ಸೋಲಬಕ್ಕನವರಿಗೆ ಸನ್ಮಾನ ಕಾರ್ಯಕ್ರಮ

ಲೋಕದರ್ಶನ ವರದಿ

ಶಿಗ್ಗಾವಿ 28ಃ ಪಟ್ಟಣದ ಸತ್ಯಸಾಯಿ ಛಾಯಾಗ್ರಾಹಕರ ಸಂಘದ ವತಿಯಿಂದ ಇತ್ತೀಚೆಗೆ ಕನರ್ಾಟಕ ಜಾನಪದ ವಿವಿಯಿಂದ ಗೌರವ ಡಾಕ್ಟರೇಟ್ ಪಡೆದ ಗೊಟಗೋಡಿಯ ರಾಕ್ ಗಾರ್ಡನ್ ರೂವಾರಿ ಪ್ರೋ. ಟಿ.ಬಿ.ಸೋಲಬಕ್ಕನವರ ಅವರನ್ನು ಅವರ ಗಾರ್ಡನ್ನಲ್ಲಿ ನೆನಪಿನ ಕಾಣಿಕೆ ನೀಡುವ ಮೂಲಕ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಸತ್ಯಸಾಯಿ ಛಾಯಾಗ್ರಾಹಕರ ಸಂಘದ ಗೌರವಾಧ್ಯಕ್ಷ ರಂಗನಾಥ ಗಾಯಕವಾಡ, ಅಧ್ಯಕ್ಷ ಉದಯಶಂಕರ ಹೊಸಮನಿ, ಉಪಾಧ್ಯಕ್ಷ ಗೋಪಾಲ ಮಾಳವದೆ ಮತ್ತು ಛಾಯಾಗ್ರಾಹಕರಾದ ಪ್ರಭುಗೌಡ ಕರಿಗೌಡ್ರ, ಬಸವರಾಜ.ವಿ.ಎಚ್, ಮಂಜುನಾಥ ಹೊಸಮನಿ, ಸಂತೋಷ ಕಾಟಿಗೇರ, ದತ್ತಣ್ಣ ಗಾಯಕವಾಡ, ರಮೇಶ ಕಲಾಲ್, ಮುತ್ತು ಕ್ಯಾಲಗೊಂಡ, ಫಕ್ಕಿರೇಶ ವಾಲ್ಮೀಕಿ ಸೇರಿದಂತೆ ಛಾಯಾಗ್ರಾಹರು ಉಪಸ್ಥಿತರಿದ್ದರು.