ಗಮನಸೆಳೆದ ಸರಕಾರಿ ಯೋಜನೆಗಳ ವಸ್ತುಪ್ರದರ್ಶನ

ಧಾರವಾಡ .08: ಉತ್ತರ ಕನರ್ಾಟಕದ ಪ್ರಸಿದ್ದ ಜಾತ್ರೆಯಾದ ಮುರಘಾಮಠದ ಜಾತ್ರಾಮಹೋತ್ಸವದ ಅಂಗವಾಗಿ ಸರಕಾರಿ ಯೋಜನೆಗಳ ಪ್ರದರ್ಶನ ಮತ್ತು ಮಾಹಿತಿಗಾಗಿ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ  ಮುರುಘಾಮಠದ ಆವರಣದಲ್ಲಿ ಆರಂಭಿಸಿರುವ ಮಳಿಗೆಯನ್ನು  ಮಾಜಿ ಸಚಿವ ಹಾಗೂ ಜಗದ್ಗುರು ಮುರಘರಾಜೇಂದ್ರ ಉಚಿತ ಪ್ರಸಾದ ನಿಲಯ ಟ್ರಸ್ಟ್  ಕಾಯರ್ಾಧ್ಯಕ್ಷರಾದ ವಿನಯ ಕುಲಕಣರ್ಿ ಉದ್ಘಾಟನೆ ಮಾಡಿದರು.

ಪ್ರದರ್ಶನ ಮಳಿಗೆಯನ್ನು ಉದ್ಘಾಟಿಸಿ, ಮಾಜಿ ಸಚಿವ ಹಾಗೂ ಜಗದ್ಗುರು ಮುರಘರಾಜೇಂದ್ರ ಉಚಿತ ಪ್ರಸಾದ ನಿಲಯ ಟ್ರಸ್ಟ್  ಕಾಯರ್ಾಧ್ಯಕ್ಷರಾದ ವಿನಯ ಕುಲಕಣರ್ಿ ಅವರು ಮಾತನಾಡಿ, ಸಕರ್ಾರದ ಬಹು ಮುಖ್ಯ ಯೋಜನೆಗಳನ್ನು ಜಾತ್ರೆ, ಉತ್ಸವ ಮತ್ತು ರಾಷ್ಟ್ರೀಯ ಹಬ್ಬಳ ಆಚರಣೆ ಸಂದರ್ಭದಲ್ಲಿ ಪ್ರದಶರ್ಿಸುವದರಿಂದ ಸಾರ್ವಜನಿಕರಿಗೆ ಹೆಚ್ಚು ಉಪಯುಕ್ತವಾಗುತ್ತದೆ. ಜಾತ್ರೆಗಳಿಗಳಿಗೆ ಗ್ರಾಮೀಣ ಭಾಗದ ಜನರು ಹೆಚ್ಚಾಗಿ ಬರುವದರಿಂದ ಅರ್ಹ ಫಲಾನುಭವಿಗಳಿಗೆ ಸಕರ್ಾರಿ ಯೋಜನೆಗಳ ಸೌಲತ್ತು, ಸೌಲಭ್ಯ ಮತ್ತು ಮಾಹಿತಿ ಸುಲಭವಾಗಿ ಅವರಿಗೆ ತಲುಪುತ್ತದೆ.

ವಾತರ್ಾ ಇಲಾಖೆ ಈ ಮಾಹಿತಿ ಮಳಿಗೆ ಮೂಲಕ ಉತ್ತಮ ಕಾರ್ಯ ಮತ್ತು ಸಕರ್ಾರದ ಯೋಜನೆಗಳ ಪ್ರಚಾರ ರಾಯಭಾರಿಯಾಗಿ ಕೆಲಸ ಮಾಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

   ವಾತರ್ಾ ಸಹಾಯಕ ಅಧಿಕಾರಿ ಡಾ.ಎಸ್.ಎಮ್.ಹಿರೇಮಠ ಸ್ವಾಗತಿಸಿ, ಮಾಹಿತಿ ಮಳಿಗೆಯ ವಿವರಣೆ ನೀಡಿದರು.

        ಟ್ರಸ್ಟ್ ಉಪಾಧ್ಯಕ್ಷ  ನಾಗರಾಜ ಪಟ್ಟಣಶಟ್ಟಿ,  ಕಾರ್ಯದಶರ್ಿ ಡಿ.ಬಿ.ಲಕಮನಹಳ್ಳಿ, ಹಿರಿಯರಾದ ಶರಣಪ್ಪ ಕೊಟಬಾಗಿ,   ಮೋಹನ ಹೊಸಮನಿ, ಶಿವಶಂಕರ ಹಂಪಣ್ಣವರ, ಸಿದ್ದು ತೇಜಿ, ಶೇಖರ ಕವಳಿ, ನಂದೇಶ್ವರ ನಾಯಕ, ಮಂಜುನಾಥ ಕಟ್ಟಿ ಸೇರಿದಂತೆ ಇತರರು ಭಾಗವಹಿಸಿದ್ದರು.

