ಕೊರೊನಾ ವಾರಿಯಸರ್್ಗೆ ಸನ್ಮಾನ ಕಾರ್ಯಕ್ರಮ

ಲೋಕದರ್ಶನ ವರದಿ

ಚಿಕ್ಕೋಡಿ 11:  ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ  ಕಾರ್ಯಕರ್ತರು ಹಾಗೂ ನಾಯಕರು ಕೊರೊನಾ ಸೋಂಕು ತಡೆಗಟ್ಟುವಲ್ಲಿ ಮುಂಚೂಣೆಯಲ್ಲಿ ನಿಂತು ಕಾರ್ಯ ಮಾಡುತ್ತಿದ್ದಾರೆ ಎಂದು ಚಿಕ್ಕೋಡಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಹೇಳಿದರು.

ಸೋಮವಾರ ತಾಲೂಕಿನ ನಾಗರಮುನ್ನೊಳ್ಳಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿನ ಹಳ್ಳಿಗಳಲ್ಲಿ ಕೊರೊನಾ ವಾರಿಯಸರ್್ಗೆ ಕೆಪಿಸಿಸಿ ಘಟಕದ  ವತಿಯಿಂದ ಸನ್ಮಾನಿಸಿ ಅವರು ಮಾತನಾಡಿದರು. ಮಹಾವೀರ ಮೋಹಿತೆ ಅವರು ರಾಯಬಾಗ ವಿಧಾನಸಭಾ ಕ್ಷೇತ್ರದಲ್ಲಿ ಕೊರೊನಾ ಸಂಕಷ್ಟದಲ್ಲಿನ ಜನರಿಗೆ ಸ್ಪಂದನೆ ಮಾಡುವ ಕಾರ್ಯ ಮಾಡಿದ್ದಾರೆ. ಅವರು ಕೊಡುಗೈ ದಾನಿಯಾಗಿದ್ದಾರೆ ಎಂದರು.ಕೆಪಿಸಿಸಿ ಕಾಯಾಧ್ಯಕ್ಷ ಸತೀಶ ಜಾರಕಿಹೊಳಿ ಅವ ರು ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ರೈತರು ಬೆಳೆದ ತರಕಾರಿಗಳನ್ನು ಖರಿದಿಸಿ ಜನರಿಗೆ ಹಂಚುವ ಕಾರ್ಯ ಮಾಡಿದ್ದಾರೆ ಎಂದರು. ಕೊರೊನಾ ತಡೆಗಟ್ಟುವಲ್ಲಿ ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಕಾಂಗ್ರೆಸ್ ಕಾರ್ಯಕರ್ತರು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ ಎಂದರು.ಕೊರೊನಾದಲ್ಲಿ ಜೀವ ಒತ್ತೆಯಿಟ್ಟು ಕಾರ್ಯ ಮಾಡುತ್ತಿರುವ ಆಶಾ ಕಾರ್ಯಕತರ್ೆಯರಿಗೆ ಸರಕಾರ 10 ಸಾವಿರ ನೀಡಬೇಕು. ಅವರು ವೇತನಕ್ಕಾಗಿ ಹೊರಾಟ ಮಾಡಿದರೆ ಅದಕ್ಕೆ ಕಾಂಗ್ರೆಸ್ ಪಕ್ಷ ಬೆಂಬಲಿಸಲಿದೆ ಎಂದರು.

ಕನರ್ಾಟಕ ರಾಜ್ಯ ರಸ್ತೆ ಅಭಿವೃದ್ದಿ ನಿಗಮದ ಮಾಜಿ ಉಪಾಧ್ಯಕ್ಷ ಮಹಾವೀರ ಮೊಹಿತೆ ಮಾತನಾಡಿ,ಅಂಗನವಾಡಿ ಹಾಗೂ ಆಶಾ ಮತ್ತು ಆರೋಗ್ಯ ಇಲಾಖೆ  ಕಾರ್ಯಕತರ್ೆಯರು ಪ್ರತಿ ಗ್ರಾಮಗಳಿಗೆ ತಾಯಿಂದಿರು ಇದ್ದ ಹಾಗೆ ಅವರು ತಮ್ಮ ಮಕ್ಕಳನ್ನು ಕೊರಾನಾದಿಂದ ರಕ್ಷಣೆ ಮಾಡುವ ಹೊಣೆ ಅವರದಾಗಿದೆ ಎಂದರು. ಕೊರೊನಾ ತಡೆಗಟ್ಟುವಲ್ಲಿ ಪ್ರತಿವೊಂದು ಗ್ರಾಮಸ್ಥರು ಕೈಜೋಡಿಸಬೇಕಾದ ಅನಿವಾರ್ಯತೆ ಇದೆ ಎಂದರು. ಸಿದ್ದಪ್ಪಾ ಮರ್ಯಾಯಿ, ತಾ.ಪಂ ಸದಸ್ಯರಾದ ರಾಜು ಪಾಟೀಲ, ಶಂಕರಗೌಡ ಪಾಟೀಲ, ರಾಜು ಕೋಟಗಿ,ಪಿಡಿಓ ಪ್ರಕಾಶ ಪಾಟೀಲ,ಶಿವು ಮರ್ಯಾಯಿ,ಆನಂದ ಅರಬಳ್ಳಿ,ಬೀರಪ್ಪಾ ನಾಗರಾಳೆ,ಮಾರುತಿ ಹುಲ್ಲೋಳಿ,ಬಸಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.