ಲೋಕದರ್ಶನ ವರದಿ
ವಿಜಯಪುರ 13:ರೈತರು ವಾಣಿಜ್ಯ ಬೆಳೆಗಳಿಗಿಂತ ಅಹಾರ ಬೆಳೆಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟು ಸದೃಡ ಹಾಗೂ ಆರೋಗ್ಯಯುತ ರಾಷ್ಟ್ರನಿಮರ್ಾಣಕ್ಕೆ ಮುಂದಾಗಬೇಕೆಂದು ತೋಟಗಾರಿಕೆ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಸಿ.ಮನಗೂಳಿ ಅವರು ಹೇಳಿದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ ಹಾಗೂ ಕೃಷಿ ಇಲಾಖೆ ವಿಜಯಪುರ. ಇವರ ಆಶ್ರಯದಲ್ಲಿ ನಗರದ ಎಸ್.ಎಸ್ ಹೈಸ್ಕೂಲ್ ಆವರಣದಲ್ಲಿ ಸಾವಯವ ಉತ್ಪನ್ನಗಳು ಹಾಗೂ ಸಿರಿಧಾನ್ಯಗಳ ಕುರಿತು ಜಾಗೃತಿ ಮೂಡಿಸಲು ಆಯೋಜಿಸಿದ್ದ ಸಾವಯವ ಹಾಗೂ ಸಿರಿಧಾನ್ಯ ಮೇಳ 2019 ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ದೇಶದ ಸಂಪತ್ತು. ಅಹಾರಕ್ಕಾಗಿ ಇಡೀ ಪ್ರಪಂಚವೇ ರೈತರನ್ನು ಅವಲಂಬಿಸಿದೆ. ರೈತರಿಂದ ಮಾತ್ರ ದೇಶ ಸುಸ್ಥಿರವಾಗಲು ಸಾಧ್ಯ. ರೈತರು ಸಾಂಪ್ರದಾಯಿಕ, ಆರೋಗ್ಯಕರ ಬೆಳಗಳನ್ನು ಬೆಳೆಯುಬೇಕು. ರಾಸಾಯನಿಕ ಗೊಬ್ಬರಗಳ ಬದಲಾಗಿ ಸಾವಯವ ಗೊಬ್ಬರಗಳನ್ನು ಬಳಸಬೇಕು. ಆದಾಯದ ದೃಷ್ಟಿಯಿಂದ ಎಲ್ಲ ಋತುಮಾನಗಳಲ್ಲೂ ಒಂದೇ ಬೆಳೆ ಬೆಳೆಯುವ ಬದಲು ಆವರ್ತನೀಯವಾಗಿ ವಿವಿಧ ಬೆಳಗಳನ್ನು ಬೆಳೆಯಬೇಕು. ಇದರಿಂದ ಭೂಮಿಯ ಫಲವತ್ತತೆಗೂ ಅನುಕೂಲವಾಗುತ್ತದೆ ಎಂದು ಹೇಳಿದರು.
ರೈತ ಕುಟುಂಬವೆಂದರೆ ಕೇವಲ ಕೃಷಿ ಭೂಮಿ ಹೊಂದುವುದಲ್ಲ. ಅದಕ್ಕೆ ಪೂರಕವಾದ ದನಕರುಗಳು, ಜಾನುವಾರುಗಳನ್ನು ಸಾಕಬೇಕು. ಅವುಗಳ ಉತ್ಪನ್ನಗಳನ್ನು, ಗೊಬ್ಬರವನ್ನು ಅಗತ್ಯನುಸಾರ ಬಳಸಿದರೆ ಸಾವಯವ ಕೃಷಿಗೆ ಹೆಚ್ಚು ಅನುಕೂಲವಾಗುತ್ತದೆ. ರಾಸಾಯನಿಕ ರಹಿತ ಬೆಳೆಗಳಿಂದ ಮನುಷ್ಯನ ಆರೋಗ್ಯವು ಉತ್ತಮವಾಗಿರುತ್ತದೆ ಎಂದು ಅವರು ಹೇಳಿದರು. ರೈತರ ಕಲ್ಯಾಣಕ್ಕಾಗಿ ಸಕರ್ಾರ ಹಲವು ಯೋಜನೆಗಳನ್ನು ರೂಪಿಸಿ, ಜಾರಿಗೆ ತಂದಿದೆ. ಸಾವಯವ ಕೃಷಿಗೆ ಸಂಬಂಧಿಸಿದಂತೆ ಉಚಿತ ತರಬೇತಿ ಬೀಜ ವಿತರಣೆ, ಕೃಷಿ ಪದ್ಧತಿಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಅವುಗಳ ಕುರಿತು ರೈತ ಗಮನಹರಿಸಬೇಕು. ಜನಪ್ರತಿನಿಧಿಗಳು ಹಾಗೂ ಇಲಾಖೆ ಅಧಿಕಾರಿಗಳು ರೈತಪರ ಯೋಜನೆಗಳನ್ನು ರೈತರ ಮನೆ-ಬಾಗಿಲಿಗೆ ತಲುಪಿಸುವ ಕಾರ್ಯ ಮಾಡಬೇಕು ಎಂದು ಅವರು ಹೇಳಿದರು.
