ಮನುಷ್ಯನ ವ್ಯಕ್ತಿತ್ವವಿಕಾಸ ಗೊಳಿಸುವ ಜಾತ್ರೆಗಳು ನಡೆಯಬೇಕು- ಅಗಡಿ ಅಕ್ಕಿ ಮಠದ ಶ್ರೀಗಳು
ಶಿಗ್ಗಾವಿ 19: ಅನ್ನ ದಾಸೋಹ, ಜ್ಞಾನ ದಾಸೋಹ ಜಾತ್ರೆಗಳು ನಡೆಯಬೇಕು, ಮನುಷ್ಯ ವ್ಯಕ್ತಿತ್ವವನ್ನ ವಿಕಾಸಗೊಳಿಸುವ ಜಾತ್ರೆಗಳು ಅವಶ್ಯವಾಗಿ ನಡೆಯಬೇಕು ಎಂದು ಅಗಡಿ ಅಕ್ಕಿ ಮಠದ ಶ್ರೀಗಳು ಹೇಳಿದರು. ತಾಲೂಕಿನ ಹಿರೇಬೆಂಡಿಗೇರಿ ಗ್ರಾಮದಲ್ಲಿ ನಡೆದ ಬಸವಣ್ಣ ದೇವರ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ದರ್ಮ ಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಹೈಟೆಕ್ ವೃಧಾಶ್ರಮಗಳಲ್ಲಿ ಹಡೆದ ತಂದೆ-ತಾಯಿಗಳನ್ನ ಇಟ್ಟು ಬಂದು ಇಂತಹ ಧಾರ್ಮಿಕ ಕಾರ್ಯಕ್ರಮ ಮಾಡುವುದು ಬೇಡ, ಜಾತ್ರೆ ಬದುಕಿನ ಯಾತ್ರೆ ಆಗಬೇಕು, ಅಂದಾಗ ಬದುಕಿನ ಉದ್ದೇಶ ತಿಳಿಯುತ್ತದೆ, ಒಗ್ಗಟ್ಟಲ್ಲಿ ಬಲವಿದೆ ಎಂಬಂತೆ ಬಾವೈಕ್ಯತೆಯನ್ನ ಸಾರುವ ಗ್ರಾಮ ಇದಾಗಿದೆ,
ಭಕ್ತಿಯ ಬಂಗಾರದಗೇರಿಯಾಗಿ ಈ ಹಿರೇಬೆಂಡಿಗೇರಿ ಗ್ರಾಮ ಬೆಳೆಯಲಿ ಎಂದರು. ಬಂಡಿವಾಡ ಸೀತಾಗಿರಿಯ ಡಾ. ಎ ಸಿ ವಾಲಿ ಮಹರಾಜ ಮಾತನಾಡಿ ಹೆಸರಿಗಾಗಿ ಜ್ಞಾನ ಬಿತ್ತಿದವರಿಲ್ಲ, ಜ್ಞಾನದ ಹಸಿವನ್ನ ನೀಗಿಸುವುದಕ್ಕಾಗಿ ಶರಣರಾದವರು ಇದ್ದಾರೆ, ಬಸವಣ್ಣನ ಅಣಿತಿಯಂತೆ ನಡೆದುಕೊಂಡರೆ ಸಮಾಜದಲ್ಲಿ ಸಮಾನತೆ ಮತ್ತು ಸುಧಾರಣೆ ಸಾದ್ಯವಿದೆ ಎಂದರು. ಶಿಗ್ಗಾವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು, ಹಿರೇಮಣಕಟ್ಟಿಯ ವಿಶ್ವಾರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಬಿಜೆಪಿ ಮುಖಂಡ ಭರತ್ ಬೊಮ್ಮಾಯಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಸಂಗಮೇಶ ಕಂಬಾಳಿಮಠ, ಮಾಜಿ ನಿರ್ದೇಶಕ ಗಂಗಣ್ಣ ಸಾತಣ್ಣವರ, ಎಪಿಎಂಸಿ ಮಾಜಿ ಅಧ್ಯಕ್ಷ ತಿಪ್ಪಣ್ಣ ಸಾತಣ್ಣವರ, ಸುಭಾಸ ಚವ್ಹಾಣ , ಸಿದ್ದಾರ್ಥಗೌಡ ಪಾಟೀಲ, ಶಿವಾನಂದ ಮ್ಯಾಗೇರಿ, ರವಿಂದ್ರ ಕುಡವಕ್ಕಲಿಗೇರ, ಗ್ರಾ.ಪಂ ಅಧ್ಯಕ್ಷೆ ಈರವ್ವ ಹಡಪದ, ಶಂಕರಗೌಡ್ರ ಪೊಲೀಸ್‌ಗೌಡ್ರ, ಗಂಗಾಧರ ಗೋರವರ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.