ಫೆ. 13 ರಂದು ಕೇಂದ್ರ ಹಾಗೂ ರಾಜ್ಯ ಸಕರ್ಾರದ ವಿರುದ್ಧ ಹೋರಾಟ

ಕಾರವಾರ 16: ರಾಜ್ಯದ ರೈತರು, ಕೃಷಿ ಕಾಮರ್ಿಕರು ಸಮುದಾಯದ ವಿವಿಧ ಆಶೋತ್ತರಗಳನ್ನು ಈಡೇರಿಕೆಗೆ ಒತ್ತಾಯಿಸಿ ಫೆ.13 ರಂದು ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಕನರ್ಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಎ.ಲಕ್ಷ್ಮಿನಾರಾಯಣ ಗೌಡ ಹೇಳಿದರು.

ಅವರು ನಗರದಲ್ಲಿ ಸೋಮವಾರ  ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕೇಂದ್ರದ ಬಿಜೆಪಿ ಸರಕಾರ ಜನ ಹಿತದ ವಿರುದ್ಧ ಕೆಲಸ ಮಾಡುತ್ತಿವೆ. ರೈತರ ನೆರವಿಗೆ ಬರುತ್ತಿಲ್ಲ. ರಾಜ್ಯದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರ ರೈತರ ಸಾಲ ಮನ್ನಾ ಮಾಡುವ ಕ್ರಿಯೆ ಚುರುಕುಗೊಳಿಸಿಲ್ಲ.  ಸರಕಾರಗಳ ತಪ್ಪು ನೀತಿಯಿಂದ ಬೇಸತ್ತು ರಾಜ್ಯದ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ.ಸರಕಾರಗಳು ರೈತರ ಹಿತದ ದೃಷ್ಠಿಯಿಂದ ಕಾರ್ಯಕ್ರಮ ರೂಪಿಸಬೇಕು. ಈ ದಿಸೆಯಲ್ಲಿ ಸರಕಾರದ ಸ್ಪಷ್ಟ ಚಿತ್ರಣ ಹಾಗೂ ರೈತರಿಗೆ ಆಶಾ ಭಾವನೆ ಮೂಡಿಸುವ ಉದ್ದೇಶದಿಂದ ವಿಶ್ವ ರೈತ ನಾಯಕ ಪ್ರೊ.ಎಂ.ಡಿ.ನಂಜುಂಡ ಸ್ವಾಮಿ ಜನ್ಮ ದಿನಾಚರಣೆ ಸಂದರ್ಭವನ್ನು  ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದರ ಮೂಲಕ ವಿಶಿಷ್ಠವಾಗಿ ಆಚರಿಸಲು ಸಂಘವು ತೀಮರ್ಾನ ಕೈಗೊಂಡಿದೆ ಎಂದರು.

ಅಂದು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ರೈತರ ಪರವಾಗಿ ವಿವಿಧ ಬೇಡಿಕೆಗಳನ್ವಯ ಕಾರ್ಯಕ್ರಮ ಜಾರಿಗೊಳಿಸಲು ಒತ್ತಾಯ ಪಡಿಸಲಾಗುವುದು.ಮುಖ್ಯವಾಗಿ ಮಹದಾಯಿ ಕಳಸಾ-ಬಂಡೂರಿ ಯೋಜನೆ ಅನುಷ್ಠಾನಗೊಳಿಸಿ,ಕಾನೂನಾತ್ಮಕವಾಗಿ ನಾಲ್ಕು ಟಿ.ಎಂ.ಸಿ.ನೀರನ್ನು ಕೂಡಲೇ ಮಲಪ್ರಭೆಗೆ ಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳದಿದ್ದರೆ,ಉಗ್ರ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಲಕ್ಷ್ಮಿ ನಾರಾಯಣ ಹೇಳಿದರು. 