ತಾಂತ್ರಿಕ ಸಮಾವೇಶದ ಅಂಗವಾಗಿ ಮಾತನಾಡಿದ ವಿಜಯಪುರ ಕೃಷಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಎಚ್.ಬಿ. ಬಬಲಾದ ಪ್ರಪಂಚದಲ್ಲಿ ಒಟ್ಟು 40 ಮಿಲಿಯನ್ ಹೆಕ್ಟೇರ್ ಪ್ರದೇಶ ಸಾವಯವ ಕೃಷಿಯನ್ನು ಒಳಗೊಂಡಿದೆ. ಭಾರತದಲ್ಲಿ 4.5 ಮಿಲಿಯನ್ ಹೆಕ್ಟೇರ್ ಪ್ರದೇಶ ಸಾವಯವ ಕೃಷಿಗೆ ಒಳಪಟ್ಟಿಗೆ ಸಾವಯವ ಕೃಷಿಯನ್ನು ಅಳವಡಿಸಿಕೊಂಡ ಮೊದಲ ರಾಜ್ಯ ಕನರ್ಾಟಕ. ಸಾವಯವ ಕೃಷಿಯಿಂದ ಭೂಮಿ ಹಾಗೂ ಮನುಷ್ಯ ಆರೋಗ್ಯದಿಂದ ಕೂಡಿರಲು ಸಹಕಾರಿ. ಏಕದಳ ಧಾನ್ಯಗಳ ಜೊತೆ ದ್ವಿದಳ ಧಾನ್ಯಗಳ ಬೆಳೆಗಳಿಗೂ ಮಹತ್ವ ನೀಡಬೇಕು. ಸಾವಯವ ಕೃಷಿ ಬರ ನಿರೋಧಕವಾಗಿದೆ. ಇದರಿಂದ ಪರಿಸರ ಜಲ ಮಾಲಿನ್ಯವನ್ನು ನಿಯಂತ್ರಿಸಬಹುದು. ಪಾರಂಪರಿಕ ಕೃಷಿ ಪದ್ಧತಿಗಳೊಂದಿಗೆ ವೈಜ್ಞಾನಿಕ ಅಭಿವೃದ್ದಿಗಳನ್ನು ಬಳಸಿಕೊಂಡು ಸಾವಯವ ಕೃಷಿಯಲ್ಲೂ ಉತ್ತಮ ಆದಾಯ ಗಳಿಸಬಹುದು ಎಂದು ಅವರು ಹೇಳಿದರು.
ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಸಿದ್ದೇಶ್ವರ ಶ್ರಿಗಳು ಮಾತನಾಡಿ ಪ್ರಸ್ತುತ ದಿನಗಳಲ್ಲಿ ರೈತನು ಸಮೃದ್ದ ಜೀವನ ನಡೆಸಬೇಕಾಗಿದೆ. ಭಾರತವನ್ನು ಅತೀ ಹೆಚ್ಚು ಶ್ರೀಮಂತ ದೇಶವನ್ನಾಗಿ ಮಾಡುವ ಶಕ್ತಿ ರೈತನಲ್ಲಿದೆ. ಕೃಷಿಕ ಬಡವನಾದರೆ ದೇಶವೆ ಬಡರಾಷ್ಟ್ರವಾದಂತೆ, ಸೈನಿಕ ಬಡವನಾದರೆ ದೇಶದ ರಕ್ಷಣಾ ವ್ಯವಸ್ಥೆ ನಲುಗಿದಂತೆ. ಇಡೀ ಜಗತ್ತು ಸಮೃದ್ದ ಜೀವನ ನೆಡೆಸಬೇಕಾದರೆ. ರೈತ ಮತ್ತು ಸೈನಿಕ ಸಂತಸದಿಂದಿರಬೇಕೆಂದು ಅವರು ಹೇಳಿದರು.
