ಕಾಗವಾಡ 23: ಕಬ್ಬಿನ ಬೆಳೆಗೆ ಸೂಕ್ತ ದರ ನೀಡಿರಿ ಎಂದು ಕಳೆದ ಅನೇಕ ವರ್ಷಗಳಿಂದ ಕಬ್ಬು ಬೆಳೆಗಾರ ಸಂಘ ವತಿಯಿಂದ ಹೋರಾಟ ಮಾಡುತ್ತಿದ್ದರು. ಆದರೆ, ಅಷ್ಟೊಂದು ಯಶ ದೊರೆತಿರಲಿಲ್ಲ. ಕಾಗವಾಡ ತಾಲೂಕಿನ ರೈತರು ಒಗ್ಗಟ್ಟಾಗಿ ಹೋರಾಟದ ಕಿಚ್ಚು ಹಚ್ಚಿದ್ದರಿಂದ, ಅದು ರಾಜ್ಯಮಟ್ಟಕ್ಕೆ ಹೋಗಿ ಬೇಡಿಕೆಗಳು ಈಡೇರಿಸಿವೆ. ಇದು ದೊಡ್ಡ ಯಶ. ಈ ಮುಂದೆಯೂ ರೈತರು ಒಗ್ಗಟ್ಟಿನಿಂದ ಎಲ್ಲ ಸಮಸ್ಯೆಗಳನ್ನು ಪರಿಹರಿಸಿಕೊಳ್ಳೋಣ ಎಂದು ರೈತ ಹಿತರಕ್ಷಣಾ ಸಮಿತಿಯ ಆಧ್ಯಕ್ಷ ರವೀಂದ್ರ ಗಾಣಿಗೇರ ಹೇಳಿದರು.
ಗುರುವಾರ ಸಂಜೆ ಐನಾಪುರದ ಬಾಜಾರಪೇಟದಲ್ಲಿ ಐನಾಪುರದ ರೈತರು ದರಕ್ಕಾಗಿ ಹೋರಾಡಿದ ರೈತರ ಮುಖಂಡರನ್ನು, ಸಹಕರಿಸಿದ ಪತ್ರಕರ್ತರನ್ನು, ಅಧಿಕಾರಿಗಳನ್ನು ಸನ್ಮಾನಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾನೂ ಕಾಂಗ್ರೆಸ್ ಪಕ್ಷದವನೇ. ನಮ್ಮ ಪಕ್ಷದ ಶಾಸಕ ಶ್ರೀಮಂತ ಪಾಟೀಲ ಇದ್ದರೂ ಕಬ್ಬಿನ ದರಕ್ಕಾಗಿ ಪಕ್ಷ, ಜಾತಿ ಬದಿಗಿಟ್ಟು ರೈತರ ಸಮಸ್ಯೆ ತೆಗೆದುಕೊಂಡು ಹೋರಾಡಿದ್ದೇನೆ. ಅದಕ್ಕೆ ಯಶ ದೊರೆತಿದೆ ಎಂದು ಗಾಣಿಗೇರ ತಿಳಿಸಿದರು.
ನದಿ ನೀರಿಗಾಗಿ ಹೋರಾಟ:
ಕೃಷ್ಣಾ ನದಿಯಲ್ಲಿ ಈಗಲೇ ನೀರು ಇಳಿಮುಖವಾಗಿದೆ. ಈಗಿರುವ ನೀರು ಕೇವಲ ಮಾಚರ್್ ತಿಂಗಳ ವರೆಗೆ ಮಾತ್ರ ಪೂರೈಸಬಹುದು. ಇಡಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ತಲೆ ಎತ್ತಲಿದೆ. ನದಿ ಬತ್ತಿ ಹೋಗುವ ಪೂರ್ವದಲ್ಲಿ ರೈತರು ಒಂದುಗೂಡಿ ಹೋರಾಟ ಮಾಡುವುದು ಅವಶ್ಯಕತೆಯಿದೆ. ಈ ಕಾರಣ ಎಲ್ಲ ರೈತರು ಒಂದುಗೂಡಿರಿ ಎಂದು ರವೀಂದ್ರ ಗಾಣಿಗೇರ ಹೇಳಿದರು.
ನನ್ನ ರಾಜಕೀಯ ಜೀವನದಲ್ಲಿ ಅನೇಕ ಪಕ್ಷಗಳ ಮುಖ್ಯಮಂತ್ರಿಗಳನ್ನು ಕಂಡಿದ್ದೇನೆ. ಆದರೆ, ರೈತರ ಪರ ಕಾಳಜಿ ಹೊಂದಿರುವ ಅಪರೂಪದ ಮುಖ್ಯಮಂತ್ರಿ ಕುಮಾರಸ್ವಾಮಿ. ಕಳೆದ 15 ದಿನಗಳಿಂದ ಕಬ್ಬಿನ ದರಕ್ಕಾಗಿ ಹೋರಾಟ ಮಾಡಿ, ಸಕ್ಕರೆ ಕಾಖರ್ಾನೆಗಳ ಕಬ್ಬು ನುರಿಸುವ ಕಾರ್ಯ ತಡೆಹಿಡಿದ ರೈತರಿಗೆ ಬೆಂಗಳೂರಿಗೆ ಕರಿಸಿ, ಎಲ್ಲ ಸಮಸ್ಯೆಗಳನ್ನು ಮನದಾಳದಿಂದ ಆಲಿಸಿ ನಿಮ್ಮ ಬೇಡಿಕೆ ಸೂಕ್ತವಾಗಿವೆ. ನನ್ನ ಮೇಲೆ ಭರವಸೆ ಇಡಿರಿ. ನಿಮಗೆ ನ್ಯಾಯ ಒದಿಗಿಸುತ್ತೇನೆ ಎಂದು ಹೇಳಿ, ಈಗ ನೀಡಿರುವ ನ್ಯಾಯ ನಮಗೆ ತೃಪ್ತಿ ತಂದಿದೆ. 40 ವರ್ಷಗಳ ಬಳಿಕ ಉಗಾರ, ಐನಾಪುರ ರೈತ ಸಂಘಟನೆಗೆ ಪ್ರಥಮ ಬಾರಿಗೆ ದೊಡ್ಡ ಪ್ರಮಾಣದ ನ್ಯಾಯ ದೊರೆತಿದೆ ಎಂದು ಕಬ್ಬು ಬೆಳೆಗಾರ ಹೋರಾಟಗಾರ ಶೀತಲ ಪಾಟೀಲ ಹೇಳಿದರು.
ಸಭೆಯಲ್ಲಿ ರೈತ ಮುಖಂಡರಾದ ರಾವಸಾಹೇಬ ಪಾಟೀಲ(ಗುಂಡವಾಡ), ಅಪ್ಪಾಸಾಹೇಬ ಚೌಗುಲೆ, ಗಜಾನನ ಯರೆಂಡೋಲಿ, ಆಸೀಫ್ ಶೇಖ, ಕುಮಾರ ಅಪರಾಜ, ಆದಿನಾಥ ದಾನೋಳಿ, ಸಂಜಯ ಬಿರಡಿ, ಸೇರಿದಂತೆ ಐನಾಪುರ, ಕಾಗವಾಡ, ಉಗಾರ, ಮೋಳೆ ಸಹ ಅನೇಕ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.