ಲೋಕದರ್ಶನ ವರದಿ
ಗಜೇಂದ್ರಗಡ 12: ಗದಗ ಜಿಲ್ಲೆಯ ಬರಗಾಲ ಪೀಡಿತ ಜಿಲ್ಲೆಯೆಂದು ಈಗಾಗಲೇ ಘೋಷಣೆಯಾಗಿದ್ದು ಸೂಕ್ತ ಅನುಕೂಲತೆಗಳು ರಾಜ್ಯ ಸರಕಾರದಿಂದ ದೊರೆಯುತ್ತಿಲ್ಲ ಇದರಿಂದ ಜನ-ಜಾನುವಾರುಗಳಿಗೆ ತೀವ್ರ ಅಭಾವ ಉಂಟಾಗಿದೆ ಎಂದು ತಾಲೂಕು ಹೋರಾಟ ಸಮಿತಿ ಅಧ್ಯಕ್ಷರಾದ ಕೂಡ್ಲೆಪ್ಪ ಗುಡಿಮನಿ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯ ಆವರಣದಲ್ಲಿ ಜರುಗಿದ ಒಂದು ದಿನದ ಸಾಂಕೇತಿಕ ಮುಷ್ಕರದ ಸಂದರ್ಭದಲ್ಲಿ ಮಾತನಾಡುತ್ತಾ ಮಳೆಗಾಲದ ಸಂದರ್ಭದಲ್ಲಿ ಕೃಷ್ಣಾ ನದಿಯಿಂದ ಹೆಚ್ಚುವರಿ ನೀರು ಅನ್ಯಾಯವಾಗಿ ನೆರೆಯ ರಾಜ್ಯವನ್ನು ಸೇರುವುದನ್ನು ತಪ್ಪಿಸಿದ ರೋಣ, ನರೇಗಲ್ ಹಾಗೂ ಗಜೇಂದ್ರಗಡದಂತಹ ಪ್ರಮುಖ ನಗರಗಳಿಗೆ ಶಾಶ್ವತ ಕುಡಿಯುವ ನೀರನ್ನು ಒದಗಿಸಲು ಈ ತಾಲೂಕಿಗೆ ಸಂಬಂಧಿಸಿದ ಎಲ್ಲ ಕೆರೆಗಳನ್ನು ತುಂಬಿಸುವತ್ತ ಸರಕಾರ ಪ್ರಯತ್ನಿಸಬೇಕು ಎಂದರು.
ಹೋರಾಟ ಸಮಿತಿ ಕಾರ್ಯದರ್ಶಿ ಎಂಎಸ್ ಹಡಪದ್ ಮಾತನಾಡಿ ಈಗಾಗಲೇ ಈ ಭಾಗದಲ್ಲಿ ಕೆರೆಗಳು ನಿಮರ್ಾಣಗೊಂಡಿದ್ದು ಕೃಷ್ಣ ಬಿ ಸ್ಕೀಮ್ ಪೂರ್ಣಗೊಳಿಸಿ ಶಾಶ್ವತ ಕುಡಿಯುವ ನೀರಿನ ಪರಿಹಾರ ಜನಪ್ರತಿನಿಧಿಗಳು ಸಕರ್ಾರಗಳು ಮುಂದಾಗಬೇಕು ಎಂದರು.
ರೈತ ಮುಖಂಡ ವೀರನಗೌಡ ಪಾಟೀಲ್ ಮಾತನಾಡಿ ನೀರು ಸಕಲ ಜೀವಿಗಳಿಗೂ ಜೀವಾಮೃತ ವಾಗಿದ್ದು ಇದನ್ನು ಮೂಲಸೌಲಭ್ಯದ ಅಡಿಯಲ್ಲಿ ಒದಗಿಸಲು ಸರಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಸರಕಾರಕ್ಕೆ ಎಚ್ಚರಿಸಿದರು.
ಒಂದು ದಿನದ ಸಾಂಕೇತಿಕ ಧರಣಿಯಲ್ಲಿ ಮೈಬು ಹವಾಲ್ದಾರ್, ಅಲ್ಲಾಭಕ್ಷಿ ಮುಚ್ಚಾಲಿ, ಪೀರು ರಾಠೋಡ, ಚನ್ನಪ್ಪ ಗುಗಲೋತ್ತರ, ಗಣೇಶ್ ರಾಠೋಡ, ಕೊಟ್ರೇಶ್ ಚಿಲಕಾ, ಬಸವರಾಜ್ ಹೊಸಮನಿ, ರೇಣುಕರಾಜ ಕಲ್ಗುಡಿ, ಕಾತರ್ಿಕ ಸಿಂದೆ, ಶರಣಪ್ಪ ಸಂಗಳದ, ಸಂಗನಗೌಡ ಗೌಡ್ರು ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಬೇಡಿಕೆಗಳು:
* ಕೃಷ್ಣಾ ಮೇಲ್ದಂಡೆ 3ನೇ ಹಂತದ ಕೊಪ್ಪಳ ಸೂಕ್ಷ್ಮ ಏತನೀರಾವರಿ ಯೋಜನೆಯಡಿ ಗಜೇಂದ್ರಗಡ ತಾಲೂಕಿಗೆ ಒಳಪಡುವ ಕೆರೆಗಳಾದ ಗೋಗೆರಿ, ನಾಗರಸಕೋಪ್ಪ, ನಾಗೇಂದ್ರಗಡ, ಕುಂಟೋಜಿ, ಮ್ಯಕಲಝರಿ, ಬೇಣಚಮಟ್ಟಿ, ಜಿಗೇರಿ, ನಿಡಗುಂದಿ ಇಂಗುಕೆರೆ, ಗಜೇಂದ್ರಗಡ ಇಂಗುಕೆರೆ, ನೆಲ್ಲೂರು, ಪ್ಯಾಟಿ, ಶಾಂತಗಿರಿ, ದಿಂಡೂರ ಹಾಗೂ ರಾಜೂರ ಗ್ರಾಮಗಳ ಕೆರೆಗಳನ್ನು ತುಂಬಿಸುವಂತೆ ರಾಜ್ಯ ಸರ್ಕಾರ ಕಾರ್ಯಪ್ರವೃತರಾಗಬೇಕು.
* ಈಗಾಗಲೇ ಗಜೇಂದ್ರಗಡ ನರೇಗಲ್, ರೋಣ, ನಗರಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಸುವ ಯೋಜನೆಯಾದ ಜಿಗಳೂರು ಕೆರೆ, ಯೋಜನೆಯನ್ನು ತಕ್ಷಣವೇ ಪೂರ್ಣಗೊಳಿಸಬೇಕು.
* ಕೃಷ್ಣಾ ಮೇಲ್ದಂಡೆ 3ನೇ ಹಂತದ ಕೊಪ್ಪಳ ಸೂಕ್ಷ್ಮ ಏತನೀರಾವರಿ ಯೋಜನೆಯಡಿ ಗಜೇಂದ್ರಗಡ ಹಾಗೂ ರೋಣ ತಾಲೂಕಿನ 10 ಸಾವಿರ ಎಕರೆ ಜಮೀನಿಗೆ ನಿಗಧಿತ ಕಾಲಮಿತಿಯಲ್ಲಿ ನೀರಾವರಿ ಯೋಜನೆ ಪೂರ್ಣಗೊಳಿಸಬೇಕು.