ಬೆಳಗಾವಿ: ಈಜು ಸ್ಪರ್ಧೆಯಲ್ಲಿ ವಿಶೇಷ ಪ್ರದರ್ಶನ

ಲೋಕದರ್ಶನ ವರದಿ

ಬೆಳಗಾವಿ 04:  ಪೋಂಡಾದ ಸ್ಟಮೀನಾ ಸ್ಫೋಟ್ಸ್ ಹಮ್ಮಿಕೊಂಡಿದ್ದ 15ನೇ ಅಖಿಲ ಭಾರತ ಸುಹಾಸಿನಿ ಆರ್. ಲೋಟ್ಲೀಕರ್ ಈಜು ಸ್ಪರ್ಧೆಯಲ್ಲಿ ವಿಶೇಷ ಪ್ರದರ್ಶನ ನೀಡಿದ ಬೆಳಗಾವಿ ಜೈನ್ ಹೆರಿಟೇಜ್ ಶಾಲೆ ವಿದ್ಯಾಥರ್ಿಗಳು ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.

ಜಾನ್ಹವಿ ಪೆಡ್ನೇಕರ್ 100 ಮೀಟರ್ನಲ್ಲಿ ಫ್ರೀಸ್ಟೈಲ್, ಬ್ಯಾಕ್ಸ್ಟ್ರೋಕ್, ಬ್ರೆಸ್ಟ್ಸ್ಟ್ರೋಕ್, ಬಟರ್ಫ್ಲೈ ಮತ್ತು ವೈಯಕ್ತಿಕ ಮಿಡ್ಲೇನಲ್ಲಿ ಚಿನ್ನದ ಪದಕ ಪಡೆದುಕೊಂಡರು.

ಸಿದ್ಧಾಂತ ಕರಾಡ್ಕರ್ 50 ಮೀಟರ್ ಫ್ರೀಸೈಲ್, ಬ್ಯಾಕ್ಸ್ಟ್ರೋಕ್, ಬ್ರೆಸ್ಟ್ಸ್ಟ್ರೋಕ್ ಮತ್ತು ಬಟ್ ಫ್ಲೈನಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ವೇದಾಂತ ಪಾಟೀಲ, 50 ಮೀಟರ್ ಈಜಿನಲ್ಲಿ 3ನೇ ಸ್ಥಾನ ಪಡೆದು ಕಂಚಿನ ಪದಕ ಪಡೆದುಕೊಂಡರು.

ಆರೋಹಿ ಚಿತ್ರಗಾರ 50 ಮೀಟರ್ ಫ್ರೀಸ್ಟೈಲ್ ಈಜಿನಲ್ಲಿ 2ನೇ ಸ್ಥಾನದೊಂದಿಗೆ ಬೆಳ್ಳಿ ಹಾಗೂ ಬ್ಯಾಕ್ ಸ್ಟ್ರೋಕ್ನಲ್ಲಿ 3ನೇ ಸ್ಥಾನ ಪಡೆದು ಕಂಚಿನ ಪದಕ ಗಳಿಸಿದರು. 

ಶಿವಂ ನಡಗದಕರ 200 ಮೀಟರ್ ಮಿಡ್ಲ್ರಿಲೆಯಲ್ಲಿ ಪ್ರಥಮ ಸ್ಥಾನ, 200 ಮೀಟರ್ ಫ್ರೀಸ್ಟೈಲ್ನಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಗಳಿಸುವ ಮೂಲಕ ಶಾಲೆಗೆ ಚ್ಯಾಂಪಿಯನ್ಶಿಪ್ ತಂದುಕೊಟ್ಟಿದ್ದಾರೆ. ವಿಜೇತ ಮಕ್ಕಳನ್ನು ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ಸಿಬ್ಬಂದಿ ಅಭಿನಂದಿಸಿದ್ದಾರೆ.