ಫೆ. 16 ರಂದು ಹಾವೇರಿ ಜಿಲ್ಲಾ ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘದ ಉದ್ಘಾಟನೆ
ಹಾವೇರಿ 13: ಕರ್ನಾಟಕ ರಾಜ್ಯ ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘ(ರಿ)ದ ಹಾವೇರಿ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭದ ಕಾರ್ಯಕ್ರಮವು ಇದೇ ಫೆ. 16 ರಂದು ಬೆಳಿಗ್ಗೆ 10.30ಕ್ಕೆ ರಾಣೇಬೆನ್ನೂರು ನಗರದ ಬಿಎಜಿಎಸ್‌ಎಸ್ ಕಲಾ ಮತ್ತು ವಾಣಿಜ್ಯ ಮಹಿಳಾ ವಿದ್ಯಾಲಯದ ಸಭಾಂಗಣದಲ್ಲಿ ಜರುಗಲಿದೆ ಎಂದು ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘ(ರಿ)ದ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ. ಪರಶುರಾಮ ಈ ಗಚ್ಚಿನಮನಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂದು ಕಾರ್ಯಕ್ರಮದ ಉದ್ಘಾಟನೆಯನ್ನು ಉಪಸಭಾಪತಿಗಳು ಹಾಗೂ ಶಾಸಕರಾದ ರುದ್ರ್ಪ ಲಮಾಣಿಯವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಭಾಪತಿಗಳಾದ ಬಸವರಾಜು ಹೊರಟ್ಟಿ, ಶಾಸಕರಾದ ಬಸವರಾಜ ಶಿವಣ್ಣನವರ, ಶ್ರೀನಿವಾಸ ಮಾನೆ, ಯು.ಬಿ.ಬಣಕಾರ, ಪ್ರಕಾಶ ಕೋಳಿವಾಡ, ಯಾಸೀರ ಅಹ್ಮದಖಾನ್ ಪಠಾಣ, ಪ್ರೊ.ಎಸ್.ವಹಿ.ಸಂಕನೂರ, ರಾಜ್ಯ ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘ(ರಿ)ದ ಅಧ್ಯಕ್ಷರಾದ ಡಾ.ಹರೀಶ್ ಎನ್., ನಗರಸಭೆ ಅಧ್ಯಕ್ಷರಾದ ಶ್ರೀಮತಿ ಚಂಪಕ್ಕ ರಮೇಶ ಬಿಸ್ಲಳ್ಳಿ, ಪ್ರಭಾರ ಉಪನಿರ್ದೇಶಕರಾದ ಆನಂದ ಮುದಕಮ್ಮನವರ, ಬಿಎಜಿಎಸ್‌ಎಸ್ ಆಡಳಿತಾಧಿಕಾರಿ, ಕಾರ್ಯದರ್ಶಿಗಳಾದ ಡಾ.ಆರ್.ಎಂ. ಕುಬೇರ್ಪ ಕಸಾಪ ಜಿಲ್ಲಾ ಅಧ್ಯಕ್ಷ ಲಿಂಗಯ್ಯ ಹಿರೇಮಠ ಆಗಮಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ. ಪರಶುರಾಮ ಈ ಗಚ್ಚಿನಮನಿ ವಹಿಸಿಕೊಳ್ಳಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಗೌರವಾಧ್ಯಕ್ಷ ಶ್ರೀಕಂಠಯ್ಯ, ಕಾರ್ಯಧ್ಯಕ್ಷ ಎಂ.ಎಸ್.ಆನಂದಕರ್, ಪ್ರಧಾನ ಕಾರ್ಯದರ್ಶಿ ಆನಂದ ಎಂ., ಕೋಶಾಧ್ಯಕ್ಷ ಬಿ.ಎಸ್. ಉಮೇಶ ಆಗಮಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಹಾವೇರಿ ಜಿಲ್ಲಾ ಪ್ರಾಚಾರ್ಯರರ ಸಂಘದ ಅಧ್ಯಕ್ಷರಾದ ಡಾ.ನಾಗರಾಜ ದ್ಯಾಮನಕೊಪ್ಪ, ಜಿಲ್ಲಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಎಸ್.ಎಸ್.ನಿಸ್ಸೀಮಗೌಡ್ರ, ಜಿಲ್ಲಾ ಪದವಿಪೂರ್ವ ಕಾಲೇಜಿನ ನೌಕರರ ಸಂಘದ ಅಧ್ಯಕ್ಷರಾದ ಶಿವಾನಂದ ಬೆನ್ನೂರ, ದೈಹಿಕ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ರಾಜೇಂದ್ರಕುಮಾರ ಕರೇಗೌಡ್ರ, ಜಾನಪದ ಸಿಂಡಿಕೇಟ್ ಸದಸ್ಯರಾದ ರಮೇಶ ಲಮಾಣಿ, ಜಿಲ್ಲಾ ಪದವಿಪೂರ್ವ ಕಾಲೇಜಿನ ನೌಕರರ ಸಂಘದ ಕಾರ್ಯದರ್ಶಿ ಎಸ್.ಬಿ.ಸಂಗಾಪುರ, ಜಿಲ್ಲಾ ಸಮಾಧೀಷ್ಟರಾದ ಪ್ರಮೋದ ನಲವಾಗಲ, ಎನ್.ಎಸ್.ಎಸ್.ವಿಭಾಗೀಯ ಅಧಿಕಾರಿಗಳಾದ ರವಿಕುಮಾರ ಅಂಬೋರೆ, ಎಂ.ಜಿ. ಸತೀಶ, ರಾಘವೇಂದ್ರ ಬಾಸೂರು, ಹೆಚ್.ಬಿ.ಪಟ್ಟಣಶೆಟ್ಟಿ, ಡಾ. ಸುರೇಶ ಬಣಕಾರ ಮುಂತಾದವರು ಆಗಮಿಸಲಿದ್ದಾರೆಂದು ತಿಳಿಸಿದ್ದಾರೆ.