ರಾಜ್ಯದ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಬರಗಾಲದಿಂದ ಈ ಭಾಗದ ರೈತರು ಸಂಕಷ್ಟದಲ್ಲಿದ್ದಾರೆ. 2018-19 ನೇ ಸಾಲಿನ ಇನ್-ಪುಟ್ ಸಬ್ಸಿಡಿ,ಬೆಳೆ ಹಾನಿ ಪರಿಹಾರವನ್ನು ಕೂಡಲೇ ಕೇಂದ್ರ ಸರಕಾರದ ನಿಯಮಾವಳಿ ಪ್ರಕಾರ ಬಿಡುಗಡೆ ಮಾಡಬೇಕು. ಕೇಂದ್ರದ ಫಸಲ್ ಭೀಮಾ ಯೋಜನೆಯ ನ್ಯೂನತೆಯನ್ನು ಸರಿಪಡಿಸಬೇಕು. ರೈತರಿಗೆ ಕೇಂದ್ರ ಸರಕಾರದ ನಿಯಮದಂತೆ,ಬೆಳೆ ವಿಮೆ ಹಣ ಮಂಜೂರಿ ಮಾಡಬೇಕು.ರೈತರು ಬೆಳೆದ ಬೆಳೆಗೆ ಯೋಗ್ಯ ಬೆಂಬಲ ಬೆಲೆ ನೀಡಿ, ಕಡಲೆ, ಗೋದಿ, ಜೋಳ, ಹತ್ತಿ, ಮೆಣಸಿನಕಾಯಿ ಮುಂತಾದ ಸಂಪೂರ್ಣ ಬೆಳೆಯನ್ನು ಖರೀದಿಸಲು ಸರಕಾರವೇ ಖರೀದಿ ಕೇಂದ್ರಗಳನ್ನು ತೆರೆಯಲು ಒತ್ತಾಯಿಸಲಾಗುವುದು ಎಂದರು.

ಉದ್ಯೋಗ ಖಾತ್ರಿ ಯೋಜನೆಯನ್ನು ಗ್ರಾಮಾಂತರ ಪ್ರದೇಶದ ಜೊತೆಗೆ ನವಲಗಾಂವ್, ಅಣ್ಣಿಗೇರಿ, ನರಗುಂದ, ರೋಣ, ಬಾದಾಮಿ, ಕುಂದಗೋಳ್, ಕಲಘಟಗಿ, ಗಜೇಂದ್ರಗಡ್, ಹುಬ್ಬಳ್ಳಿ, ಧಾರವಾಡ, ಬೈಲಹೊಂಗಲ, ಸವದತ್ತಿ, ರಾಮದುರ್ಗ, ಮುನವಳ್ಳಿ, ಯರಗಡ್ಡಿ ಮುಂತಾದ ಪಟ್ಟಣ ಪ್ರದೇಶದಲ್ಲಿರುವ ಕೃಷಿ ಕಾಮರ್ಿಕರಿಗೂ ಯೋಜನೆಯಡಿ ಕೆಲಸ ನೀಡಬೇಕು. ಈ ಎಲ್ಲ ಬೇಡಿಕೆಗಳ ಬಗ್ಗೆ ಪ್ರೊ.ಎಂ.ಡಿ.ನಂಜುಂಡ ಸ್ವಾಮಿ ಜನ್ಮ ದಿನಾಚರಣೆ ಒಳಗೆ ಸರಕಾರ ಸೂಕ್ತ ತೀಮರ್ಾನ ಕೈಗೊಳ್ಳದಿದ್ದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದರ ಜೊತೆಗೆ ಅನಿದರ್ಿಷ್ಟಾವಧಿಯವರೆಗೆ ಹೋರಾಟ ನಡೆಸಲು ರೈತರು ತೀಮರ್ಾನ ತೆಗೆದುಕೊಳ್ಳಲಿದ್ದಾರೆ ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿ ರೈತರು ಸಮಸ್ಯೆ ಉಲ್ಬಣ :

ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ಯಲ್ಲಾಪುರ,ಮುಂಡಗೋಡ್,ಹಳಿಯಾಳ, ಶಿರಸಿ,ಸಿದ್ಧಾಪುರ ಮುಂತಾದೆಡೆ ರೈತಾಪಿ ಜನರು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಯೋಜನೆಗಳ ಲಾಭ ಇಲ್ಲಿನ ರೈತರಿಗೆ ತ್ವರಿತಗತಿಯಲ್ಲಿ ಸಿಗುತ್ತಿಲ್ಲ ಕಾರವಾರದ ಕಡಲತೀರದ ಮೇಲೆ ಹೊಟೆಲ್,ರೆಸಾಟರ್್ ನಿಮರ್ಿಸಿ ಬಂಡವಾಳಶಾಹಿಗಳಿಗೆ ಲಾಭ ಮಾಡಿಕೊಡಲಾಗುತ್ತಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಸರಕಾರದ ಜೊತೆ ಚಚರ್ಿಸುವಾಗ ಪ್ರಸ್ತಾಪಿಸಲಾಗುವುದು. ಮುಂದಿನ ದಿನಗಳಲ್ಲಿ ರೈತ ಸಂಘದವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಪ್ರೊ.ನಂಜುಂಡಸ್ವಾಮಿ ಕನಸು : 

ಕನರ್ಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರ ಕಾರಿನ ಮೇಲೆ ಹಸಿರು ಬಣ್ಣದ ವಿದ್ಯುತ್ ದೀಪ ಅಳವಡಿಸಿದ್ದರ ಬಗ್ಗೆ ಮಾಧ್ಯಮದವರು ಪ್ರಸ್ತಾಪಿಸಿದಾಗ, ರೈತಪರ ಹೋರಾಟಗಾರ  ಪ್ರೊ.ಎಂ.ಡಿ.ನಂಜುಂಡ ಸ್ವಾಮಿಯವರು ರೈತರ ಸ್ವಾವಲಂಬಿ ಸ್ವಾಭಿಮಾನದ ಜೀವನದ ಬಗ್ಗೆ ಅನೇಕ ಕನಸು ಕಂಡಿದ್ದರು. ಕಾರಿನ ಮೇಲೆ ಹಸಿರು ದೀಪ ಹಾಕಿಕೊಳ್ಳಿ. ದೇಶದ ಜನರಿಗೆ ಅನ್ನ ಕೊಡುವ ರೈತ ಬಳಸುವ ಕಾರಿನ ಮೇಲೆ ಸಚಿವರಂತೆ ಹಸಿರು ದೀಪ ಅಳವಡಿಸಿಕೊಳ್ಳುವುದು ಸ್ವಾಭಿಮಾನದ ಸಂಕೇತ ಎಂದು ಅವರು ಹೇಳುತ್ತಿದ್ದರು. ಅವರ ಕಾಲದಿಂದಲೂ ರಾಜ್ಯಾಧ್ಯಕ್ಷರು,ಜಿಲ್ಲಾಧ್ಯಕ್ಷರು ಹಸಿರು ಗೂಟಿನ ಕಾರು ಬಳಸಿಕೊಂಡು ಬಂದಿದ್ದಾರೆ. ಅವರ ತತ್ವ,ಸಿದ್ಧಾಂತವನ್ನು ನಂಬಿದ ನಮಗೆ ಭಾವನಾತ್ಮ ನಂಟು ಇರುವುದರಿಂದ ಅದನ್ನು ಕಿತ್ತೆಸೆಯಲು ಮನಸ್ಸಾಗುತ್ತಿಲ್ಲ. ಇದರ ಬಗ್ಗೆ ನಾವು ಜೈಲಿಗೆ ಹೋಗಲೂ ಸಿದ್ಧರಿದ್ದೇವೆ ಎಂದು ರಾಜ್ಯಾಧ್ಯಕ್ಷ ಜಿ.ಎ.ಲಕ್ಷ್ಮಿನಾರಾಯಣ ಗೌಡ ಪ್ರತಿಕ್ರಿಯಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದಶರ್ಿ ಟಿ. ಪುಟ್ಟಯ್ಯ, ಸಂಘಟನಾ ಕಾರ್ಯದಶರ್ಿ ಸೈಯದ್ ಬದೀರ್,ಜ್ಯೋತಿ ಕನಕಮ್ಮನವರ್, ಸಂಶದ್ ಬೇಗಂ, ಪಾರ್ವತಿ ರಾಥೋಡ್,ದಿವಾಕರ ಇದ್ದರು.