ಮುಗಳಿಯಲ್ಲಿ ಸೂಕ್ತ ಪಶು ಆಸ್ಪತ್ರೆಯಿಲ್ಲದೆ ರೈತರು ತತ್ತರ

ಚಿಕ್ಕೋಡಿ 12: ತಾಲೂಕಿನ ಮುಗಳಿ ಗ್ರಾಮದಲ್ಲಿ ಸೂಕ್ತ ಪಶು ಆಸ್ಪತ್ರೆ ಇಲ್ಲದ ಕಾರಣ ಒಂದೂವರೆ ತಿಂಗಳಲ್ಲಿ 150 ಕ್ಕೂ ಹೆಚ್ಚಿನ ರಾಸುಗಳು ಕಾಲು-ಬಾಯಿ ಬೇನೆ ಮಹಾಮಾರಿ ರೋಗಕ್ಕೆ ತುತ್ತಾಗಿರುವ ಘಟನೆ ಬೆಳಕಿಗೆ ಬಂದಿದೆ. ಜಾನುವಾರಗಳಿಗೆ ವ್ಯಾಪಕವಾಗಿ ಹರಡಿರುವ ಕಾಲು-ಬಾಯಿ ಬೇನೆ ಮಹಾಮಾರಿ ರೋಗಕ್ಕೆ ರೈತರು ತತ್ತರಿಸಿ ಹೋಗಿದ್ದಾರೆ.

ಕಳೆದ ಒಂದು ತಿಂಗಳಿಂದ ಈ ಮಹಾಮಾರಿ ರೋಗ ಗಡಿ ಜಿಲ್ಲೆಗೆ ಹರಡಿಕೊಂಡಿದ್ದು, ಹೀಗಾಗಿ ಚಿಕ್ಕೋಡಿ ತಾಲೂಕಿನ ಮುಗಳಿ ಗ್ರಾಮವೊಂದರಲ್ಲಿಯೇ ಸುಮಾರು ನೂರಕ್ಕೂ ಹೆಚ್ಚಿನ ಜಾನುವಾರಗಳು ಈ ರೋಗಕ್ಕೆ ತುತ್ತಾಗಿದ್ದು, ಸಕರ್ಾರವೇ ದನಕರುಗಳ ಸಾವಿಗೆ ಕಾರಣವಾಗಿದೆಂದು ಗ್ರಾಮಸ್ಥರು ನೇರವಾಗಿ ಪಶು ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ಪಶು ಆಸ್ಪತ್ರೆ ಇಲ್ಲದೆ ಇರುವುದಕ್ಕೆ ಇಷ್ಟೊಂದು ಜಾನುವಾರಗಳು ಸಾವಿನ ಕದ ತಟ್ಟಿದ್ದು, ಹಲವು ದನಕರುಗಳು ಸೂಕ್ತ ಚಿಕಿತ್ಸೆ ಇಲ್ಲದೆ ರೋಗದಿಂದ ಒದ್ದಾಟ ಆರಂಭಿಸಿವೆಂದು ಗ್ರಾಮದ ರೈತರು ಅಳಲು ವ್ಯಕ್ತಪಡಿಸಿದರು.

ತೀವ್ರ ಬರಗಾಲ ಪೀಡಿತ ಪ್ರದೇಶಕ್ಕೆ ಒಳಪಟ್ಟಿರುವ ಗ್ರಾಮದಲ್ಲಿ ಕಳೆದ ಐದಾರು ವರ್ಷಗಳಿಂದ ಸಮರ್ಪಕ ಮಳೆ ಆಗಿಲ್ಲ, ಇದರಿಂದ ಬರಗಾಲಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಇಂತಹ ಸಂಧಿಗ್ನ ಪರಿಸ್ಥಿತಿಯಲ್ಲಿ ಮಹಾಮಾರಿ ಕಾಲು-ಬಾಯಿ ಬೇನೆ ರೋಗಕ್ಕೆ ದನಕರುಗಳು ಬಲಿಯಾಗುತ್ತಿರುವುದು ರೈತರ ಹೊಟ್ಟೆಗೆ ಬರೆ ಎಳೆದಂತಾಗಿದೆ. ಚಿಕ್ಕೋಡಿ ತಾಲೂಕಿನಲ್ಲಿಯೇ ಅತೀ ಹೆಚ್ಚಾಗಿ ಹೈನುಗಾರಿಕೆ ಹೊಂದಿರುವ ಮುಗಳಿ ಗ್ರಾಮದಲ್ಲಿ ಸುಮಾರು ನಾಲ್ಕು ಸಾವಿರಕ್ಕಿಂತ ಅಧಿಕ ಜಾನುವಾರಗಳು ಇದ್ದು, ಗ್ರಾಮದಲ್ಲಿಯೇ ಪಶು ಆಸ್ಪತ್ರೆ ಇದ್ದರೆ ಜಾನುವಾರಗಳ ತಗಲಿರುವ ರೋಗವನ್ನು ಗುಣಪಡಿಸಬಹುದಾಗಿತ್ತು. ಆದರೆ ಸಕರ್ಾರ ಮಾತ್ರ ಗ್ರಾಮದಲ್ಲಿ ಆಸ್ಪತ್ರೆ ನಿಮರ್ಾಣ ಮಾಡಲು ಮೀನಾ ಮೇಷ ಅನುಸರಿಸುತ್ತದೆ ಎಂದು ರೈತ ರಾಜು ಹರಗನ್ನವರ ಆರೋಪಿಸಿದರು.

