ಹಬ್ಬಗಳು, ಜಾತ್ರೆಗಳು ನಮ್ಮ ಸಾಂಸ್ಕೃತಿಕ ಪರಂಪರೆಯ ಸ್ವತ್ತು
ವಿಜಯಪುರ 8: ನಮ್ಮ ಹಿರಿಯರು ತ್ಯಾಗ, ಸಂಯಮ ಮತ್ತು ನಿರಂತರ ಪ್ರಯತ್ನದಿಂದ ಕುರುಹುಗಳನ್ನು, ಸ್ಮಾರಕಗಳನ್ನು, ಕಲೆಗಳನ್ನು, ಶಾಸನಗಳನ್ನು ನಿರ್ಮಾಣ ಮಾಡಿ ಮುಂದಿನವರಿಗೆ ಬದುಕುವ ಕಲೆಯನ್ನು ಕಲಿಸಿಕೊಟ್ಟಿದ್ದಾರೆ. ಬೇಜಾರಾದಾಗ, ಮನಸ್ತಾಪವಾದಾಗ, ವಾಗ್ವಾದಗಳಾದಾಗ ಹಿರಿಯರು ಮನಸ್ಸಿಗೆ ನೆಮ್ಮದಿಯಿಂದ ಇರಲು ಹಬ್ಬ, ಜಾತ್ರೆ ಆಚರಿಸಿ ನಾವೆಲ್ಲರೂ ಒಂದು ಎಂಬ ಸಾಂಸ್ಕೃತಿಕ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ. ಅವು ನಮ್ಮ ಸ್ವತ್ತುಗಳಾಗಿರುವುದರಿಂದ ವಿದ್ಯಾರ್ಥಿಗಳಾದ ತಾವು ಎಂದೆಂದೂ ಮುಂದುವರೆಸಿಕೊಂಡು ಹೋಗಬೇಕೆಂದು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶಕರಾದ ಸಂತೋಷ ಭೋವಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಡಾ. ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ಹಮ್ಮಿಕೊಂಡಿರುವ ಇಂಟ್ಯಾಚ್ ವತಿಯಿಂದ ಕಾರ‌್ಯಕ್ರಮವನ್ನು ಏರಿ್ಡಸಿದ ಈ ಸಂದರ್ಭದಲ್ಲಿ ಉಳಿದವರಿಗೆ ಮಾರ್ಗದರ್ಶಿಯಾಗಲೆಂದು 9 ಶಾಲೆಯ 80ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು, 10 ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದರು. ಮುಖ್ಯಾಧ್ಯಾಪಕ ವಿ.ಆರ್.ಹಾಲವರ ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ಅಂಬಾದಾಸ ಜೋಶಿಯವರು ಮಾತನಾಡುತ್ತ ಇದು ನಿಜವಾಗಲು ನಿಮ್ಮ ಸೃಜನಾತ್ಮಕ ಶಕ್ತಿಯನ್ನು ಬೆಳೆಸುವ ಅವಕಾಶ ಇಲ್ಲಿದೆ. ಇಂತಹ ಅವಕಾಶವನ್ನು ಬಳಸಿಕೊಂಡು ‘ನಮ್ಮೂರ ಹಬ್ಬಗಳು ಅಥವಾ ಜಾತ್ರೆಗಳ’ ಚಿತ್ರ ತೆಗೆದು ಅದರ ಕುರಿತು ಕರಾರುವಕ್ಕಾಗಿ ಬರೆದು ನಿಮ್ಮ ಸಾಂಸ್ಕೃತಿಕ ಪ್ರಜ್ಞೆ ಹೆಚ್ಚಿಸಿಕೊಳ್ಳಬೇಕೆಂಡರು. ಡಾ. ಕೃಷ್ಣ ಕೊಲ್ಹಾರಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಡಾ. ವಿ.ಡಿ.ಐಹೊಳ್ಳಿ ಕಾರ‌್ಯಕ್ರಮ ನಿರೂಪಿಸಿ ವಂದಿಸಿದರು.
ಶಾಲಾ ಶಿಕ್ಷಕರಾದ ತೆಗ್ಗಿನಮಠ ಎಂ.ಜಿ., ಚಿಕ್ಕಮಠ ಎಸ್.ಎಂ., ಹಂಚನಾಳ ಎಸ್.ಬಿ., ಮಲ್ಲಿಕಾರ್ಜುನ ತೇಲಿ, ಇಂಗಳೇಶ್ವರ ಜೆ.ಆಯ್., ಲಮಾಣಿ ಜಿ.ಕೆ., ರಾಜು ಶಹಾಪುರ, ನಾಲವರ ಎಸ್.ಬಿ., ಭಾಗವಹಿಸಿದ್ದರು.