ಫೆ. 20 ರಿಂದ 22 ಹಜ್ರತ್ ಮರ್ದಾನ್ ಗೈಬ್ ಉರುಸ್‌

Feb. 20 to 22 Hazrat Mardan Ghaib Urus

ಫೆ. 20 ರಿಂದ 22 ಹಜ್ರತ್ ಮರ್ದಾನ್ ಗೈಬ್ ಉರುಸ್‌

ಕೊಪ್ಪಳ 19: ಹಜ್ರತ್ ಮರ್ದಾನ್ ಗೈಬ್ ಉರುಸ್ ಕಾರ್ಯಕ್ರಮ ಇದೇ ಫೆಬ್ರವರಿ 20 ರಿಂದ 22 ರವರೆಗೆ ಮೂರು ದಿನಗಳ ಕಾಲ ಜರುಗುತ್ತದೆ ಎಂದು ಹಜ್ರತ್ ಮರ್ದಾನ್ ಗೈಬ್ ದರ್ಗಾ ಕಮಿಟಿ ಅಧ್ಯಕ್ಷ ಪಾಶ ಕಾಟನ್ ಹೇಳಿದರು. ಅವರು ಬುಧವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಫೆಬ್ರುವರಿ 20 ರಂದು ಗಂಧ, ಫೆಬ್ರುವರಿ 21ರಂದು ಉರುಸ್, ರಕ್ತದಾನ ಶಿಬಿರ, ಫೆಬ್ರವರಿ 22ರಂದು ಪಾತೆಹಾ ಖಾನಿ, ಮೂರು ದಿನಗಳ ಕಾಲ ಭಕ್ತಾದಿಗಳಿಗೆ ಅನ್ನ ಸಂತರೆ​‍್ಣ ಇರುತ್ತದೆ.ದಿವ್ಯ ಸಾನಿಧ್ಯವನ್ನು ಹಜರತ್ ಅಲ್ಲಮಾ ಮೌಲಾನ ಮುಪ್ತಿ ಮಹಮ್ಮದ್ ನಜೀರ್ ಅಹ್ಮದ್ ಖಾದ್ರಿ ತಸ್ಕೀನಿ, ಗವಿಮಠದ ಗವಿಸಿದ್ದೇಶ್ವರ ಮಹಾಸ್ವಾಮಿಗಳು ವಹಿಸುವರು. ಉದ್ಘಾಟನೆಯನ್ನು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ನೆರವೇರಿಸುವರು, ಅಧ್ಯಕ್ಷತೆಯನ್ನು ಹಜ್ರತ್ ಮರ್ದಾನ್ ಗೈಬ್ ದರ್ಗಾ ಕಮಿಟಿ ಅಧ್ಯಕ್ಷ ಪಾಶ ಕಾಟನ್   ವಹಿಸುವರು.ವಿಶೇಷ ಆಹ್ವಾನಿತರಾಗಿ ಅಲ್ಪಸಂಖ್ಯಾತರ ಮತ್ತು ವಕ್ಫ್‌ ಸಚಿವ ಬಿ.ಜಡ್‌. ಜಮೀರ್ ಅಹ್ಮದ್ ಖಾನ್, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಸಂಸದ ಕೆ. ರಾಜಶೇಖರ್ ಹಿಟ್ನಾಳ್, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ರಾಜ್ಯ ವಕ್ಫ್‌ ಮಂಡಳಿ ಮಾಜಿ ಅಧ್ಯಕ್ಷ ಅನ್ವರ್ ಪಾಶ ಆಗಮಿಸುವರು.ಮುಖ್ಯ ಅತಿಥಿಗಳಾಗಿ ಮಾಜಿ ಸಂಸದ ಸಂಗಣ್ಣ ಕರಡಿ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಶಾಸಕರಾದ ಜನಾರ್ದನ ರೆಡ್ಡಿ, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಸೇರಿದಂತೆ ಅನೇಕರು ಪಾಲ್ಗೊಳ್ಳುವರು.ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಮಾತನಾಡಿ ಹಜರತ್ ಮರ್ದಾನ್ ಗೈಬ್ ಉರುಸ್ ಮೂರು ದಿನಗಳ ಕಾಲ ಸಂಭ್ರಮದಿಂದ ಜರುಗುವುದು ಈ ಒಂದು ಕಾರ್ಯಕ್ರಮದಲ್ಲಿ ಎಲ್ಲಾ ಸಮುದಾಯದವರು ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ದರ್ಗಾ ಕಮಿಟಿ ಉಪಾಧ್ಯಕ್ಷ ಬಾಬಾ ಅರಗಂಜಿ, ಮುನವರ್ ಅಲಿ, ಆಯುಬ್ ಅಡ್ಡೆವಾಲೆ, ನಗರಸಭೆ ಮಾಜಿ ಸದಸ್ಯ ಮಾನ್ವಿ ಪಾಷಾ, ಯುವ ಮುಖಂಡ ಸಲೀಂ ಅಳವಂಡಿ ಉಪಸ್ಥಿತರಿದ್ದರು.