ರೋಗದ ಲಕ್ಷಣಗಳು: ಕಾಲು ಮತ್ತು ಬಾಯಿ ಜ್ಷರಕ್ಕೆ ತುತ್ತಾದ ಜಾನುವಾರಗಳಲ್ಲಿ ಅತಿಯಾದ ಜ್ವರ, ಬಾಯಿಯಲ್ಲಿ ನೀಗರ್ುಳ್ಳೆ, ಜೊಲ್ಲು ಸುರಿಸುವುದು. ಕಾಲು ಕುಂಟುವುದು ಹಾಗೂ ಕೆಚ್ಚಲಿನ ಮೇಲೆ ಗುಳ್ಳೆಗಳು ಮೂಡುವುದು ಸೇರಿದಂತೆ ಹಲವು ಲಕ್ಷಣಗಳು ಕಂಡು ಬರುತ್ತವೆ. 

ರೋಗದ ಲಕ್ಷಣ ಕಂಡ ತಕ್ಷಣಾ ರೋಗಗ್ರಸ್ತ ಪ್ರಾಣಿಯನ್ನು ಬೇರ್ಪಡಿಸಬೇಕು. ಅಲ್ಲದೇ ನಿತ್ಯ ಕೊಟ್ಟಿಗೆಯನ್ನು ಶುಚಿಗೊಳಿಸಿ ಕಟ್ಟುವುದರಿಂದ ಇತರ ಪ್ರಾಣಿಗಳಿಗೆ ಕಾಯಿಲೆ ಹರಡದಂತೆ ತಡೆಯಬಹುದಾಗಿದೆ. ರೋಗಗ್ರಸ್ತ ಪ್ರಾಣಿಯಿಂದ ಈ ಅಂಟು ರೋಗವು ಬೇಗನೆ ಇತರೆಡೆಗೆ ವ್ಯಾಪಿಸುವುದರಿಂದ ಈ ರಾಸುಗಳನ್ನು ಮಾರಾಟ ಮಾಡಬಾರದು. ಕಾಯಿಲೆಗೆ ತುತ್ತಾದ ಜಾನುವಾರಿನ ಕಾಲು ಬಾಯಿ ಹುಣ್ಣನ್ನು ಸ್ವಲ್ಪ ಅಡುಗೆ ಸೋಡ ದ್ರಾವಣದಿಂದ ಶುಚಿಗೊಳಿಸುವುದು. ಮೃದು ಆಹಾರ ನೀಡುವುದು. ವಿಟಮಿನ್ ಲಸಿಕೆ ಕೊಡಿಸುವ ಮೂಲಕ ಜಾನುವಾರವನ್ನು ಆರೈಕೆ ಮಾಡಬೇಕು ಎನ್ನುತ್ತಾರೆ ಪಶು ವೈದ್ಯರು.

ರೋಗ ಹತೋಟಿಗೆ ಬಂದಿದೆ: 

ಪ್ರತಿ ವರ್ಷ ಜಾನುವಾರಗಳಿಗೆ ಈ ರೋಗ ಕಾಣಿಸಿಕೊಳ್ಳುತ್ತದೆ. ರೋಗ ಬರದಂತೆ ಪಶು ಇಲಾಖೆ ಪ್ರತಿ ಗ್ರಾಮದಲ್ಲಿ ಜಾಗೃತಿ ಮೂಡಿಸಿ ಲಸಿಕೆ ಕೊಡಿಸಲಾಗಿದೆ. ರೋಗಕ್ಕೆ ತುತ್ತಾಗಿರುವ ಜಾನುವಾರಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಚಳಿ ಹೆಚ್ಚಾಗಿ ಇರುವದರಿಂದ ಶೇ. 100ಕ್ಕೆ 30ರಷ್ಟು ಕರುಗಳ ಸಾವಿನ ಪ್ರಮಾಣ ಹೆಚ್ಚುತ್ತದೆ. ಮುಗಳಿ ಗ್ರಾಮದಲ್ಲಿ ಪಶು ಆಸ್ಪತ್ರೆ ನಿಮರ್ಾಣ ಮಾಡಲು ಸಕರ್ಾರಕ್ಕೆ ಪ್ರಸ್ತಾವಣೆ ಸಲ್ಲಿಸಲಾಗಿದೆ.

                                  ಡಾ. ಸದಾಶಿವ ಉಪ್ಪಾರ

                       ಸಹಾಯಕ ನಿದರ್ೇಶಕರು ಪಶು ಸಂಗೋಪನಾ ಇಲಾಖೆ ಚಿಕ್ಕೋಡಿ.