ಲೋಕದರ್ಶನ ವರದಿ
ಬ್ಯಾಡಗಿ08: ರಾಜ್ಯದಲ್ಲಿ ಇದೀಗ ವಾಟರ್ ಎಮರ್ಜನ್ಸಿ ಘೋಷಣೆಯಾಗಿದೆ, ಸಕರ್ಾರಗಳಿಗೆ ಇದರ ಬಿಸಿ ತಲುಪುತ್ತಿಲ್ಲವೇಕೆ ಎಂಬುದು ಅರ್ಥವಾಗುತ್ತಿಲ್ಲ..? ಕೆರೆ ತುಂಬಿಸಬೇಕೆಂಬ ರೈತರ ಬೇಡಿಕೆ ನ್ಯಾಯಸಮ್ಮತವಾಗಿದೆ ಬೇಡಿಕೆ ಈಡೇರಿಸಿದ ಸಕರ್ಾರಗಳನ್ನು ಸಿರಿಗೆರೆ ಮಠ ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಸಾಣೇಹಳ್ಳಿ ಸಿರಿಗೆರೆ ಮಠದ ಪಂಡಿತಾರಾಧ್ಯಶ್ರೀಗಳು ಎಚ್ಚರಿಸಿದರು.
ಮೂಲನಕ್ಷೆಯಂತೆ ಅಸುಂಡಿ ಜಲಾನಯನದಡಿಯಲ್ಲಿ ಬ್ಯಾಡಗಿ ಮತ್ತು ಹಾವೇರಿ ತಾಲೂಕಿನ ಒಟ್ಟು 36 ಗ್ರಾಮಗಳ ಕೆರೆಗಳನ್ನು ತುಂಬಿಸುವುದೂ ಸೇರಿದಂತೆ ಪ್ರಸಕ್ತ ಬಜೆಟ್ನಲ್ಲಿಯೇ ಅನುದಾನ ಮೀಸಲಿಡುವಂತೆ ಆಗ್ರಹಿಸಿ ಕನರ್ಾಟಕ ರಾಜ್ಯ ರೈತ ಸಂಘದ (ಪುಟ್ಟಣ್ಣಯ್ಯ ಬಣ) ಕಾರ್ಯಕರ್ತರು ಪಟ್ಟಣದ ತಹಶೀಲ್ದಾರ ಕಚೇರಿ ಎದುರು ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿಗೆ ಬೆಂಬಲ ಸೂಚಿಸಿ ಮಾತನಾಡಿದರು.
ಆಣೆಕಟ್ಟೆಗೂ ಮುನ್ನ ಕೆರೆಗಳು: ದೇಶದಲ್ಲಿ ಆಣೆಕಟ್ಟೆಗೂ ಮುನ್ನ ಕೆರೆಗಳು ಉದ್ಭವಿಸಿವೆ, ಅಲ್ಲಿಂದ ಇಲ್ಲಿಯವರೆಗೂ ಎಲ್ಲ ಜನರ ದಾಹವನ್ನು ನೀಗಿಸಿವೆ, ಕಳೆದೊಂದು ದಶಕದಿಂದ ಬಹುತೇಕ ಕೆರೆಗಳು ತುಂಬದೇ ಅಂತರ್ಜಲ ಕುಸಿತಗೊಳ್ಳುತ್ತಿದ್ದು ಸಾವಿರ ಅಡಿಗಳಷ್ಟು ಕೊಳವೆಭಾವಿ ಕೊರೆಸಿದರೂ ಹನಿ ನೀರು ಸಿಗುತ್ತಿಲ್ಲ, ಇದರಿಂದ ಕುಡಿಯುವ ನೀರಿಗಾಗಿ ಮೈಲುಗಟ್ಟಲೇ ಹೋಗಬೇಕಾಗಿದೆ ಎಂದರು.
