ಬಜೆಟ್ ಮಂಡನೆಗೆ ಅಭಿಮಾನಿಗಳ ಸಂಭ್ರಮಾಚರಣೆ

Fans celebrate the budget presentation

ಬಜೆಟ್ ಮಂಡನೆಗೆ ಅಭಿಮಾನಿಗಳ ಸಂಭ್ರಮಾಚರಣೆ 

ಗದಗ 06: 16ನೇ ದಾಖಲೆಯ ಬಜೆಟ್ ಮಂಡಿಸುತ್ತಿರುವ ಬಜೆಟ್ ಅಂಶಗಳು ಸರ್ವರಿಗೂ ಅನುಕೂಲಕರವಾಗಿರಲಿ ಹಾಗೂ ಮುಖ್ಯಮಂತ್ರಿಗಳು ಐದು ವರ್ಷಗಳ ಕಾಲ ಯಶಸ್ವಿಯಾಗಿ ಅಧಿಕಾರ ಮುಂದುವರೆಸಲಿ ಎಂದು ನಗರದ ಬಯಲು ಆಂಜನೇಯ ದೇವಸ್ಥಾನದಲ್ಲಿ  ವಿಶೇಷ ಪೂಜೆ ಹಾಗೂ ರಾಕೇಶ ಸಿದ್ದರಾಮಯ್ಯ ಐಟಿಐ  ಕಾಲೇಜಿನ ಅವರಣದಲ್ಲಿ ಸಂಭ್ರಮ ಸಂಭ್ರಮಾಚರಣೆ ಆಚರಿಸಲಾಗುವದು.  ಇಂದು 7ರಂದು  ಜಿಲ್ಲೆಯ ಸಮಾಜ ಬಾಂಧವರು, ಸಿದ್ದರಾಮಯ್ಯನವರ  ಅಭಿಮಾನಿಗಳು ಹಾಗೂ ಹಿತೈಷಿಗಳು ತಮ್ಮ ತಮ್ಮ ಗ್ರಾಮಗಳಲ್ಲಿರುವ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಿ ಸಿದ್ದರಾಮಯ್ಯರವರಿಗೆ ಶುಭ ಹಾರೈಸಲು ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷರಾದ ಫಕೀರ​‍್ಪ ಹೆಬಸೂರ ಹಾಗೂ ಸಮಾಜದ ಯುವ ಮುಖಂಡರಾದ ರಾಮಕೃಷ್ಣ ರೊಳ್ಳಿ  ಅವರು ತಿಳಿಸಿದ್ದಾರೆ.