ಜಾತ್ರೆಗಳು ಭಾವೈಕ್ಯತಾ ಸಾರ : ಮಂಜುನಾಥ

Fairs Bhavaikyata Sara : Manjunath

ಜಾತ್ರೆಗಳು ಭಾವೈಕ್ಯತಾ ಸಾರ : ಮಂಜುನಾಥ

ಹೂವಿನ ಹಡಗಲಿ 12: ಶತಶತ ಮಾನಗಳಿಂದ ನಮ್ಮ ಪೂರ್ವಜರು ಹಬ್ಬ ಹರಿದಿನಗಳು ಬಂದರೆ ಎಲ್ಲರೂ ಒಕ್ಕಾಗಿ ಐಕ್ಯತಾ ಭಾವನೆಯಿಂದ ಕೂಡಿ ಆಚರಣೆ ಮಾಡುತ್ತಾರೆಂದು ನಾಗತಿಬಸಾಪುರ ಹಾಲಸ್ವಾಮಿ ಮಠದ  ಡಾ. ಎಂ.ಪಿ.ಎಂ ಮಂಜುನಾಥ ಸ್ವಾಮಿ ಹೇಳಿದರು.ತಾಲೂಕಿನ ಹಿರೇಹಡಗಲಿ ಗ್ರಾಮದಲ್ಲಿ ಗ್ರಾಮದೇವತೆ ಉರಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ ಊರಮ್ಮ ದೇವಿ ಸಾಂಸ್ಕೃತಿಕ ಕಲಾ ಟ್ರಸ್ಟ್‌ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯನಗರ ಇವರ ಪ್ರಾಯೋಜನೆಯ ಅಡಿ ಗೊಂಬೆ ಕುಣಿತ ್ಘ ಕೀಲು ಕುದುರೆ ಕಾರ್ಯ ಕ್ರಮದ ಚಾಲನೆ ನೀಡಿ ಮಾತನಾಡಿದ ಅವರು ಹಿಂದೂ ಸಂಪ್ರದಾಯದಂತೆ ಎಲ್ಲಾವರ್ಗದ ಸಮುದಾಯದವರು ಸೇರಿ ಸಡಗರ ಸಂಬ್ರಮದಿಂದ ಜಾತ್ರೆಯಲ್ಲಿ ನಾಟಕ ಬಯಲಾಟ ಮುಂತಾದ ಜಾನಪದ ಕಲಾ ಪ್ರಕಾರಗಳು ಪ್ರದರ್ಶನ ಗೊಳ್ಳುತ್ತವೆ ಇಂತಹ ಕಾರ್ಯಕ್ರಮಗಳಿಂದ ನಮ್ಮ ಬದುಕಿನಲ್ಲಿ, ಆಚಾರ ವಿಚಾರ ನಡೆ ನುಡಿ ್ಘ ಪದ್ಧತಿಗಳು ಗೊತ್ತಾಗುತ್ತವೆ, 

 ಅದರಂತೆ ಎಲ್ಲರೂ ಒಂದೇ ಎಂಬ ಮನೋಭಾವ ಬೆಳೆಯುತ್ತದೆ ಎಂದು ಹೇಳಿದರು.  ಗ್ರಾ.ಪಂ ಅಧ್ಯಕ್ಷ ಹಲಗೇರಿ ಸೋಮಶೇಖರ್, ಗ್ರಾ.ಪಂ ಸದಸ್ಯರಾದ ಅಂಜಿನಪ್ಪ ಐನಳ್ಳಿ ಕೋಟಪ್ಪ ಡಿ ನಾಗರಾಜ ಮುಖಂಡರಾದ ಮಾಜಿ ಜಿ.ಪಂ ಸದಸ್ಯ ಜಿ. ವಸಂತ್ ಕೆ ಶಿವಯೋಗೆಪ್ಪ ಗುಂಡಿ ಚರಣರಾಜ, ಕ.ಜಾ.ಪ ಜಿಲ್ಲಾ ಅಧ್ಯಕ್ಷ ಕೆ.ಸಿ.ಪರಶುರಾಮ್, ಪಿ.ಎಸ್‌.ಐ.ಭರತ್ ಪ್ರಕಾಶ್ ಡಿ.ಪಿ. ಯಲಗಚ್ಚಿನ ಪ್ರಕಾಶ್, ಬಿ ಮೌನೇಶ್, ಶಾಂತಮ್ಮ, ಕೊಟ್ರೇಶ, ಎಸ್‌. ದಾನಪ್ಪ ಮೈಲಪ್ಪ ಟಿ ದುರುಗೇಶ್ ಇತರರು ಉಪಸ್ಥಿತರಿದ್ದರು. ನಂತರ ಗೊಂಬೆ ಕುಣಿತ ಬಿ. ರಾಜಕುಮಾರ್ ಮತ್ತು ತಂಡ ಕೀಲು ಕುದುರೆ, ಅಂಜಿನಪ್ಪ ಹೆಚ್ ಮತ್ತು ತಂಡದವರು ಪ್ರದರ್ಶನ ನೀಡಿ ನೆರೆದ ಜನಸ್ತೋಮವನ್ನು ಮನೋರಂಜಿಸಿದರು. ಆರಂಭದಲ್ಲಿ ಕೆ.ಬೀಮೇಶ್ ಸ್ವಾಗತಿಸಿ ನಿರೂಪಿಸಿದರು. ಕೊನೆಯಲ್ಲಿ ಅಶೋಕ್ ವಂದಿಸಿದರು