ತೋಟದ ಮನೆಗಳಿಗೆ ವಿದ್ಯುತ್ ನೀಡಲು ರೈತ ಸಂಘ ಆಗ್ರಹ.
ದೇವರಹಿಪ್ಪರಗಿ 25 : ತಾಲೂಕಿನ ಬಹುತೇಕ ತೋಟದ ಮನೆಗಳಿಗೆ ಕಳೆದ ಒಂದೆರಡು ತಿಂಗಳಿಂದಲೂ ವಿದ್ಯುತ್ ಇಲ್ಲದೆ ಪರಿತಪಿಸುವಂತಾಗಿದ್ದು ಇದಕ್ಕೆ ಹೆಸ್ಕಾಂ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಹಾಗೂ ತಾಲೂಕು ಘಟಕದ ವತಿಯಿಂದ ಹೆಸ್ಕಾಂ ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.ಪಟ್ಟಣದ ಇಂಡಿ ರಸ್ತೆಯಲ್ಲಿರುವ ಹೆಸ್ಕಾಂ ಕಚೇರಿ ಆವರಣದಲ್ಲಿ ಸೋಮವಾರದಂದು ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದಲ್ಲಿ ಹಲವಾರು ರೈತ ಮುಖಂಡರು ಮಾತನಾಡಿ ವಸ್ತಿ ಮನೆಗಳಿಗೆ ಸಮರ್ಕ ವಿದ್ಯುತ್ ಸರಬರಾಜು ಮಾಡಬೇಕು ಅಸಮರ್ಕ ವಿದ್ಯುತ್ ಸರಬರಾಜನಿಂದ ಮೋಟಾರ್ ಕೇಬಲ್ ಕಳ್ಳತನದ ಹಾವಳಿ ಹೆಚ್ಚಾಗಿದೆ ಹಾಗೂ ಭಯದ ವಾತಾವರಣದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ ರೈತರ ಮಕ್ಕಳು ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ ಕೂಡಲೇ ಸರ್ಕಾರ ಹೆಸ್ಕಾಂ ಅಧಿಕಾರಿಗಳಿಗೆ ತೋಟದ ವಸ್ತಿ ಮನೆಗಳಿಗೆ ಸಂಜೆ ವಿದ್ಯುತ್ ನೀಡಲು ಸೂಚನೆ ನೀಡಬೇಕು ಎಂದು ಮನವಿ ಪತ್ರ ಸಲ್ಲಿಸಿದರು. ನಂತರ ಮನವಿಗೆ ಸ್ಪಂದಿಸಿದ ಹೆಸ್ಕಾಂ ಎಇಇ ಪ್ರಭುಸಿಂಗ ಹಜೇರಿ ಮಾತನಾಡಿ, ರೈತರ ಮನವಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಲಾಗುವುದು ಮೇಲಾಧಿಕಾರಿಗಳ ಸೂಚನೆಯಂತೆ ವಿದ್ಯುತ್ ನೀಡಲಾಗುತ್ತದೆ ಸಮಯ ನೀಡಿ ಎಂದಾಗ. ಹೋರಾಟಗಾರರು ಸ್ಪಂದಿಸಿ ಧರಣಿ ಸತ್ಯಾಗ್ರಹ ಹಿಂಪಡೆದುಕೊಂಡು. ಇದೇ ಸಂದರ್ಭದಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಶಂಕರಗೌಡ ಹಿರೇಗೌಡ ರೇಖಾ ಪಾಟೀಲ ರೈತ ಮುಖಂಡರುಗಳಾದ ಸಂಗನಗೌಡ ಬಿರಾದಾರ ರಮೇಶ ದಳವಾಯಿ ಸಂಪತ್ ಜಮಾದಾರ ಅಜೀಜ ಯಲಿಗಾರ ರಾಮು ದೇಸಾಯಿ ವೀರೇಶ ಕುದುರಿ ಶಿವಯ್ಯ ವಸ್ತ್ರದ ನಾಗೇಂದ್ರ ಇಂಡಿ ರಾಜು ಸಿಂದಗೇರಿ ಶರಣಗೌಡ ಪಾಟೀಲ ಚಂದ್ರಮಾ ನಾಯ್ಕೋಡಿ ಗುರು ಜಡಗೊಂಡ ರಾಚಯ್ಯ ಹಿರೇಮಠ ಶಿವಪ್ಪ ನಾಯ್ಕೋಡಿ ಸೇರಿದಂತೆ ಹಲವಾರು ಜನ ರೈತ ಮುಖಂಡರು ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು ಪಾಲ್ಗೊಂಡಿದ್ದರು.