         ವಸ್ತು ಪ್ರದರ್ಶನದಲ್ಲಿ: ಬಡವರಿಗಾಗಿ ಜಾರಿಗೆ ತಂದಿರುವ ಯೋಜನೆಗಳ ಚಿತ್ರಣಗಳು, ಆಕರ್ಷಕ ನಾಮಫಲಕಗಳು, ಯೋಜನೆಗಳ ಕುರಿತು ಮಾಹಿತಿ ವಸ್ತು ಪ್ರದರ್ಶನವೂ ಸಾರ್ವಜನಿಕರ ಗಮ ಸೆಳೆಯುತ್ತಿವೆ.

      ಮುರುಘಾಮಠದ ಆವರಣದಲ್ಲಿ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ರಾಜ್ಯ ಸರಕಾರದ ಯೋಜನೆಗಳ ಕುರಿತು ಸಾರ್ವಜನಿಕರ ಮಾಹಿತಿಗಾಗಿ ಶುಕ್ರವಾರದಿಂದ ಪ್ರಾರಂಭವಾದ ವಸ್ತುಪ್ರದರ್ಶನ ಸಾರ್ವಜನಿಕರ ಗಮನ ಸೇಳೆಯುತ್ತಿದೆ. ವಸ್ತುಪ್ರದರ್ಶನದಲ್ಲಿ ಮಾತೃಶ್ರೀ, ಬಡವರ ಬಂಧು ಅಮೃತ ಯೋಜನೆ, ಹಸಿರು ಕನರ್ಾಟಕ, ಜನತಾ ದರ್ಶನ, ಋಣ ಮುಕ್ತ ಪರಿಹಾರ ಕಾಯ್ದೆ, ಕಾಯಕ ಯೋಜನೆಗಳು ಜನರ ಮತ್ತು ವಿದ್ಯಾಥರ್ಿಗಳ ಗಮನ ಸೆಳೆಯುತ್ತಿವೆ. 

     ಹಲವು ಯೋಜನೆಗಳ ಮಾಹಿತಿ: ಮುಖ್ಯಮಂತ್ರಿ ಕುಮಾರಸ್ವಾಮಿ ಜಾರಿಗೆ ತಂದಿರುವ ಬೆಳೆ ಸಮೀಕ್ಷೆ, ಶಾಲಾ ಕಾಲೇಜುಗಳಿಗೆ ಸೌಕರ್ಯ, ದಿಶಾ, ಬಡ್ಡಿ ರಹಿತಿ ಸಾಲ ನೀಡುವ ಕಾಯಕ ಯೋಜನೆ, ಅವಕಾಶ ವಂಚಿತರ ಅಭ್ಯುದಯಕ್ಕೆ ಮಹಾಹೆಜ್ಜೆ ಕೈಗಾರಿಕಾ ಕ್ಲಸ್ಟರ್ ಯೋಜನೆ, ಮಾತೃಶ್ರೀ ಯೋಜನೆ, ನಿರುದ್ಯೋಗಿ ನಿವಾರಣೆಗೆ ನಿಶ್ಚಯ ಯೋಜನೆ, ಆಧುನಿಕ ಕೃಷಿ ಯೋಜನೆ, ಆಯುಷ್ಮಾನ್ ಭಾರತ, ಕನರ್ಾಟಕ ರೈತ ಬಂಧು ಸೇರಿದಂತೆ ವಿವಿಧ ಯೋಜನೆಗಳ ಚಿತ್ರಣಗಳ ವಸ್ತು ಪ್ರದರ್ಶನವನ್ನು ಸಾರ್ವಜನಿಕರು, ವಿದ್ಯಾಥರ್ಿಗಳು ಕುತೂಹಲದಿಂದ ವೀಕ್ಷಣೆ ಮಾಡುತ್ತಿದ್ದಾರೆ. ಮುರುಘಾಮಠದ ಆವರಣದಲ್ಲಿರುವ ಮೃತ್ಯುಂಜಯ ಪ್ರೌಢ ಶಾಲೆ ಮೈದಾನದ ಪಕ್ಕದಲ್ಲಿ  ವಸ್ತು ಪ್ರದರ್ಶನವನ್ನು ಆಯೋಜಿಸಿದ್ದರಿಂದ  ವಿವಿಧ ಗ್ರಾಮ, ಜಿಲ್ಲೆಗಳಿಂದ ಆಗಮಿಸುವ ಮುರುಘಾಮಠದ ಭಕ್ತರಿಗೆ ಮತ್ತು ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಿದೆ. 

ವಸ್ತು ಪ್ರದರ್ಶನ ಶುಕ್ರವಾರದಿಂದ ಮಠದ ಜಾತ್ರೆ ಮುಕ್ತಾಯವಾಗುವ ಫೆಬ್ರವರಿ 11 ರವರೆಗೆ ನಡೆಯಲಿದೆ.