ಯುವಜನಾಂಗಕ್ಕೆ ಕುಟುಂಬಗಳು ಸಂಸ್ಕೃತಿ ಸಂಸ್ಕಾರ ನೀಡಲಿ: ಶೀಗಳು

Families should provide cultural education to the youth: Shias

ಯುವಜನಾಂಗಕ್ಕೆ ಕುಟುಂಬಗಳು ಸಂಸ್ಕೃತಿ ಸಂಸ್ಕಾರ ನೀಡಲಿ: ಶೀಗಳು 

ಸಿಂದಗಿ 22: ಯುವ ಜನಾಂಗದವರಿಗೆ ನಮ್ಮ ದೇಶ ನಾಡು ನುಡಿ ಸಂಸ್ಕೃತಿ ಆಚಾರ -ವಿಚಾರ  ಅವರ ಜೀವನದಲ್ಲಿ ಉತ್ತಮ ಜ್ಞಾನ  ಸಂಸ್ಕಾರ ಮಾನವೀಯ ಮೌಲ್ಯಗಳನ್ನು ತುಂಬುವ ಮೂಲಕ ಅವರಿಗೆ ಮನ ಮನೆ ಸಮಾಜ ಬೆಳಗುವ ರೀತಿಯಲ್ಲಿ ಸಂಸ್ಕಾರ ನೀಡಲು  ತಂದೆ- ತಾಯಿ ಗುರು ಹಿರಿಯರ ಪಾತ್ರ ಮೇಲು ಕಾಣಬೇಕು. ಸಮಾಜ ಪರಿವರ್ತನೆ ಹೊಂದಲು ನಾಡು ನುಡಿ ಗುರು ಭಕ್ತಿ ಯಲ್ಲಾಲಿಂಗ ಮಹಾರಾಜರ ಆದರ್ಶದೊಂದಿಗೆ ಧರ್ಮದ ತಳಪಾಯದ ಮೂಲಕ ಉತ್ತಮ ವ್ಯಕ್ತಿಯಾಗಬೇಕು ಎಂದು ಪಟ್ಟಣದ ಸಾರಂಗಮಠ -ಗಚ್ಚಿನಮಠದ ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.  ತಾಲೂಕಿನ ಬಂದಾಳ ಗ್ರಾಮದ ಹುಡೇದ ಲಕ್ಷ್ಮೀ ದೇವಿ ಜಾತ್ರಾಮಹೋತ್ಸವ ಅಂಗವಾಗಿ ಮುಗಳಖೋಡ ಯಲ್ಲಾಲಿಂಗ ಮಹಾರಾಜರ  ಮಹಾ ಪುರಾಣ ಪ್ರವಚನದಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿ ತಂದೆ ತಾಯಿ ಗುರು ಹಿರಿಯರು ಮಕ್ಕಳಿಗೆ ಸತ್ಸಂಗದಲ್ಲಿ ಭಾಗವಹಿಸುವಂತೆ ಹೆಚ್ಚು ಪ್ರೇರಣೆ ನೀಡಬೇಕು. ಗುರುಸ್ಮರಣೆ ಮಾಡುವ ಮೂಲಕ  ಧರ್ಮವಂತರಾಗಿ ಸುಂದರ ಬದುಕು ಕಟ್ಟಿಕೊಂಡು  ಮುಗಳಖೋಡ ಯಲ್ಲಾಲಿಂಗ ಮಹಾರಾಜರ ಬದುಕಿನ ಜೀವನದ ಚಿಂತನೆ ಆಲಿಸಬೇಕು ಅವರ  ತತ್ವ ಆದರ್ಶಗಳು ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದರು.  ಕನ್ನೊಳ್ಳಿ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು ಮಾತನಾಡಿ ಶರಣರ ಸಂತರ ಜೀವನ ಚರಿತ್ರೆ ಆಲಿಸುವದರಿಂದ ಮನಸ್ಸು ಪರಿಶುದ್ಧವಾಗುತ್ತದೆ ಎಂದರು.  ತಾಲೂಕು ಜಂಗಮಾಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಶಂಕರಲಿಂಗಯ್ಯ ಶಾಂ ಹಿರೇಮಠ ಮಾತನಾಡಿ  ಧರ್ಮದ ದಾರಿಯಲ್ಲಿ ನುಡಿದಂತೆ ನಡೆಯಬೇಕು .