ರೈತ ದಿನಾಚರಣೆರೈತರು ಮಣ್ಣಿನ ಫಲವತ್ತತೆ ಕಾಪಾಡಿಕೊಂಡು ಗುಣಮಟ್ಟದ ಆಹಾರ ಉತ್ಪಾದನೆ ಮಾಡುತ್ತಿರುವುದು ಶ್ಲ್ಯಾಘನೀಯ

Farmer's Day It is commendable that farmers are maintaining soil fertility and producing quality fo

ರೈತ ದಿನಾಚರಣೆರೈತರು ಮಣ್ಣಿನ ಫಲವತ್ತತೆ ಕಾಪಾಡಿಕೊಂಡು ಗುಣಮಟ್ಟದ ಆಹಾರ ಉತ್ಪಾದನೆ ಮಾಡುತ್ತಿರುವುದು ಶ್ಲ್ಯಾಘನೀಯ

ಹಾವೇರಿ 23 : ಬದಲಾಗುತ್ತಿರುವ ಸನ್ನಿವೇಷಗಳಲ್ಲಿ, ರೈತರು ಮಣ್ಣಿನ ಫಲವತ್ತತೆ ಕಾಪಾಡಿಕೊಂಡು ಗುಣ ಮಟ್ಟದ ಆಹಾರ ಉತ್ಪಾದನೆ ಮಾಡಿ, ಸ್ವಾವಲಂಬನೆ ಜೀವನ ಅನುಸರಿಸುತ್ತಿರುವುದು ಶ್ಲ್ಯಾಘನೀಯ ಎಂದು ಜಂಟಿ ಕೃಷಿ ನಿರ್ದೇಶಕ ಮಲ್ಲಿಕಾರ್ಜುನ ಹೇಳಿದರು. 

ನಗರದ ಹಾವೇರಿ ತಾಲೂಕು ಪಂಚಾಯತಿ ಸಭಾ ಭವನದಲ್ಲಿ ಸೋಮವಾರ ಕೃಷಿ ಇಲಾಖೆ ವತಿಯಿಂದ  ಆಯೋಜಿಸಲಾದ ರೈತ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

ಕೋವಿಡ್ ನಂತಹ ತುರ್ತು ಪರಿಸ್ಥಿತಿಯಲ್ಲಿ ದೇಶದ ಎಲ್ಲಾ ಉದ್ಧಿಮೆಗಳು  ಸ್ಥಗಿತಗೊಂಡ ಸಂದರ್ಭದಲ್ಲೂ ಸಹ ಆಹಾರ ಉತ್ಪಾದನೆಯಲ್ಲಿ ದೇಶವು ಸ್ವಾವಲಂಬನೆ ಹೊಂದಲು ಕಾರಣೀಕರ್ತರಾದ ರೈತರಿಗೆ ನಮನಗಳು ಎಂದರು. 

ತಾಲೂಕ ಸಹಾಯಕ ಕೃಷಿ ನಿರ್ದೇಶಕ ವೀರಭದ್ರ​‍್ಪ.ಬಿ.ಹೆಚ್ ಮಾತನಾಡಿ, ಭಾರತದ ಐದನೇ ಪ್ರಧಾನ ಮಂತ್ರಿಯಾದ ಚೌಧರಿ ಚರಣ್ ಸಿಂಗ್‌ರವರು ಭಾರತೀಯ ರೈತರ ಜೀವನವನ್ನು ಸುಧಾರಿಸಲು ಅನೇಕ ನೀತಿಗಳನ್ನು ಪರಿಚಯಿಸಿದರು. ಜೈ ಜವಾನ ಜೈ ಕಿಸಾನ ಎಂಬ ಪ್ರಸಿದ್ಧ ಘೋಷಣೆಯನ್ನು ಅವರು ಅನುಸರಿಸಿದರು. ನಮ್ಮ ದೇಶದ ರೈತರು ಮಾಡುತ್ತಿರುವ ಮಹತ್ತರ ಕೆಲಸಗಳನ್ನು ಗೌರವಿಸಲು ಚೌಧರಿ ಚರಣ ಸಿಂಗ್ ರವರ ಜನ್ಮದಿನವಾದ ಡಿಸೆಂಬರ್ 23ರನ್ನು ರಾಷ್ಟ್ರೀಯ ರೈತರ ದಿನಾಚರಣೆ ಅಥವಾ ಕಿಸಾನ್ ದಿವಸ್ ವನ್ನಾಗಿ ಆಚರಿಸಲಾಗುತ್ತದೆ ಎಂದು ಹೇಳಿದರು.ಜೈಕಿಸಾನ್ ಕಂಪನಿಯ ಪ್ರತಿನಿಧಿ ಶರತ ಮೈದೂರ ರವರು ಮಣ್ಣು ಪರೀಕ್ಷೆಯ ಮಹತ್ವ ಹಾಗೂ ರಸಗೊಬ್ಬರಗಳ ಸಮರ​‍್ಕ ಬಳಕೆ ಕುರಿತು ಉಪನ್ಯಾಸ ನೀಡಿದರು.  