ದೇವರನ್ನು ಭೂ ತಾಯಿಯಲ್ಲಿ ಕಾಣುವ ರೈತ ಹಾಗೂ ದೇವರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ, ನಾವು ದೇವರನ್ನು ರೈತನಲ್ಲಿ ಕಾಣಬೇಕಾಗಿದೆ. ನಿಜವಾದ ಸಂಪತ್ತು ಎಂದರೆ ಹಣವಲ ್ಲ ಅನ್ನ, ನೀರು, ಪಂಚಭೂತಗಳೆ ಸಂಪತ್ತು ಇವುಗಳು ಇರದೇ ಹೋದರೆ, ಜೀವ ಜಗತ್ತು ವಿನಾಶ ಹೊಂದುತ್ತಿತ್ತು. ರೈತ ಬೇಡುವನಾಗಬಾರದು ಬದಲಿಗೆ ನೀಡುವನಾಗಿರಬೇಕು. ಕೃಷಿಕ ಸ್ವಾವಲಂಬಿಯಾಗಿ ಬದುಕು ನಡೆಸಬೇಕು ಎಂದು ಅವರು ಹೇಳಿದರು.
ಸಾನಿಧ್ಯ ವಹಿಸಿದ್ದ ಗದಗನ ಕಪತಗುಡ್ಡ ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ ಅವರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸಕರ್ಾರಗಳು ಹಳ್ಳಿಗಳ ರಕ್ಷಣೆ ಮಾಡಬೇಕು. ಅಂದಾಗ ಮಾತ್ರ ದೇಶದ ರಕ್ಷಣೆ ಸಾಧ್ಯವಾಗುತ್ತದೆ. ಬಸವಣ್ಣನ ತಪ್ಪಲಿನಲ್ಲಿ ಉತ್ತಮವಾಗಿ ಹಸಿರು ಕಂಗೊಳಿಸಬೇಕು. ಬರ ನಿವಾರಣೆಗೆ ಉತ್ತಮ ಕೃಷಿ ಅವಶ್ಯಕವಾಗಿದೆ ಎಂದು ಹೇಳಿದರು. ಕೃಷಿ ಮಹಾವಿದ್ಯಾಲಯದ ಆಹಾರ ಸಂಸ್ಕೃಣೆ ಹಾಗೂ ಪೋಷಣೆ ವಿಭಾಗದ ಮುಖ್ಯಸ್ಥೆ ಡಾ.ಕಾಶೀಬಾಯಿ ಖ್ಯಾಡಗಿ ಅವರು ಆಹಾರದಲ್ಲಿ ಸಿರಿಧಾನ್ಯಗಳ ಬಳಕೆ ಕುರಿತು ಮಾತನಾಡಿ, ಬದಲಾದ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯ ಕಾರಣದಿಂದ ಇಂದು ಮನುಷ್ಯ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ. ಈ ಸಂದರ್ಭದಲ್ಲಿ ಸಿರಿಧಾನ್ಯಗಳ ಬಳಕೆ ಮಹತ್ವಪೂರ್ಣವಾಗಿದೆ. ದಿನದ ದಿನದ ಮೂರು ಹೊತ್ತಿನ ಊಟದಲ್ಲಿ ಒಂದು ಬಾರಿಯಾದರೂ ಸಿರಿಧಾನ್ಯದಿಂದ ಮಾಡಿದ ಅಡುಗೆಯನ್ನು ಸೇವಿಸಬೇಕು. ಇದರಿಂದ ದೇಹಕ್ಕೆ ಅಗತ್ಯ ಪೋಷಕಾಂಶಗಳು ದೊರೆತು, ಸ್ಥೂಲಕಾರ್ಯದ ಸಮಸ್ಯೆ, ಹೃದಯ ಸಂಬಂಧಿ, ರಕ್ತ ಸಂಬಂಧಿ ಮುಂತಾದ ಆರೋಗ್ಯ ಸಮಸ್ಯೆಗಳನ್ನು ದೂರವಿಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಪ್ರೇಮಾ ಪಾಟೀಲ ಅವರು ಮಾತನಾಡಿ, ಸುಲಭಕ್ಕೆ ಸಿದ್ಧವಾಗುವ ಹಾಗೂ ಜೀರ್ಣವಾಗುವ ಅಕ್ಕಿಯ ಬಳಕೆಯ ಬದಲಾಗಿ ನಿಧಾನವಾಗಿ ಜೀರ್ಣವಾಗುವ ಮತ್ತು ಆರೋಗ್ಯಪೂರ್ಣ ಸತ್ವಗಳಿಂದ ಕೂಡಿದ ಸಿರಿಧಾನ್ಯಗಳನ್ನು ಹೆಚ್ಚಾಗಿ ಬಳಸಬೇಕು. ಸಕರ್ಾರ ಕೂಡ ಪಡಿತರ ವಿತರಣೆಯಲ್ಲಿ ಅಕ್ಕಿಯ ಬದಲಾಗಿ ಸಿರಿಧಾನ್ಯಗಳ ವಿತರಣೆಗೆ ಪ್ರಯೋಗಕ್ಕೆ ಮುಂದಾಗಬೇಕು ಎಂದು ಹೇಳಿದರು. ತೇರದಾಳದ ಪ್ರಗತಿಪರ ರೈತ ಧರೆಪ್ಪ ಕಿತ್ತೂರು ಅವರು ಕಳೆದ 28 ವರ್ಷಗಳಿಂದ ಸಾವಯವ ಕೃಷಿಯನ್ನು ಅಳವಡಿಸಿಕೊಂಡು ಯಶಸ್ವಿಯಾದ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಕೃಷಿ ಜಂಟಿ ನಿದರ್ೇಶಕ ಡಾ.ಶಿವಕುಮಾರ ಸ್ವಾಗತಿಸಿದರು. ವೈದ್ಯಕೀಯ ವಿದ್ಯಾಥರ್ಿನಿ ಜ್ಯೋತಿ ಗೆಜ್ಜೆ ಪ್ರಾಥರ್ಿಸಿದರು. ಪಿ.ಎಸ್.ಹತ್ತಿ ನಿರೂಪಿಸಿದರು. ಕೃಷಿ ವಿವಿಯ ಅಕ್ಷಯ ಮಠದ ರೈತಗೀತೆ ಹಾಡಿದರು. ಜಮಂಖಡಿಯ ಹಂಸಧ್ವನಿ ಕಲಾತಂಡ ಹಾಗೂ ವಿಶ್ವಚೇತನ ಕಲಾತಂಡಗಳು ರೈತಪರ ಗೀತೆಗಳನ್ನು ನಡೆಸಿಕೊಟ್ಟರು. ಕೃಷಿ ಇಲಾಖೆ ಉಪನಿದರ್ೇಶಕ ಪ್ರಕಾಶ ಚವ್ಹಾಣ ವಂದಿಸಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಶೈಲಜಾ ಬಸನಗೌಡ ಪಾಟೀಲ ಯತ್ನಾಳ, ಕೃಷಿಕ ಸಮಾಜದ ಅಧ್ಯಕ್ಷ ಬಿ.ಎಲ್.ಪಾಟೀಲ, ಡಾ.ರವಿ ವಾಯ್. ಜಿ.ಪಂ. ಸದಸ್ಯೆ ಕವಿತಾ ರಾಠೋಡ, ಪ್ರತಿಭಾ ಪಾಟೀಲ, ಪ್ರಗತಿಪರ ರೈತರಾದ ರಾಜಶೇಖರ ನಿಂಬರಗಿ, ಸಿದ್ದಪ್ಪ ಭೂಸಗೊಂಡ ಸೇರಿದಂತೆ ಕೃಷಿ ಇಲಾಖೆ ಅಧಿಕಾರಿಗಳು, ರೈತರು, ಸಾರ್ವಜನಿಕರು ಉಪಸ್ಥಿತರಿದ್ದರು.