ದ್ವಿತೀಯ ಪಿ.ಯು ವಿದ್ಯಾರ್ಥಿಗಳ ಬೀಳ್ಕೊಡುಗೆ

Farewell of Secondary PU students

ದ್ವಿತೀಯ ಪಿ.ಯು ವಿದ್ಯಾರ್ಥಿಗಳ ಬೀಳ್ಕೊಡುಗೆ 

ಯಮಕನಮರಡಿ 05: ಸ್ಥಳೀಯ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಯಮಕನಮರಡಿಯ 2024-25 ನೇ ಸಾಲಿನ ಪಾರಿತೋಷಕ ವಿತರಣೆ ಹಾಗೂ ದ್ವಿತೀಯ ಪಿ.ಯು ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭ ವು ಕಾಲೇಜಿನ ಸಭಾಭವನದಲ್ಲಿ ಜರುಗಿತು.  

ಶ್ರೀಕ್ಷೇತ್ರ ಹುಣಸಿಕೊಳ್ಳಮಠದ ರಾಚೋಟಿ ಮಹಾಸ್ವಾಮಿಗಳು ಆಶಿರ್ವಚನ ನೀಡಿ ಮಾತನಾಡುತ್ತ ವಿದ್ಯಾರ್ಥಿಗಳು ನಿರಂತರ ಪರಿಶ್ರಮದಿಂದ ಮಾತ್ರ  ಯಶಸ್ಸು ಗಳಿಸಲು ಸಾಧ್ಯವಿದೆ ಒಂದು ಕಾರ್ಯದಲ್ಲಿ ತೊಡಗಿದ ಮೇಲೆ ಅದರಲ್ಲಿ ಸಂಪೂರ್ಣವಾಗಿ ಪರಿಶ್ರಮ ಹಾಕಿದರೆ ಹೇಗೆ ಉತ್ತಮ ಫಲ ಸಿಗುತ್ತದೆ ಎಂಬುದಕ್ಕೆ ದೃಷ್ಟಾಂತದ ಮೂಲಕ ವಿದ್ಯಾರ್ಥಿಗಳಿಗೆ ಮನೋಸ್ಥೈರ್ಯ ತುಂಬಿದರು.  

ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಧ್ಯಾಪಕ ಪಿ.ಜಿ.ಕೊಣ್ಣೂರ ಮಾತನಾಡಿ ಇಂದಿನ ವಿದ್ಯಾರ್ಥಿಗಳು ಮೊಬೈಲ್‌ಗೆ ದಾಸರಾಗಿದ್ದು ಇದರಿಂದಾಗಿ ಅವರಿಗೆ ಶಿಕ್ಷಣದಲ್ಲಿ ಆಸಕ್ತಿ ಕಡಿಮೆಯಾಗಿ ಅವರ  ಶೈಕ್ಷಣಿಕ ಪ್ರಗತಿ ಕುಂಠಿತಗೊಂಡಿದೆ. ಆದಕಾರಣ ಸಮೂಹ ಮಾದ್ಯಮಗಳನ್ನು ಅವಶ್ಯಕ್ಕೆ ತಕ್ಕಂತೆ ಮಾತ್ರ ಉಪಯೋಗಿಸಬೇಕು ಎಂದು ತಿಳಿಸಿದರು. 

ಬಿ.ಬಿ ಕೊಡ್ಲಿ ಉಪನ್ಯಾಸಕರು 2024-25 ನೇ ಸಾಲಿನ ಮಹಾವಿದ್ಯಾಲಯದ ವರದಿವಾಚನ ನೀಡಿ ಕಾಲೇಜಿನ ಪ್ರಗತಿ, ಬೆಳವಣಿಗೆ ಹಾಗೂ ಶೈಕ್ಷಣಿಕ ಸಾಧನೆಯ ಕುರಿತು ವಿವರಿಸಿದರು. ಸಾಂಸ್ಕೃತಿಕ ವಿಭಾಗದ ಪಾರಿತೋಷಕ ವಿತರಣೆಯನ್ನು ದೀಪಾ ತೇಲಿ, ಇಕೋ ಕ್ಲಬ್ ಹಾಗೂ ಬಿ.ಐ.ಎಸ್ ಕ್ಲಬ್ ವತಿಯಿಂದ ಜರುಗಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಎ.ಎ.ಕಿವಂಡಾ, ವಾರ್ಷಿಕ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕ್ರೀಡಾ ಸಂಯೋಜಕ ಬಿ.ಬಿ.ಕೊಡ್ಲಿ ನಡೆಸಿಕೊಟ್ಟರು. 

ವಿಜೇತರಿಗೆ ಬಹುಮಾನ ವಿತರಣೆ ನಗದು ವಿತರಣೆ ಹಾಗೂ ಪದಕಗಳ ವಿತರಣೆಯನ್ನು ಸಭೆಯಲ್ಲಿದ್ದ ಎಲ್ಲ ಅತಿಥಿ ಗಣ್ಯರು ನೀಡಿದರು. ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ವೀರಣ್ಣ ಬಿಸಿರೊಟ್ಟಿ ಸದಸ್ಯರಾದ ಸಿದ್ದಪ್ಪ ಶಿಳ್ಳಿ, ಪಾರಿಸ ಮಲಾಜಿ, ಅಸ್ಲಂ ಪಕಾಲಿ, ಶಿವಕುಮಾರ ಪೋತದಾರ, ರಾಜು ಮಾರ್ಯಾಳಿ, ಭರಮಾ ದೂಪದಾಳಿ ಮತ್ತಿತರರು ಭಾಗವಹಿಸಿದ್ದರು. 

ಗಂಗಮ್ಮ ಮಠಪತಿ ಉಪನ್ಯಾಸಕಿ ಪ್ರಾರ್ಥನೆ ಸಲ್ಲಿಸಿದರು. ಎಸ್‌.ಎ.ರಾಮನಕಟ್ಟಿ ಸ್ವಾಗತ ಕೋರಿದರು. ಎಸ್‌.ಆರ್‌.ತಬರಿ ನಿರೂಪಿಸಿದರು. ಉಪನ್ಯಾಸಕಿ ಸುಪ್ರಿಯಾ ಮಲಗೌಡನವರ ವಂದಿಸಿದರು.