ಲೋಕದರ್ಶನ ವರದಿ
ಬೆಳಗಾವಿ, 20: ಮತ್ತಿಕೊಪ್ಪದ ಐಸಿಎಆರ್- ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಐದನೇಯ ವೈಜ್ಞಾನಿಕ ಸಲಹಾ ಸಮಿತಿ ಸಭೆ ನಡೆಸಲಾಯಿತು.
ಸಭೆಯ ಕುರಿತು ಪ್ರಾಸ್ತಾವಿಕ ಮಾತನಾಡಿದ ಕೃಷಿ ವಿಜ್ಞಾನ ಕೇಂದ್ರದ ಸಲಹೆಗಾರ ಡಾ. ವ್ಹಿ. ಎಸ್. ಕೋರಿಕಂಥಿಮಠ, 7 ವರ್ಷಗಳ ಹಿಂದೆ ಪ್ರಾರಂಭಗೊಂಡ ಕೇಂದ್ರವು ರೈತರ ಜಮೀನುಗಳಲ್ಲಿ ಹಲವಾರು ಕ್ಷೇತ್ರ ಪರೀಕ್ಷೆಗಳನ್ನು ಹಾಗೂ ಮುಂಚೂಣಿ ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಂಡು ರೈತರಿಗೆ ನೂತನವಾದ ತಂತ್ರಜ್ಞಾನಗಳನ್ನು ತಲುಪಿಸಿ ಉತ್ತಮ ಯಶಸ್ಸನ್ನು ಕಂಡಿದೆ. ಕೇಂದ್ರದಲ್ಲಿ ಸುಸಜ್ಜಿತ ಮಣ್ಣು ಪರೀಕ್ಷೆ ಪ್ರಯೋಗಾಲಯ, ಸಸ್ಯ ಆರೋಗ್ಯ ಚಿಕಿತ್ಸಾಲಯ ಹಾಗೂ ಬೀಜ ಸಂಸ್ಕರಣ ಘಟಕಗಳನ್ನು ಹೊಂದಿದ್ದು, ರೈತರಿಗೆ ಮಣ್ಣು ವಿಶ್ಲೇಷಣಾ ವರದಿ ಹಾಗೂ ಬಳಸಬೇಕಾದ ಗೊಬ್ಬರ ಕುರಿತು ಸಲಹೆಗಳನ್ನು, ಅದೇರೀತಿ ರೈತರ ಕ್ಷೇತ್ರಗಳಲ್ಲಿ ಬರುವ ರೋಗ/ಕೀಟ ನಿಯಂತ್ರಣಕ್ಕೆ ಸಲಹೆಗಳನ್ನು ನೀಡಲಾಗುತ್ತಿದೆ. ಅಲ್ಲದೆ ರೈತರಿಗೆ ಗುಣಮಟ್ಟದ ಹೆಸರು ಹಾಗೂ ಕಡಲೆ ಬೀಜಗಳನ್ನು ಒದಗಿಸಲಾಗುತ್ತಿದೆ ಎಂದರು. ವೈಜ್ಞಾನಿಕ ಸಲಹಾ ಸಮಿತಿ ಸಭೆಯಲ್ಲಿ ವಿಜ್ಞಾನಿಗಳು ಹಾಗೂ ರೈತರು ವಿಸ್ತೃತ ಚಚರ್ೆ ನಡೆಸಿ ಪ್ರಗತಿಪರ ಕಾರ್ಯಕ್ರಮಗಳನ್ನು ಇನ್ನಷ್ಟು ಚುರುಕುಗೊಳಿಸಲು ಅನುಕೂಲವಾಗುವದು ಎಂದು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ಕಾಯರ್ಾಧ್ಯಕ್ಷರಾದ ಬಿ. ಆರ್. ಪಾಟೀಲ ಮಾತನಾಡಿ ಕೇಂದ್ರವು ಪ್ರತಿ ವರ್ಷ ಹೆಚ್ಚು ಹೆಚ್ಚು ರೈತರನ್ನು ತಲುಪುತ್ತಿದ್ದು, ಅವರಿಗೆ ಆದಾಯ ಹೆಚ್ಚಿಸುವ ತಂತ್ರಜ್ಞಾನಗಳನ್ನು ತಲುಪಿಸುವ ನಿಟ್ಟಿನಲ್ಲಿ ಕೇಂದ್ರವು ಮುಂಚೂಣಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು. ಈ ದಿಶೆಯಲ್ಲಿ ಕೇಂದ್ರವು ಜಿಲ್ಲೆಯ 35,000 ರೈತರ ಸಂಪರ್ಕದಲ್ಲಿದ್ದು ಕೃಷಿ ಚಟುವಟಿಕೆಗಳ ಅನುಸಾರವಾಗಿ ಕಾಲಕಾಲಕ್ಕೆ ಇವರಿಗೆ ಮೊಬೈಲ್ ಸಂದೇಶಗಳನ್ನು ನಿಯಮಿತವಾಗಿ ಕಳುಹಿಸುತ್ತಿದ್ದು ವಿಡಿಯೋಗಳ ಮೂಲಕ ತಂತ್ರಜ್ಞಾನ ಮಾಹಿತಿಗಳನ್ನು ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದರು.