ರೈತ ಸಂಘಟನೆಯ ಸುರೇಶ ಛಲವಾದಿ ಅವರು ಮಾಜಿ ಪ್ರಧಾನಿಗಳಾದ ಚೌಧರಿ ಚರಣ ಸಿಂಗ್ ಅವರ ಜೀವನ ಚರಿತ್ರೆ ಕುರಿತು ಮಾಹಿತಿ ನೀಡಿದರು.  

ಹನುಮಂತಪ್ಪ ಹುಚ್ಚಣ್ಣನವರ ಮಾತನಾಡುತ್ತಾ ರಸಗೊಬ್ಬರಗಳ ಮೇಲಿನ ಅವಲಂಬನೆ ಕಡಿಮೆ ಮಾಡಿ ಸಾವಯವ ಕೃಷಿ, ಸಹಜ ಕೃಷಿ ಪದ್ದತಿಗಳತ್ತ ರೈತರು ಒಲವು ತೋರಿಸಬೇಕಾದ ಅವಶ್ಯಕತೆ ಇದೆ ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಕೃಷಿಯಲ್ಲಿ ವಿಶೇಷ ಸಾಧನೆ ತೋರಿದ ಕಬ್ಬೂರ ಗ್ರಾಮದ ಬಸಪ್ಪ ಹೊಸಳ್ಳಿ, ಕೋಣನತಂಬಿಗೆ ಗ್ರಾಮದ ಬೀರ​‍್ಪ ರಿತ್ತಿಕುರುಬರ, ಕರ್ಜಗಿ ಗ್ರಾಮದ ಚನ್ನಬಸಪ್ಪ ಸುಳ್ಳಳ್ಳಿ, ಬೆನಕನಹಳ್ಳಿ ಗ್ರಾಮದ ದೇವಲಪ್ಪ ಲಮಾಣಿ, ಕೆರಿಕೊಪ್ಪ ಗ್ರಾಮ ಹನುಮಂತಪ್ಪ ತಳವಾರ ಅವರುಗಳನ್ನು ಸನ್ಮಾನಿಸಲಾಯಿತು.   

ಕಾರ್ಯಕ್ರಮದಲ್ಲಿ ಉಪ ಕೃಷಿ ನಿರ್ದೇಶಕ ಜಿ.ಡಿ.ಕೃಷ್ಣಮೂರ್ತಿ, ಭುವನೇಶ್ವರ ಶಿಡ್ಲಾಪುರ, ಶಿವಬಸಪ್ಪ ಗೋವಿ, ಡಿಳ್ಳೆಪ್ಪ ಮಣ್ಣೂರ, ಶಿವನಗೌಡ ಗಾಜಿಗೌಡ್ರ, ಮಂಜು ಕದಮ, ಶಿವಯೋಗಿ ಹೊಸಗೌಡ್ರ, ರಾಜೇಸಾಬ ತರ್ಲಘಟ್ಟ, ಬಸವರಾಜ.ಡಿ, ತಾಲ್ಲೂಕು ಕೃಷಿಕ ಸಮಾಜ, ಜೈಕಿಸಾನ್ ಎಂ.ಸಿ.ಎಫ್ ಕಂಪನಿ ಪ್ರತಿನಿಧಿಗಳು ಮತ್ತು ವಿವಿಧ ರೈತ ಸಂಘಟನೆಗಳು, ತಾಲೂಕಿನ ಕೃಷಿ ಸಖಿ, ಪಶು ಸಖಿಯರು, ಹಾವೇರಿ ಕೃಷಿ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಇತರೆ ರೈತ ಮುಖಂಡರು ರೈತ ಮಹಿಳೆಯರು ಉಪಸ್ಥಿತರಿದ್ದರು. 

ಕೃಷಿ ಅಧಿಕಾರಿ ಬಸನಗೌಡ ಪಾಟೀಲ ಸ್ವಾಗತಿಸಿದರು. ಆತ್ಮಾ ಅಧಿಕಾರಿ  ಚಂದ್ರಶೇಖರ ಎಸ್‌.ಕೆ ವಂದಿಸಿದರು