ರೈತರಿಗೆ ತಕ್ಕ ಪರಿಹಾರ ನೀಡಬೇಕು: ಶ್ರೀಕಾಂತ ದುಂಡಿಗೌಡ್ರ
ಶಿಗ್ಗಾವಿ 26 : ಬೆವರು ಹರಿಸಿ ಹೊಲದಲ್ಲಿ ಬೆಳೆದು ಸಾವಿರಾರು ರೂಪಾಯಿಯನ್ನು ಕರ್ಚು ಮಾಡಿ ಇನ್ನೇನು ದುಡಿದ ಶ್ರಮಕ್ಕೆ ಫಲವನ್ನು ಪಡಿಯಬೇಕು ಎಂಬ ಸಮಯದಲ್ಲಿ ಹೊಲದಲ್ಲಿ ಮಶಿನಿಗೆ ಹಾಕಿ ಕಾಳನ್ನು ತೆಗೆಯಲು ತಯಾರಾದ ಗೋವಿನಜೋಳದ ರಾಶಿಗೆ ಬೆಂಕಿ ಹಚ್ಚಿ ನಾಶಮಾಡಿರುವುದು ಖಂಡನೀಯ ಎಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು. ತಾಲೂಕಿನ ಮುಗಳಿ ಗ್ರಾಮದ ರೈತ ಮಹದೇವಪ್ಪ ತಳವಾರ ಹೊಲದಲ್ಲಿ ಸುಮಾರು 5 ಲಕ್ಷ ರೂಪಾಯಿಯ ಗೋವಿನ ಜೋಳದ ರಾಶಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಸುಟ್ಟಿರುವ ಅವರ ಮನೆಗೆ ತೆರಳಿ ಧೈರ್ಯವನ್ನು ಹೇಳಿ ಮಾತನಾಡಿದ ಅವರು ಈ ಒಂದು ಘಟನೆಯನ್ನು ಪೊಲೀಸ್ ಇಲಾಖೆ ಹಾಗೂ ತಾಲೂಕ ಆಡಳಿತ ಹೆಚ್ಚಿನ ಆಸಕ್ತಿ ತೆಗೆದುಕೊಂಡು ರೈತನಿಗೆ ತಕ್ಕ ಪರಿಹಾರವನ್ನು ದೊರಕಿಸಬೇಕು ಮತ್ತು ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಯನ್ನು ನೀಡಿ ಇಂತಹ ಘಟನೆಗಳು ಮರುಕಳಿಸದಂತೆ ಶಿಕ್ಷಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿಗ್ರಾಮ ಪಂಚಾಯತಿ ಸದಸ್ಯರಾದ ಶಿವನಾನಂದ ಬಿಶೆಟ್ಟಿಶಂಕರ ಗೊಬ್ಬಿ, ನಾಗೇಶ ಅಣ್ಣಿಗೇರಿಯಲ್ಲಪ್ಪ ಹುಕ್ಕೇರಿ ,ನಿಂಗಪ್ಪ ದುಂಡಪ್ಪನವರ, ಈಶ್ವರಗೌಡ ಪಾಟೀಲ ಹಾಗೂ ಗ್ರಾಮದ ರೈತರು ಇದ್ದರು.