ಒಳ ಮೀಸಲಾತಿ ಜಾರಿ ನಂತರ ಬ್ಯಾಕ್ ಲಾಗ್ ಹುದ್ದೆ ಭರ್ತಿ ಮಾಡಿ
ದೇವರಹಿಪ್ಪರಗಿ 11: ಒಳ ಮೀಸಲಾತಿ ಜಾರಿಯ ನಂತರ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಭೀಮ್ ಆರ್ಮಿ ಭಾರತ ಏಕತಾ ಮಿಷನ್ ಜಿಲ್ಲಾಧ್ಯಕ್ಷರಾದ ಡಿಕೆ.ದ್ಯಾವಪ್ಪ ದೊಡ್ಡಮನಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಪಟ್ಟಣದಲ್ಲಿ ಮಂಗಳವಾರದಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು,ಒಳ ಮೀಸಲಾತಿ ಜಾರಿಯವರೆಗೆ ಸರ್ಕಾರಿ ಹುದ್ದೆ ಭರ್ತಿ ಮಾಡುವುದಿಲ್ಲ ಎಂದು ಈ ಹಿಂದೆ ಸರ್ಕಾರವೇ ಸ್ಪಷ್ಷಪಡಿಸಿತ್ತು. ಆದರೆ ಇತ್ತೀಚಿಗೆ ಬ್ಯಾಕ್ ಲಾಗ್ ಹುದ್ಧೆ ಭರ್ತಿಗೆ ವಿವಿಧ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಮೇಲೆ ಒತ್ತಡ ತರುವಂತಹ ರೀತಿ ಸಮಿತಿ ಮಾತನಾಡುತ್ತಿರುವುದು ಅಚ್ಚರಿ ಮೂಡಿಸುತ್ತಿದೆ. ಅನೇಕ ವರ್ಷಗಳಿಂದ ಒಳ ಮೀಸಲಾತಿ ಹೋರಾಟ ನಡೆಯುತ್ತಿದ್ದು ಸುಪ್ರೀಂಕೋರ್ಟ್ ತೀರ್ು ಬಂದ ನಂತರ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೆ ಹೊರಟಿದೆ. ಹೀಗಿರುವಾಗ ಬ್ಯಾಕ್ ಲಾಗ್ ಹುದ್ದೆಗನ್ನು ತರಾತುರಿಯಲ್ಲಿ ಭರ್ತಿ ಮಾಡ ಹೊರಟಿರುವುದು ಎಷ್ಷು ಸರಿ. ಒಳ ಮೀಸಲಾತಿ ಜಾರಿಯ ನಂತರ ಬ್ಯಾಕ್ ಲಾಗ್ ಹುದ್ದೆ ಭರ್ತಿ ಮಾಡಿದರೆ ಪರಿಶಿಷ್ಟ ಜಾತಿಯ ಎಲ್ಲಾ ಪ್ರತಿಭಾವಂತ ಅಭ್ಯರ್ಥಿಗಳಿಗೆ ಅವಕಾಶ ಸಿಗಲಿದ್ದು ಸರ್ಕಾರ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ. ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.