ನಿಮ್ಮ ಸಾಲಮನ್ನಾ ಸಹಾಯಧನ ರೈತ ನಿರೀಕ್ಷಿಸುತ್ತಿಲ್ಲ: ಕೃಷಿ ಪ್ರಧಾನ ದೇಶದಲ್ಲಿ ರೈತನಿಗೆ ಅನ್ಯಾಯವಾಗುತ್ತಿರುವುದು ದುರಂತದ ವಿಷಯ ನಿಮ್ಮ ಸಾಲಮನ್ನಾ ಸಹಾಯಧನವನ್ನು ರೈತ ನಿರೀಕ್ಷಿಸುತ್ತಿಲ್ಲ ಆತನನ್ನು ತೃಪ್ತಿಪಡಿಸಲು ಸಕರ್ಾರ ಮಾಡಿದ ಘೋಷಣೆಗಳು, ಇದ್ದಾಗ ಸೌಲಭ್ಯ ಕೊಡದ ನೀವು ಸತ್ತ ಮೇಲೆ ಆತನ ಜೀವಕ್ಕೆ ಬೆಲೆ ಕಟ್ಟುತ್ತಿರುವುದು ಹೇಡಿತನದ ಪರಮಾವಧಿ ಎಂದರು.
ಹಿರಿಯ ಶ್ರೀಗಳೊಂದಿಗೆ ಚಚರ್ೆಗೆ ಆಹ್ವಾನ: ರೈತ ಹೋರಾಟಗಾರರು ಸಿರಿಗೆರೆಯಲ್ಲಿರುವ ಶ್ರೀಮಠಕ್ಕೆ ಆಗಮಿಸಿ ಖುದ್ದಾಗಿ ಚಚರ್ಿಸಿ ಮುಂದಿನ ಹೋರಾಟದ ರೂಪು ರೇಷ್ಮೆಗಳನ್ನು ಹಾಕುವುದು ಸೂಕ್ತ, ಚುನಾವಣೆ ಬಹಿಷ್ಕರಿಸಿ ನಮ್ಮ ಹಕ್ಕನ್ನು ಕಳೆದುಕೊಳ್ಳುವಲ್ಲಿ ಅರ್ಥವಿಲ್ಲ ಎಂದರು.
ಭಜನೆಯಲ್ಲಿ ರಾತ್ರಿ ಕಳೆದ ರೈತರು: ಬುಧವಾರ ರಾತ್ರಿಯಿಡೀ ತಹಶೀಲ್ಧಾರ ಕಛೇರಿ ಎದುರು ಹಾಕಿದ್ದ ಟೆಂಟಗಳಲ್ಲಿ ಭಜನೆ ಮಾಡುತ್ತಾ ಹೋರಾಟಗಾರರು ಕಾಲ ಕಳೆದರು.
ಸ್ಥಳಕ್ಕೆ ಬಾರದ ಅಧಿಕಾರಿಗಳು: ನೀರಾವರಿ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಬರುವ ನಿರೀಕ್ಷೆ ಇಟ್ಟಕೊಂಡಿದ್ದ ಪ್ರತಿ ಭಟನಾಕಾರರಿಗೆ ಮತ್ತೊಮ್ಮೆ ನಿರಾಸೆಯಾಯಿತು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಎಸ್.ಆರ್.ಪಾಟೀಲ, ಯುವ ಮುಖಂಡ ಬಾಲಚಂದ್ರ ಪಾಟೀಲ, ಪುರಸಭೆ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ, ಮಹಿಳಾ ಸಂಘಟನೆಗಳ ಅಧ್ಯಕ್ಷೆ ವನಿತ ಗುತ್ತಲ, ಮಾಜಿ ಸೈನಿಕ ಮಲ್ಲೇಶ ಚಿಕ್ಕಣ್ಣನವರ, ನೇಗಿಲಯೋಗಿ ಬಣದ ಚಂದ್ರು ಛತ್ರದ, ಅಂಗವಿಕಲರ ಸಂಘದ ಅಧ್ಯಕ್ಷ ಪಾಂಡು ಸುತಾರ ಸೇರಿದಂತೆ ವಿವಿಧ ಸಂಘಟನೆಗಳ ನೂರಾರು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಧರಣಿಯಲ್ಲಿ ಪಾಲ್ಗೊಂಡಿದ್ದರು