದಿವಾಕರ. ಐಜಿಪಿ ಲೋಕೇಶ್ ಕುಮಾರ. ಎಸ್ಪಿ ಶ್ರೀಹರಿಬಾಬು, ಜಿಪಂ ಸಿಇಒ, ಹರಪನಹಳ್ಳಿ ಸಹಾಯಕ ಆಯುಕ್ತ ಚಿದಾನಂದ ಗುರುಸ್ವಾಮಿ.ಧಾರ್ಮಿಕ ಇಲಾಖೆ ಆಯುಕ್ತೆ ಸವಿತಾ. ಮತ್ತು ದೇವಸ್ಥಾನದ ಇಒ ಹನುಮಂತಪ್ಪ .ತಹಶಿಲ್ದಾರ ಜಿ. ಸಂತೋಷ ಕುಮಾರ, ತಾ.ಪಂ.ಇಒ ಎಂ.ಉಮೇಶ್, ಡಿವ್ಯೆಎಸ್ಪಿ ವೆಂಕಟಪ್ಪನಾಯ್ಕ, ಸಿಪಿಐ ದೀಪಕ್ ಬೋಸರೆಡ್ಡಿ