ಭಾರತೀಯ ಕೃಷಿ ಅನುಸಂಧಾನ ಪರಿಷತ್ನ ಡಾ. ಬಿ. ಟಿ. ರಾಯುಡು, ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿದರ್ೇಶಕ ಡಾ. ಹೆಚ್. ವೆಂಕಟೇಶ, ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿದರ್ೇಶಕ ಡಾ. ವಾಯ್. ಕೆ. ಕೋಟಿಕಲ, ಭಾರತೀಯ ಹುಲ್ಲುಗಾವಲು ಮತ್ತು ಮೇವು ಸಂಶೋಧನಾ ಸಂಸ್ಥೆಯ ಮುಖ್ಯಸ್ಥ
ಡಾ. ಬಿ. ಜಿ. ಶಿವಕುಮಾರ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳ ನೋಡಲ್ ಅಧಿಕಾರಿ ಡಾ. ಶ್ರೀಪಾದ ಕುಲಕಣರ್ಿ ಭಾಗವಹಿಸಿ ಕೇಂದ್ರವು ಕಡಿಮೆ ಅವಧಿಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಮುಂದೆ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಕುರಿತು ವೈಜ್ಞಾನಿಕ ಸಲಹೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಕೇಂದ್ರದಿಂದ ತಯಾರಿಸಿದ ವಿವಿಧ ಬೆಳೆಗಳ ತಂತ್ರಜ್ಞಾನಗಳ ಮಾಹಿತಿ ಇರುವ ಹತ್ತು ಹಸ್ತ ಪತ್ರಿಕೆಗಳನ್ನು ಬಿಡುಗಡೆ ಮಾಡಲಾಯಿತು. ಮುಂಗಾರು ತಡವಾದ ಹಿನ್ನಲೆಯಲ್ಲಿ ಸಭೆಯಲ್ಲಿ ಚಚರ್ಿಸಲಾಯಿತು ಹಾಗೂ ಬೆಳಗಾವಿ ಜಿಲ್ಲೆಗೆ ಪಯರ್ಾಯ ಬೆಳೆ ಯೋಜನೆಯನ್ನು ಅಂತಿಮಗೊಳಿಸಲಾಯಿತು.
ಸಭೆಯಲ್ಲಿ ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಚಚರ್ೆಯಲ್ಲಿ ಭಾಗವಹಿಸಿ ಸಲಹೆ ನೀಡಿದರು.
ಸಮಿತಿಯ ರೈತ ಸದಸ್ಯರುಗಳಾದ ಎನ್. ಐ ದೇಸಾಯಿ, ಅಜ್ಜಪ್ಪ, ಶ್ರೀಮತಿ. ಈರವ್ವ ಮಠಪತಿ, . ಅಕ್ಕಮಹಾದೇವಿ ಅಪ್ಪಯ್ಯನವರಮಠ, ವೀರಣ್ಣ ಕಳಸಣ್ಣವರ ಚಚರ್ೆಯಲ್ಲಿ ಪಾಲ್ಗೊಂಡು ವಿಸ್ತರಣಾ ಚಟುವಟಿಕೆಗಳ ಕುರಿತು ಸಲಹೆ ನೀಡಿದರು.
ಸಭೆಯಲ್ಲಿ ಕೇಂದ್ರದ ಮುಖ್ಯಸ್ಥೆ ಶ್ರೀದೇವಿ, ವಿಜ್ಞಾನಿಗಳಾದ ಜಿ. ಬಿ. ವಿಶ್ವನಾಥ, ಎಸ್. ಎಂ. ವಾರದ, ಡಾ. ಎಸ್. ಎಸ್. ಹಿರೇಮಠ, ಪ್ರವೀಣ ಯಡಹಳ್ಳಿ, ಡಾ. ನಾಗೇಶ ಹುಯಿಲಗೋಳ, ತಾಂತ್ರಿಕ ಸಿಬ್ಬಂದಿ ಶಂಕರಗೌಡಾ ಪಾಟೀಲ, ಮಂಜುನಾಥ ಹಾಗೂ ವಿನೋದ ಕೋಚಿ 2017-18 ಹಾಗೂ 2018-19 ನೇ ಸಾಲಿನಲ್ಲಿ ಕೈಗೊಂಡ ಕ್ಷೇತ್ರ ಪರೀಕ್ಷೆ, ಮುಂಚೂಣಿ ಪ್ರಾತ್ಯಕ್ಷಿಕೆಗಳ ಫಲಿತಾಂಶಗಳನ್ನು, ತರಬೇತಿ ಹಾಗೂ ವಿಸ್ತರಣಾ ಚಟುವಟಿಕೆಗಳ ವಿವರಗಳನ್ನು ಮಂಡಿಸಿದರು.
ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥೆ ಶ್ರೀದೇವಿ ಸ್ವಾಗತಿಸಿದರು, ವಿಜ್ಞಾನಿ ಎಸ್. ಎಂ. ವಾರದ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಸಭೆಯು ಮುಕ್ತಾಯವಾಯಿತು.