ಗುರು ಹಿರಿಯರನ್ನು ಹಾಗೂ ತಂದೆ  ತಾಯಿಯರನ್ನು ಯಾವಗಲ್ಲು ಪ್ರೀತಿ ವಿಶ್ವಾಸದಿಂದ ಕಾಣಬೇಕು ಎಂದರು.  ಶಾಸಕರ ಪತ್ನಿ ನಾಗರತ್ನ ಅಶೋಕ ಮನಗೂಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ನೈತಿಕ ಜೀವನದಲ್ಲಿ ಶರಣರ ತತ್ವ ಆದರ್ಶಗಳು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದರು.  ನಿವೃತ್ತ ಕೃಷಿ ಅಧಿಕಾರಿ ವಿಶ್ವನಾಥ ಬ ಕುರಡಿ ಮಾತನಾಡಿ  ತನು ಮನ ಧನ ನೀಡುವ ಮೂಲಕ  ಶರಣರ ಸಂತರ ದರ್ಶನ ಮಾಡಬೇಕು ನಮ್ಮ ಗುರು ಪರಂಪರೆ ಮುಂದುವರಿಸಿಕೊಂಡು ಹೋಗೂವ  ಸಂಕಲ್ಪ ಇರಬೇಕು ಎಂದರು.  ಶಲವಡಿ ಚರಂತಿಮಠದ ವೀರಯ್ಯ ಶಾಸ್ತ್ರಿಗಳು ಯಲ್ಲಾಲಿಂಗ ಮಹಾರಾಜರ ಮಹಾಪುರಾಣ ಪ್ರವಚನದ ಪುರಾಣಿಕರಾಗಿ ಮಾತನಾಡಿ ಗುರು ಭಕ್ತಿಯಲ್ಲಿ ನಿತ್ಯ ನಿರಂತರವಾಗಿ ದಾನ ಧರ್ಮ ಪರೋಪಕಾರದಲ್ಲಿ ತೋಡಗಿದಾಗ ನಮ್ಮ ಜೀವನ ಪಾವನವಾಗುತ್ತದೆ . ಭಕ್ತಿಯಿಂದ ಗುರುವನ್ನು ಮನದಲ್ಲಿ ನೆನೆಯಬೇಕು. ಕುಟುಂಬದಲ್ಲಿ ಇರುವ ಮಕ್ಕಳು ನಮ್ಮ ನಾಡಿಗೆ ಧರ್ಮದ ಕೀರ್ತಿ ತರುವಂತ ವ್ಯಕ್ತಿಯಾಗಿ ಸಮಾಜದಲ್ಲಿ ಬಾಳುವಂತೆ ಮಾರ್ಗದರ್ಶನ ನೀಡಬೇಕು ಎಂದರು.   ವೇದಿಕೆ ಮೇಲೆ ನಿಂಗಯ್ಯ ಹಿರೇಮಠ, ಗೊಲ್ಲಾಳಪ್ಪ ಬಿರಾದಾರ, ಮಲ್ಲಿಕಾರ್ಜುನ ಬೂದಿಹಾಳ, ಶ್ರೀಶೈಲ ಕುಂಬಾರ, ಬಸವರಾಜ ಯಳಮೇಲಿ, ಪದ್ಮಣ್ಣ ದೇವೂರ, ಅಶೋಕ ತಳವಾರ ಇದ್ದರು. ಗ್ರಾಮದ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಪಾಠ ಶಾಲೆಯ ನಲಿ ಕಲಿ ಶಿಕ್ಷಕ ಮಕ್ಕಳ ಸಾಹಿತಿ ಬಸವರಾಜ ಅಗಸರ ಅವರಿಗೆ ಸನ್ಮಾನಿಸಿ ಗೌರವಿಸಿದರು.  ಬಿಲ್ಲಾಡ ಹಿರೇಮಠದ ಖ್ಯಾತ ಸಂಗೀತಗಾರ ಮಾಹಾಂತಯ್ಯ ಹಿರೇಮಠ ಸಂಗೀತ ಸೇವೆ ನೆರವೇರಿಸಿದರು. ಬಸವರಾಜ ಮಳ್ಳಿ ಸುಂದರವಾಗಿ ತಬಲಾ ನುಡಿಸಿದರು. ನಿಂಗನಗೌಡ ಬಿರಾದಾರ ನಿರೂಪಿಸಿ ಸ್ವಾಗತಿಸಿ ವಂದಿಸಿದರು. ಗ್ರಾಮದ ಸಕಲ ಸದ್ಭಕ್ತರು ಇದ್ದರು.