ಫೆ.26 ವೈವಿಧ್ಯಮಯ ಶಿವಲಿಂಗ ದರ್ಶನ : ಯೋಗಿನಿ ಅಕ್ಕನವರು
ಕೊಪ್ಪಳ 22 : ಮಹಾಶಿವರಾತ್ರಿ ಪ್ರಯುಕ್ತ ವಿಶ್ವಸದ್ಭಾವನಾ ಶಾಂತಿ ಯಾತ್ರೆಯನ್ನು ದಿನ.23 ಭಾನುವಾರ ಬೆಳಿಗ್ಗೆ 8 ಗಂಟೆಗೆ ಏರಿ್ಡಸಲಾಗಿದೆ ದ್ವಾದಶ ಜ್ಯೋತಿರ್ಲಿಂಗಗಳೊಂದಿಗೆ ಶಾಂತಿಯಾತ್ರೆ ಸಾಗುತ್ತದೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಯೋಗಿನಿ ಅಕ್ಕನವರು ಹೇಳಿದರು.ಅವರು ಶನಿವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಈ ವರ್ಷ ಮಹಾಶಿವರಾತ್ರಿ ಪ್ರಯುಕ್ತ ಕೊಪ್ಪಳ ನಗರದಲ್ಲಿ ್ರ್ರಥಮ ಬಾರಿಗೆ ವೈವಿಧ್ಯಮಯ ಶಿವಲಿಂಗ ದರ್ಶನ ಉದ್ಭವಲಿಂಗು,ಅಂತರಲಿಂಗು,ಸಹಸ್ರಲಿಂಗು,ಈ ಮೂರು ಲಿಂಗುಗಳ ದರ್ಶನವನ್ನು ದಿ. 26,27,28 ಫೆಬ್ರವರಿ 2025 ರಂದು ಏರಿ್ಡಸಲಾಗಿದೆ. ಪ್ರತಿದಿನ ಸಂಜೆ 5 ರಿಂದ 9 ಗಂಟೆಯವರೆಗೆ ಹೊಸಪೇಟೆ ರಸ್ತೆಯಲ್ಲಿರುವ ಈಶ್ವರಗುಡಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.ದಿ.26 ಮಹಾಶಿವರಾತ್ರಿ ಉದ್ಘಾಟನಾ ಮಹೋತ್ಸವಕ್ಕೆ ಸಂಸದರಾದ ಕೆ.ರಾಜಶೇಖರ ಹಿಟ್ನಾಳ, ಎಂಎಲ್ಸಿ ಹೇಮಲತಾ ನಾಯಕ, ಸಿವಿಲ್ ನ್ಯಾಯಾಧೀಶರಾದ ಭಾಗ್ಯಲಕ್ಷ್ಮೀ, ಅಪರ ಜಿಲ್ಲಾಧಿಕಾರಿಗಳಾದ ಸಿದ್ದರಾಮೇಶ್ವರ, ಡಾ.ಬಸವರಾಜ್ ಕ್ಯಾವಟರ, ಕೆಎಸ್ ಹಾಸ್ಪಿಟಲ್, ಮುಂತಾದವರು ಪಾಲ್ಗೊಳ್ಳುವರು.ದಿ.27 ಪರಿಸರ ಸಂರಕ್ಷಣಾ ಮಹೋತ್ಸವದಡಿಯಲ್ಲಿ ಸ್ವಚ್ಛ ಮನ ಸ್ವಚ್ಛ ಜೀವನ, ಕೊಪ್ಪಳ ನಗರದ ಪೌರಕಾರ್ಮಿಕರಿಗೆ ಸನ್ಮಾನ, ಕಾರ್ಯಕ್ರಮದಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ನಗರ ಸಭೆ ಅಧ್ಯಕ್ಷ ಅಮಜದ್ ಪಟೇಲ್, ಉಪಾಧ್ಯಕ್ಷರಾದ ಅಶ್ವಿನಿ ಗದಗಿನಮಠ, ಪೌರಾಯುಕ್ತ ಗಣಪತಿ ಪಾಟೀಲ್ ಮುಖಂಡರಾದ ಸಿ.ವಿ. ಚಂದ್ರಶೇಖರ ಮುಂತಾದವರು ಪಾಲ್ಗೊಳ್ಳುವರು.ಮಾರ್ಚ್ 1 ರಿಂದ10 ರ ವರೆಗೆ ಶಿವಧ್ಯಾನ ಶಿಬಿರವು ಸಂಜೆ 6.30 ರಿಂದ 7.30 ರವರೆಗೆ ಈಶ್ವರ ಗುಡಿ ಆವರಣದಲ್ಲಿ ಜರುಗುವುದು.ಸುದ್ದಿಗೋಷ್ಠಿಯಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸ್ನೇಹ ಅಕ್ಕನವರು ಉಪಸ್ಥಿತರಿದ್ದರು.