ಕಾರ್ಯನಿರ್ವಾಹಕ ಅಭಿಯಂತರ ಅಸ್ಮ ಕಾತುನ್ ಅಧಿಕಾರ ಸ್ವೀಕಾರ

Executive Engineer Asma Khatun assumes office

ಕಾರ್ಯನಿರ್ವಾಹಕ ಅಭಿಯಂತರ ಅಸ್ಮ ಕಾತುನ್ ಅಧಿಕಾರ ಸ್ವೀಕಾರ 

ಬಳ್ಳಾರಿ 15: ನಗರದಲ್ಲಿ ಗುಲಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ ಕಾರ್ಯನಿರ್ವಾಹಕ ಅಭಿಯಂತರರು(ವಿ),ಕಾರ್ಯ ಮತ್ತು ಪಾಲನೆ ವಿಭಾಗ ಕಚೇರಿಯ ಕಾರ್ಯನಿರ್ವಾಹಕ ಅಭಿಯಂತರರು ಚಲನವಲನ ವಿಭಾಗದ ಅಭಿಯಂತರರಾಗಿ ಅಸ್ಮ ಕಾತುನ್ ಇಂದು ಅಧಿಕಾರವನ್ನು ಸ್ವೀಕರಿಸಿದರು.  

ಈ ಹಿಂದೆ ಈ ಹುದ್ದೆಯಲ್ಲಿದ್ದ ಚಂದ್ರಶೇಖರ್ ಎಸ್ ಅವರು ಕಾತುನ್ ಅವರಿಗೆ ಇತ್ತೀಚೆಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಕಲಬುರಗಿ ಕಚೇರಿಯ ಆದೇಶದ ಮೇರೆಗೆ ಬಳ್ಳಾರಿಯ ಕಾರ್ಯನಿರ್ವಾಹಕ ಅಭಿಯಂತರರು ವಿದ್ಯುತ್ ಕಾರ್ಯ ಮತ್ತು ಪಾಲನೆ ವಿಭಾಗ ಬಳ್ಳಾರಿ ಕಚೇರಿಯಲ್ಲಿ ಅಧಿಕಾರವನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕಚೇರಿಯ ಸಿಬ್ಬಂದಿಗಳು ಇತರರು ಆಗಮಿಸಿದ್ದರು.