2024-25ನೇ ಸಾಲಿನ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

Farewell ceremony for the students of the year 2024-25

2024-25ನೇ ಸಾಲಿನ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ 

ಧಾರವಾಡ 04: ಡಾ. ಡಿ.ಜಿ. ಶೆಟ್ಟಿ ಎಜ್ಯುಕೇಷನಲ್ ಸೊಸೈಟಿಯ ಟಿ.ಎಮ್‌. ಶೆಟ್ಟಿ ಮೆಮೊರಿಯಲ್ ಇಂಡಿಪೆಂಡೆಂಟ್ ಪಿಯು ಕಾಲೇಜಿನಲ್ಲಿ ಶೈಕ್ಷಣಿಕ ವರ್ಷ 2024-25ನೇ ಸಾಲಿನ “ದ್ವಿತೀಯ ವರ್ಷದ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ”ವನ್ನು ಹಮ್ಮಿಕೊಳ್ಳಲಾಗಿತ್ತು. 

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೋ.ರಶ್ಮಿ ಎಮ್ ಶೆಟ್ಟಿ  ನಿರ್ದೇಶಕರು, ಅಕಾಡೆಮಿಕ ಆ್ಯಂಡ್ ಅಡಮಿಷನ್ಸ್‌ ಇವರು ವಿದ್ಯಾರ್ಥಿಗಳು ಶಿಸ್ತಿನ ಜೀವನ ಅಳವಡಿಸಿಕೊಂಡು ಕಾಲೇಜಿಗೆ ಕೀರ್ತಿ ತಂದು ಕಾಲೇಜು ಹಾಗೂ ಪಾಲಕರಿಗೆ ಒಳ್ಳೆಯ ಹೆಸರು ತರುವಂತೆ ಪ್ರಯತ್ನಿಸಬೇಕು ಎಂದರು. 

ಕಾರ್ಯಕ್ರಮದಲ್ಲಿ ಕನ್ನಡ ಉಪನ್ಯಾಸಕಿಯಾದ ಪ್ರೋ.ಜಿ.ಎ.ಯಲಿಗಾರ ಇವರು ಮಾತನಾಡಿ, ವಿದ್ಯಾರ್ಥಿಗಳು ‘ಪುಸ್ತಕಗಳಿಗಿಂತ ಒಳ್ಳೆಯ ಸ್ನೇಹಿತರಿಲ್ಲ’ ಎನ್ನುವುದನ್ನು ಅರಿತುಕೊಂಡು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ತಮ್ಮ ಮುಂದಿನ ಭವಿಷ್ಯವನ್ನು  ಅತ್ಯುತ್ತಮವಾಗಿ ರೂಪಿಸಿಕೊಳ್ಳಬೇಕೆಂದು ಹೇಳಿದರು. 

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರು ಹಾಗೂ ಪ್ರಾಂಶುಪಾಲರಾದ ಡಾ. ಡಿ ಜಿ. ಶೆಟ್ಟಿಯವರು ಮಾತನಾಡಿ, ವಿದ್ಯಾರ್ಥಿಗಳು ಇತ್ತಿಚೀನ ದಿನಗಳಲ್ಲಿ ಕಷ್ಟ ಪಟ್ಟು ಓದುವುದರ ಜೊತೆಗೆ ಬುದ್ದಿವಂತಿಕೆಯಿಂದ ಚುರುಕಾಗಿ ಕೆಲಸ ಮಾಡುವುದರಿಂದ ಯಶಸ್ಸು ಸಾಧಿಸಬಹುದು ಹಾಗೂ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳುವುದರಿಂದ ಒಳ್ಳೆಯ ಜೀವನವನ್ನು ಪಡೆಯಬಹುದು ಎಂದು ಬುದ್ದಿವಾದ ಹೇಳಿದರು. ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಸ್ನಾತಕೋತ್ತರ ಪದವಿ ಮಾಡಬೇಕಾದುದು ಅನಿವಾರ್ಯವಾಗುತ್ತಿದೆ. ಈ ದಿನಮಾನಗಳಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇಬ್ಬರೂ ಕೂಡಾ ಪ್ರಚಲಿತ ವಿದ್ಯಮಾನಗಳಿಗೆ ತಕ್ಕಂತೆ ತಮ್ಮನ್ನು ತಾವು ನವೀಕರಿಸಿಕೊಂಡು ಮುನ್ನಡೆಯಬೇಕೆಂದು ಹೇಳಿದರು. 

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಪ್ರೋ.ಎಸ್‌.ಎನ್‌.ಗುಡಿ, ಪ್ರೋ. ಸುವರ್ಣಲತಾ ಹೆಗಡಿ, ಪ್ರೋ. ಗುರುಬಸು ಮಡಾಸಿ, ಪ್ರೋ. ವೀರಣ್ಣ ಹಂಪಣ್ಣವರ,ಪ್ರೋ.ಲತಾ ಹಿರೇಮಠ, ಪ್ರೋ. ಕೀರ್ತಿ ಕೆಂಗಾರರವರು ಉಪಸ್ಥಿತರಿದ್ದರು. 

ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ಕು. ಸಹನಾ ರಾಯಬಾಗಕರ ಹಾಗೂ ಸುಮಿತ್ರ ತಡಸ  ನಿರೂಪಿಸಿದರು. ಯಶೋಧಾ ಮುದಿಯಪ್ಪನವರ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಸಾಕ್ಷಿ ಭಟ್ಟ ಸ್ವಾಗತಿಸಿದರು. ವಿಜಯಲಕ್ಷ್ಮೀ ರಾಯಬಾಗಕರ ವಂದಿಸಿದರು.