ರೈಲ್ವೆ ಟ್ರಾಕ್ ಬದಲಾವಣೆಗೆ ರೈತರ ಪ್ರತಿಭಟನೆ

Farmers protest against railway track change

ರೈಲ್ವೆ ಟ್ರಾಕ್ ಬದಲಾವಣೆಗೆ ರೈತರ ಪ್ರತಿಭಟನೆ

ಬಳ್ಳಾರಿ 20:  ನಗರದಲ್ಲಿ ಜಿಂದಾಲ್ ಕಾರ್ಖಾನೆಯವರಿಗಾಗಿ ಇಲ್ಲಿಗೆ ಸಮೀಪದ ಹದ್ದಿನಗುಂಡುನಿಂದ ಹಲಕುಂದಿವರೆಗೆ ನೂತನವಾಗಿ ನಿರ್ಮಾಣ ಮಾಡಲು ಉದ್ದೇಶಿಸಿರುವ ರೈಲ್ವೇ ಮಾರ್ಗವನ್ನು ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿ ಇಂದು ಅಂದ್ರಾಳ್, ಬಿ.ಗೋನಾಳ್ , ಬೊಬ್ಬಕುಂಟೆ ಹಾಗು ಇತರೆ ಗ್ರಾಮಗಳ ರೈತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಮನವಿ ಮಾಡಿದರು.ಈ ರೈಲ್ವೇ ಮಾರ್ಗ ನಿರ್ಮಾಣಕ್ಕೆ ಸರ್ವೇ ಕಾರ್ಯ ನಡೆಯುತ್ತಿದ್ದು ಈ ಪ್ರದೇಶ ನಗರ ವ್ಯಾಪ್ತಿಗೆ ಬರುತ್ತಿದೆ. ಇದರಿಂದ ಕೇವಲ 1 ಅಥವಾ 2 ಎಕರೆ ಅದಕ್ಕಿಂತಲೂ ಕಡಿಮೆ ವಿಸ್ತೀರ್ಣದ ತುಂಡು ಭೂಮಿ ಹೊಂದಿದ್ದು ಇದುವೇ ನಮ್ಮ ಜೀವನಾಧಾರಕ್ಕಿದೆ.ಹೆಚ್ಚಿನ ಸಂಖ್ಯೆಯಲ್ಲಿ ಎಸ್‌.ಸಿ, ಎಸ್‌.ಟಿ. ಸಣ್ಣ ರೈತರು ಇದ್ದೇವೆ.  

ಇಲ್ಲಿ ರೈಲು ಮಾರ್ಗ ಬಂದರೆ ನಮ್ಮ ಜೀವನಕ್ಕೆ ಸಮಸ್ಯೆ ಆಗಲಿದೆ. ಈಗಾಗಲೇ ಬಳ್ಳಾರಿ ಸುತ್ತಮುತ್ತ ರಿಂಗ್ ರಸ್ತೆ, ಬೈಪಾಸ್ ರಸ್ತೆಗೆ ನಾವು ಇದ್ದ ಜಮೀನು ನೀಡಿ ಈಗಾಗಲೇ ಸಂಕಷ್ಟಕ್ಕೆ ಒಳಗಾಗಿದ್ದೇವೆ.ಅದಕ್ಕಾಗಿ ಗ್ರಾಮೀಣ ಪ್ರದೇಶವಾದ ಹಗರಿ ರೈಲ್ವೇ ನಿಲ್ದಾಣ ದಾಟಿದ ನಂತರ ಟ್ರಾಕ್‌ನ್ನು (ಹಗರಿ ದಾಟಿದ ನಂತರ ಓಬಳಾಪುರ ಮಾರ್ಗಕ್ಕೆ) ರಿಂಗ್ ಮಾದರಿಯಾಗಿ ಓಬಳಾಪುರ ಗ್ರಾಮದ ಹತ್ತಿರ ಇರುವರೈಲ್ವೇ ಟ್ರಾಕ್‌ಗೆ ಹೊಂದಾಣಿಕೆಯಾಗುವಂತೆ ಟ್ರಾಕ್ ನ ಮಾರ್ಗವನ್ನು ಬದಲಾವಣೆ ಮಾಡಬೇಕೆಂದು ಕೊಡಬೇಕೆಂದು ರೈಲ್ವೇ ಸಚಿವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಶಶಿಕಾಳ, ರೈತ ಮುಖಂಡರಾದ ಶಿವರುದ್ರ​‍್ಪ ಸುತ್ತಮುತ್ತಲಿನ ಗ್ರಾಮಸ್ಥರು ಇತರರು ಭಾಗವಹಿಸಿದ್ದರು.