ಲೋಕದರ್ಶನ ವರದಿ
ಬೆಳಗಾವಿ : ವಿಧಾನ ಪರಿಷತ್ನ ಸಕರ್ಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾರ್ಗದರ್ಶನದಲ್ಲಿ ಶ್ರೀ ಸಾಯಿ ಕ್ರೆಡಿಟ್ ಸೌಹಾರ್ದ ಸಹಕಾರಿಯು ಉತ್ತಮ ರೀತಿಯಲ್ಲಿ ಗ್ರಾಹಕರಿಗೆ ಸೇವೆಗಳನ್ನು ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಬೆಳಗಾವಿಯ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಅನೀಲ ಮುಳವಾಡಮಠ ಹೇಳಿದರು.
ಅವರು ಬುಧವಾರ ಇಲ್ಲಿನ ಬಡಕಲ ಗಲ್ಲಿಯಲ್ಲಿ ಸಹಕಾರಿಯ 3ನೇ ಶಾಖೆಯನ್ನು ಹಾಗೂ ಇ ಸ್ಟಾಪಿಂಗ್ ವ್ಯವಸ್ಥೆಯನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಹಕರ ವಿಶ್ವಾಸದೊಂದಿಗೆ ಸಹಕಾರಿಯ ಆಡಳಿತ ಮಂಡಳಿಯವರು ಕಾರ್ಯದೊಂದಿಗೆ ಸಿಬ್ಬಂದಿಗಳ ನಿಸ್ವಾರ್ಥ ಸೇವೆಯಿಂದ ಇಂದು ಗ್ರಾಹಕರ ಅಗತ್ಯ ಸೇವೆಗಳನ್ನು ನೀಡುತ್ತಿದೆ ಎಂದರು. ಶ್ರೀ ಸಾಯಿ ಕ್ರೆಡಿಟ್ ಸೌಹಾರ್ದ ಸಹಕಾರಿಯ ಪ್ರಧಾನ ವ್ಯವಸ್ಥಾಪಕ ಎಮ್.ಬಿ.ಬಡಿಗೇರ ಮಾತನಾಡಿ, ಸಹಕಾರಿಯ ಎಲ್ಲ ಶಾಖೆಗಳಲ್ಲಿ ಇ ಸ್ಟಾಪಿಂಗ್, ಪಹಣಿ ಪತ್ರಿಕೆ, ಬಸ್, ವಿಮಾನ, ರೈಲು ಟಿಕೆಟ್ ಕಾಯ್ದುರಿಸುವಿಕೆ, ವಾಹನಗಳ ವಿಮೆ ಸೇರಿದಂತೆ ಅನೇಕ ಯೋಜನೆಗಳನ್ನು ಗ್ರಾಹಕರಿಗೆ ನೀಡಲಾಗುತ್ತಿದೆ ಎಂದರು.
ನ್ಯಾಯವಾದಿಗಳಾದ ಚಂದ್ರಶೇಖರ ಮಜಗಿ, ಅನೀಲ ಮಾಂಗಳೇಕರ, ಬೆಳಗಾವಿ ಶಾಖೆಯ ಉಪಾಧ್ಯಕ್ಷ ಬಿ.ಬಿ. ಪಾಟೀಲ, ನಿದರ್ೇಶಕರಾದ ಪ್ರವೀಣ ಮೂತಿಮಠ, ಅರುಣ ಮಾನೆ, ಎಸ್.ಆರ್. ಹಿರೇಮಠ, ಅಪ್ಪಾಸಾಹೇಬ ಕೇರೂರೆ, ಗಿರೀಶ ಕತ್ತಿಶೆಟ್ಟಿ ಸೇರಿದಂತೆ ಸಹಕಾರಿಯ ಎಲ್ಲ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.