ಫೆ. 24 ರಂದು ಪ್ರತಿಭಟನೆ : ಹೋರಾಟಕ್ಕೆ ವಿವಿಧ ಸಂಟನೆಗಳ ಬೆಂಬಲ
ಕೊಪ್ಪಳ 20: ಕಾರ್ಖಾನೆ ವಿರುದ್ಧ ಹೋರಾಟಕ್ಕೆ ಪಾತೀತ ಬೆಂಬಲ ವ್ಯಕ್ತವಾಗಿದೆ. ಗವಿಶ್ರೀಗಳು ಬೆಂಬಲ ಸೂಚಿಸುತ್ತಲೇ ಹೋರಾಟಗಾರರು ಬುಧವಾರ ಮುಸ್ಲಿಮ್ ಧರ್ಮಗುರುಗಳು ಮತ್ತು ಕ್ರಿಶ್ಚಿಯನ್ ಧರ್ಮಗುರುಗಳನ್ನು ಭೇಟಿ ಮಾಡಿ ಹೋರಾಟಕ್ಕೆ ಆಹ್ವಾನಿಸಿದರು. ಜತೆಗೆ ಆಟೋ ಚಾಲಕರು ಸೇರಿ ವಿವಿಧ ಸಂಟನೆಗಳ ಪದಾಧಿಕಾರಿಗಳು ಸ್ವಯಂ ಪ್ರೇರಿತವಾಗಿ ಆಗಮಿಸಿ ಬೆಂಬಲ ಘೋಷಿಸಿದರು. ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ನಾವು ಎಷ್ಟು ಗಳಿಸಿದರೂ ಅನುಭವಿಸಲು ಆರೋಗ್ಯ ಬೇಕು. ಕಾರ್ಖಾನೆ ಧೂಳಿನಿಂದ ನಮ್ಮ ಆರೋಗ್ಯ ಹಾಳಾಗುತ್ತದೆ. ರೋಗ ಬಂದರೆ ಹಣ ತೆಗೆದುಕೊಂಡು ಏನು ಮಾಡುವುದು ಆರೋಗ್ಯ ಕೊಳ್ಳಲಾಗದು. ಶ್ರೀಗಳ ಸಲಹೆಯಂತೆ ಪಾತೀತವಾಗಿ ನಮ್ಮೂರು ಉಳಿಸಲು ಹೋರಾಟ ಮಾಡೋಣ ಎಂದು ಹೋರಾಟ ಬೆಂಬಲಿಸಿದರು. ಶಾಸಕ ರಾವೇಂದ್ರ ಹಿಟ್ನಾಳ ಮಾತನಾಡಿ, ನಮ್ಮ ಮೇಲೆ ಜವಾಬ್ದಾರಿ ಹೆಚ್ಚಿದೆ. ನಾವೂ ನಿಯೋಗ ಕೊಂಡೊಯ್ದು ಸಿಎಂ ಹಾಗೂ ಡಿಸಿಎಂ ಅವರಿಗೆ ಮನವಿ ಮಾಡಿಕೊಳ್ಳೋಣ. ಪಾತೀತವಾಗಿ ಅವರಿವರನ್ನು ಟೀಕಿಸದೆ ನಮ್ಮ ಹೋರಾಟ ರೂಪಿಸೋಣ. ಕೇವಲ ಬಂದ್ಗೆ ಹೋರಾಟ ಸೀಮಿತವಾಗದಿರಲಿ. ಇದನ್ನು ನಿರಂತರವಾಗಿ ಮುನ್ನಡೆಸೋಣ. ಎಲ್ಲ ಸಂಟನೆಗಳು, ಮುಖಂಡರು, ಮಹಿಳಾ ಸಂಟನೆಗಳು ಸಕ್ರಿಯವಾಗಿ ಹೋರಾಟದಲ್ಲಿ ಭಾಗಿಯಾಗಬೇಕೆಂದು ಮನವಿ ಮಾಡಿದರು. ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್ ಮಾತನಾಡಿ, ಉಕ್ಕು, ಕಬ್ಬಿಣ ಕಾರ್ಖಾನೆಗಳಿಂದ ಪರಿಸರ ಸಾಕಷ್ಟು ಹಾಳಾಗಲಿದೆ. ಈಗಿರುವ ಕಾರ್ಖಾನೆಗಳಿಂದ ನಿತ್ಯ ಜನರು ನರಕ ಅನುಭವಿಸುತ್ತಿದ್ದಾರೆ. ಮತ್ತೊಂದು ದೊಡ್ಡ ಕಾರ್ಖಾನೆ ಬಂದರೆ ನಮ್ಮ ಬದುಕು ಇನ್ನಷ್ಟು ದುಸ್ಥರವಾಗಲಿದೆ. ಇದಕ್ಕೆ ಅವಕಾಶ ನೀಡುವುದು ಬೇಡ. ಶ್ರೀಗಳ ಶಕ್ತಿ ನಮ್ಮೊಂದಿಗಿದೆ ಎಂದು ಉತ್ಸಾಹ ತುಂಬಿದರು. ಧರ್ಮಗುರುಗಳ ಭೇಟಿ ಸಂಚಾಲಕರು ಬುಧವಾರ ಬೆಳಗ್ಗೆ ಗವಿಶ್ರೀಗಳ ಒಪ್ಪಿಗೆ ಪಡೆದ ನಂತರ ಕೊಪ್ಪಳದ ಯೂಸುಪಿಯಾ ಮಸೀದಿಯಲ್ಲಿ ಮುಸ್ಲಿಮ್ ಧರ್ಮಗುರುಗಳನ್ನು ಭೇಟಿ ಮಾಡಿದರು. ಮುಸ್ಲಿಮ್ ಸಮುದಾಯ ನಾಯಕರ ನೇತೃತ್ವದಲ್ಲಿ ಹೋರಾಟಕ್ಕೆ ಮನವಿ ಮಾಡಿದರು. ಮುಫ್ತಿ ನಜೀರ್ ಅಹಮದ್ ತಸ್ಕೀನ್ ಅವರು ಜನಪರ ಹೋರಾಟಕ್ಕೆ ತಾವು ಸದಾ ಬೆನ್ನೆಲುಬಾಗಿ ನಿಲ್ಲುವ ಭರವಸೆ ನೀಡಿದರು. ಬಳಿಕ ಕ್ರಿಶ್ಚಿಯನ್ ಚರ್ಚ್ಗಳ ಕೊಪ್ಪಳ ತಾಲೂಕು ದರ್ಸ್ ಅಸೋಸಿಯೇಷನ್ ಅಧ್ಯಕ್ಷ ಜೆ.ರವಿಕುಮಾರ್ ಸಹ ಹೋರಾಟ ಕಚೇರಿ ಬಳಿ ಆಗಮಿಸಿ ಬೆಂಬಲ ಘೋಷಿಸಿದರು. ತಮ್ಮ ಸಂಟನೆಯಿಂದಲೂ ಹೋರಾಟದಲ್ಲಿ ಭಾಗಿಯಾಗುವುದಾಗಿ ತಿಳಿಸಿದರು. ಜತೆಗೆ ಬಂದ್ ಯಶಸ್ವಿಗೊಳಿಸಲು ಹಲವು ಸಂಟನೆಗಳು ಬೆಂಬಲ ವ್ಯಕ್ತಪಡಿಸಿದವು. 50 ಸಾವಿರ ಜನ ಭಾಗಿ ಸಾಧ್ಯತೆ 24ರ ಸೋಮವಾರದಂದು ಬೆಳಿಗ್ಗೆ 6 ಗಂಟೆಯಿಂದ ಸಾಯಂಕಾಲ 6 ಗಂಟೆವರೆಗೆ ಬಂದ್ ಇರಲಿದೆ. ಆಸ್ಪತ್ರೆ ಒಳ ರೋಗಿಗಳ ವಿಭಾಗ, ತುರ್ತು ಸೇವಾ ಸೇವೆಗಳು ಮಾತ್ರ ಇರಲಿವೆ. ಉಳಿದಂತೆ ಎಲ್ಲವೂ ಬಂದ್ ಆಗಲಿದೆ. ಬೆಳಿಗ್ಗೆ 9 ಗಂಟೆಗೆ ಗವಿಮಠದಿಂದ ಪ್ರತಿಭಟನೆ ಆರಂಭವಾಗಲಿದ್ದು, ಗಡಿಯಾರ ಕಂಬ ಸರ್ಕಲ್, ಜವಾಹರ ರೋಡ್, ಅಶೋಕ ಸರ್ಕಲ್ ನಿಂದ ಸಾರ್ವಜನಿಕ ಮೈದಾನಕ್ಕೆ ಬರಲಿದೆ. ಅಲ್ಲಿ ಎಲ್ಲ ನಾಯಕರು ಪ್ರತಿಭಟನೆ ಉದ್ದೇಶಿಸಿ ಮಾತನಾಡುವರು. ಸುಮಾರು 50 ಸಾವಿರ ಜನ ಸೇರಲಿದ್ದು ಸರ್ಕಾರಕ್ಕೆ ಬಿಸಿ ಮುಟ್ಟಿಸಲಿದ್ದಾರೆ.