ಮೂಲಭೂತ ಸೌಲಭ್ಯಕ್ಕಾಗಿ ಉಗ್ರ ಹೋರಾಟದ ಎಚ್ಚರಿಕೆ

ಲೋಕದರ್ಶನ ವರದಿ

ಮಹಾಲಿಂಗಪುರ:  ಸಮೀಪದ ಅಕ್ಕಿಮರಡಿಯಲ್ಲಿ ಕನರ್ಾಟಕ ಮಾದಿಗರ ಸಂಘದ ನೂತನ ಶಾಖೆಯನ್ನು ಸಂಘದ ರಾಜ್ಯ ಉಪಾಧ್ಯಕ್ಷರಾದ ಹಣಮಂತ ಮಾದರ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಮಾದಿಗ ಮಹಾಸಮಾಜದ ಅಧ್ಯಕ್ಷರಾದ ಮುತ್ತಣ್ಣ ಬೆನ್ನೂರ ಹಾಗೂ ಸಂಘದ ರಾಜ್ಯಾಧ್ಯಕ್ಷರಾದ ದೇವರಾಜ ಅರಸು ಜಂಟಿಯಾಗಿ ಉದ್ಘಾಟಿಸಿದರು.

  ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಮುತ್ತಣ್ಣ ಅವರು, ನಮ್ಮ ಮಾದಿಗ ಸಮಾಜ ಅತ್ಯಂತ ಹಿಂದುಳಿದಿದ್ದು ತುಳಿತಕ್ಕೊಳಗಾಗಿದೆ. ಹಣಮಂತ ಅಕ್ಕಿಮರಡಿ ಅವರು ಸಮಾಜವನ್ನು ಉನ್ನತಿಕರಿಸಲು ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ನುಡಿದರು. ರಾಜ್ಯಾಧ್ಯಕ್ಷರಾದ ದೇವರಾಜ ಅರಸು ಮಾತನಾಡಿ, ನಮ್ಮ ಹಿರಿಯರು ಸದಾಶಿವ ಆಯೋಗದ ಬಗ್ಗೆ ಹೋರಾಟ ಮಾಡುತ್ತ ಬಂದಿರುತ್ತಾರೆ. ಆದರೆ ಯಾವುದೇ ಸಕರ್ಾರಗಳು ಅದನ್ನು ಶಿಫಾರಸ್ಸು ಮಾಡುವ ಮನಸ್ಸು ಮಾಡಿಲ್ಲ. ಆದಕಾರಣ ನಮ್ಮ ಸಮಾಜದ ಹಕ್ಕಿಗಾಗಿ ಉಗ್ರ ಹೋರಾಟ ಮಾಡಲು ಸದಾ ಸಿದ್ದ ಎಂದು ನುಡಿದರು.

  ಮುಖ್ಯ ಅತಿಥಿಗಳಾಗಿ ಪಿಎಸ್ಐ ರವಿಕುಮಾರ ಧರ್ಮಟ್ಟಿ, ಯಶವಂತ ಚೌವ್ಹಾಣ, ನ್ಯಾಯಾಧಿಶರಾದ ಕುಮಾರ ಪೋಳ, ನಾಗರಾಜ ಕೋಡಿಹಳ್ಳಿ, ರವಿಕುಮಾರ ನೀಚನಹಳ್ಳಿ, ರಾಜಕುಮಾರ ಬಾಸಗಿ, ಪ್ರೇಮಾ ಕಲಕೇರಿ, ಮಡಿವಾಳಪ್ಪ ಒಕ್ಕುಂಡಿ, ಕಲ್ಲಪ್ಪ ಬ್ಯಾಟನ್ನವರ, ಲಗಮನ್ನ ಮಾದರ, ಅಜರ್ುನ ಸರವಿ, ದುರ್ಗಪ್ಪ ಮಾದರ, ಗುರುಪ್ರಸಾದ ದೊಡಮನಿ ಹಾಗೂ ಅನೇಕ ದಲಿತ ಮುಖಂಡರು ಉಪಸ್ಥಿತರಿದ್ದರು