ಕುಟುಂಬ ಕಲ್ಯಾಣ ವಿಧಾನ, ಆರೋಗ್ಯ ಜಾಗೃತಿ ಕಾರ್ಯಕ್ರಮ

ಲೋಕದರ್ಶನ ವರದಿ

ಯಲುಬುರ್ಗಾ  06: ಕುಟುಂಬ ಕಲ್ಯಾಣ ವಿಧಾನಗಳ ಕುರಿತು 'ಚಿಕ್ಕ ಕುಟುಂಬ ಸುಖಿ ಕುಟುಂಬ' ಅದರಿಂದ ಮನೆಯ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ, ಮಕ್ಕಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಬಹುದು. ಎಂದು ಜಿಪಂ ಸದಸ್ಯೆ ನೀಲಮ್ಮ ಭಾವಿಮನಿ ಹೇಳಿದರು.

ಬಳ್ಳಾರಿ ಧರ್ಮ ಪ್ರಾಂತ ಅಭಿವೃದ್ಧಿ ಸಂಸ್ಥೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ  ಜೂಲಕಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ "ಕುಟುಂಬ ಕಲ್ಯಾಣ ವಿಧಾನ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮ"ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ತಾಲೂಕ ಆರೋಗ್ಯಾಧಿಕಾರಿ ಡಾ, ಮಂಜುನಾಥ ಬ್ಯಾಲಹುಣಸಿ ಪ್ರಾಸ್ತಾವಿಕ ಮಾತನಾಡಿ, ಆರೋಗ್ಯ ಕಾಳಜಿಯಿಂದ ತಾಯಿ ಮಕ್ಕಳ ಆರೋಗ್ಯ ಸುಧಾರಿಸುತ್ತದೆ ಆದ್ದರಿಂದ ತಾಯಂದಿರು ಐ.ಯು.ಸಿ.ಡಿ (ವಂಕಿ) ವಿಧಾನವನ್ನು ಅನುಸರಿಸಲು ತಿಳಿಸಿದರು ಮತ್ತು ಕುಟುಂಬ ಕಲ್ಯಾಣ ವಿಧಾನಗಳಿಂದಾಗುವ ಪ್ರಯೋಜನೆಗಳ ಕುರಿತು ಮಾತನಾಡಿದರು. 

ತಾಪಂ ಸದಸ್ಯ ಶರಣಪ್ಪ ಈಳಗೇರ ಮಾತನಾಡಿ ಗ್ರಾಮದ ಆರೋಗ್ಯ ದೃಷ್ಟಿಯಿಂದ ಇಂತಹ ಕಾರ್ಯಕ್ರಮಗಳು ಅತ್ಯವಶ್ಯಕವಾಗಿದ್ದು, ತಾಯಂದಿರು ಆರೋಗ್ಯದ ಕುರಿತು ಹೆಚ್ಚಿನ ಗಮನ ಹರಿಸಬೇಕೆಂದು ಕಿವಿ ಮಾತು ಹೇಳಿದರು.

ಪಿ.ವಾಯ್. ಮ್ಯಾಗೇರಿ ನಿವೃತ್ತ ಹಿರಿಯ ಆರೋಗ್ಯ ಸಹಾಯಕರು ಮಾತನಾಡಿ ಕುಟುಂಬ ಕಲ್ಯಾಣ ವಿಧಾನಗಳಾದ ಶಾಶ್ವತ ಹಾಗೂ ತಾತ್ಕಾಲಿಕ ವಿಧಾನಗಳ ಬಗ್ಗೆ ಹಾಗೂ ವಿಶೇಷವಾಗಿ "ಎನ್.ಎಸ್.ವಿ" (ನೋ ಸ್ಕಾಲ್ಪೆಲ್ ವ್ಯಾಸಕ್ಟಮಿ) ಹಾಗೂ ಸಾಂಕ್ರಾಮಿಕ ಕಾಯಿಲೆಗಳ ಕುರಿತು ತಿಳಿಸಿದರು.

ಸಿಡಿಪಿಓ ಶರಣಮ್ಮ ಕಾರನೂರ ಮಾತನಾಡಿ ತಾಯಿಯ ಹಾಗೂ ಮಗುವಿನ ಆರೋಗ್ಯಕ್ಕೆ ಕುಟುಂಬ ಕಲ್ಯಾಣ ವಿಧಾನಗಳು ಅವಶ್ಯಕ ಹಾಗೂ ಪೌಷ್ಟಿಕಾಂಶಯುಕ್ತ ಆಹಾರ ಸೇವನೆಯ ಕುರಿತು ಮಾತನಾಡಿದರು.

ರಂಗಚೇತನ ಜಾನಪದ ಕಲಾತಂಡದಿಂದ ಆರೋಗ್ಯ ಜಾಗೃತಿ ಗೀತೆಗಳು ಹಾಗೂ ರಾಷ್ಟ್ರೀಯ ಕಾರ್ಯಕ್ರಮಗಳು ಮತ್ತು ಸಾಂಕ್ರಾಮಿಕ ಕಾಯಿಲೆಗಳ ಕುರಿತು ಬೀದಿ ನಾಟಕ ಪ್ರದಶರ್ಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅದ್ಯಕ್ಷೆ ನಿರ್ಮಲಾ ಕೊತಬಾಳ ವಹಿಸಿದ್ದರು, ಉದ್ಘಾಟಕರಾಗಿ ಜಿಪಂ ಸದಸ್ಯೆ ನೀಲಮ್ಮ ಭಾವಿಮನಿ, ಡಾ. ಅಂಜುಮ್ತಾಜ್ ವೈದ್ಯಾಧಿಕಾರಿಗಳು ಬಳೂಟಗಿ, ಆರ್.ಬಿ.ಎಸ್.ಕೆ. ವೈದ್ಯಾಧಿಕಾರಿಗಳಾದ ಡಾ.ಭರತೇಶ, ಡಾ. ಸಭಿಹಾ, ಡಾ. ಜಯಣ್ಣ, ಅಂಗನವಾಡಿ ಮೇಲ್ವಿಚಾರಕಿಯರಾದ ಲಲಿತಾ ನಾಯಕ ಮತ್ತು ರೇಣುಕಾ, ಆರೋಗ್ಯ ಇಲಾಖೆಯ ಸಿಬ್ಬಂಧಿ ಅಂಗನವಾಡಿ ಹಾಗೂ ಆಶಾ ಕಾರ್ಯಕತರ್ೆಯರು ಉಪಸ್ಥಿತರಿದ್ದರು.