ಮುಧೋಳ ತಾಲೂಕಿನ ಲೋಕಾಪುರದ ಪಂಚಗಟ್ಟಿ ಮಠ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಏರಿ​‍್ಡಸಿದ್ದ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

Farewell ceremony for PUC students who passed out at Panchagatti Math Independent Undergraduate Col

ಮುಧೋಳ ತಾಲೂಕಿನ ಲೋಕಾಪುರದ ಪಂಚಗಟ್ಟಿ ಮಠ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಏರಿ​‍್ಡಸಿದ್ದ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

ಬಾಗಲಕೋಟೆ   10: ಸಾಸಿವೆಯಷ್ಟು ಆತ್ಮವಿಶ್ವಾಸವಿದ್ದರೆ ಸಾಗರದಷ್ಟು ಸಾಧನೆ ಮಾಡಬಹುದು ಸತತ ಅಧ್ಯಯನ ನಿರಂತರ ಪ್ರಯತ್ನ ಇವುಗಳು ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ ಸೂತ್ರಗಳಾಗಿವೆ ಎಂದು  ಬಸವೇಶ್ವರ ಕಲಾ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ ಆರ್ ನಾಗರಾಜುರವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಅವರು ಮುಧೋಳ ತಾಲೂಕಿನ ಲೋಕಾಪುರದ ಪಂಚಗಟ್ಟಿ ಮಠ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಏರಿ​‍್ಡಸಿದ್ದ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ಕಾಕಚೈಷ್ಠೆ ಬಕಧ್ಯಾನ  ಶ್ವಾನ  ನಿದ್ರಾ ಅಲ್ಪಹಾರಿ ಗೃಹತ್ಯಾಗಿ ಮುಂತಾದ ಪಂಚಲಕ್ಷಣಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳು ಪ್ರಯತ್ನ ಏಕಾಗ್ರತೆ ಜಾಗರೂಕತೆ ಮಿತ ಆಹಾರ ಐಷಾರಾಮ ಸೌಕರ್ಯಗಳಿಂದ  ಹೊರ ಬಂದರೆ  ಯಶಸ್ಸಿನ ಗುರಿಯನ್ನು ತಲುಪಲು ಸಾಧ್ಯ ಎಂದು ತಿಳಿಸಿದರು. ವಿದ್ಯಾರ್ಥಿಗಳು ಭಾಷಾ ಪ್ರೌಢಿಮೆ ಶುದ್ಧ ಬರವಣಿಗೆಯ ಕೌಶಲ್ಯ ಮತ್ತು ನಿಮ್ಮ ನಿಮ್ಮ ಸಾಮರ್ಥ್ಯವನ್ನು ನೀವು ನಂಬುವುದು ಆಲಸ್ಯವನ್ನು ಹೋಗಲಾಡಿಸಿ ಯಶಸ್ಸಿನ ಮನೋಭಾವನೆಯ ಗುರಿಯನ್ನು ಹೊಂದಿರಬೇಕು ಎಂದು ಅವರು ತಿಳಿಸಿದರು. ವಿದ್ಯಾರ್ಥಿಗಳು ನಿರ್ದಿಷ್ಟವಾದ ಗುರಿಯನ್ನು ಇಟ್ಟುಕೊಂಡು ನಾವು ಇದನ್ನು ಸಾಧಿಸಿಯೇ ತೀರುತ್ತೇವೆ ಎಂಬ ಮನೋಭಾವನೆಯನ್ನು ಹೊಂದಿ ಅಭ್ಯಾಸ ಮಾಡಬೇಕು. ಫೇಲು. ಪಾಸು. ಅಂಕಗಳು ಎಂಬ ಸನ್ನಿವೇಶದಿಂದ ಹೊರಬಂದು ಅಭ್ಯಾಸ ಮಾಡಬೇಕು ಫೇಲ್ ಆದ ತಕ್ಷಣ ಜೀವನವೇನು ಬರಡಾಗುವುದಿಲ್ಲ ಪಾಸ್ ಆದ ತಕ್ಷಣ ಜೀವನವೇನು ರೂಪುಗೊಳ್ಳುವುದಿಲ್ಲ ನಮ್ಮ ನಮ್ಮ ಸಾಮರ್ಥ್ಯದ ಮೇಲೆ ನಮ್ಮ ಜೀವನವು ರೂಪುಗೊಳ್ಳುತ್ತದೆ ಎಂಬ ಅರಿವನ್ನು ತಾವು ಹೊಂದಿರಬೇಕು ಎಂದು ತಿಳಿಸಿದರು   ಸಮಾರಂಭದ ಅಧ್ಯಕ್ಷತೆಯನ್ನು ದಾನೇಶ್ವರಿ ವಿದ್ಯಾ ಸಂಸ್ಥೆಯ ಅಧ್ಯಕ್ಷರು ರಾಜಕೀಯ ಧುರೀಣರು ಸಮಾಜ ಸೇವಕರು ಆದ ಶ್ರೀ ರಮೇಶ್ ಪಂಚಗಟ್ಟಿ ಮಠ ಅವರು ವಹಿಸಿದ್ದರು.ಸಿಬ್ಬಂದಿ ವರ್ಗದವರಾದ ಶ್ರೀ ಮದನ ದೇಶಪಾಂಡೆ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀಮತಿ ಎಲ್ ಎಸ್ ಗಂಜಿ ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಪಿ ಬಿ  ಶಂಭೋಜಿ ಅವರು ವಂದಿಸಿದರು. ಪ್ರಾಚಾರ್ಯರಾದ ಐ ಜಿ ಧಾರವಾಡ ಮಠ  ಅವರು ಸ್ವಾಗತಿಸಿ ಪ್ರಾಸ್ತಾವಿಕ ಭಾಷಣವನ್ನು ಮಾಡಿದರು. ಉಪನ್ಯಾಸಕರಾದ ಶ್ರೀ ವಿಠ್ಠಲ್ ರವರು ಪರಿಚಯ ಭಾಷಣ ಮಾಡಿ ಕಾರ್ಯಕ್ರಮ ನಿರೂಪಿಸಿದರು.