ಲೋಕದರ್ಶನ ವರದಿ
ರಾಯಬಾಗ 25: ಮತದಾನ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ದೇಶಾದ್ಯಾಂತ ರಾಷ್ಟ್ರೀಯ ಮತದಾನ ದಿನವನ್ನು ಆಚರಿಸಲಾಗುತ್ತಿದೆ. ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಪ್ರತಿಯೊಬ್ಬ ಮತದಾರ ತಪ್ಪದೇ ಚುನಾವಣೆಯಲ್ಲಿ ಮತದಾನ ಮಾಡಬೇಕೆಂದು ಎಸ್ಪಿಎಮ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಪಿ.ಬಿ.ಮುನ್ಯಾಳ ಹೇಳಿದರು.
ಶನಿವಾರ ಪಟ್ಟಣದ ಮಿನಿವಿಧಾನಸೌಧ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮತದಾನದೇಶದ ಪ್ರಜೆಗಳ ಹಕ್ಕಾಗಿದೆ. ತಮಗೆ ನೀಡಿದ ಹಕ್ಕನ್ನು ಚಲಾಯಿಸುವುದರ ಮೂಲಕ ಭ್ರಷ್ಟಾಚಾರ ಮುಕ್ತ ರಾಷ್ಟ್ರ ನಿಮರ್ಾಣಕ್ಕೆ ಕೈ ಜೋಡಿಸಬೇಕೆಂದರು. ದೇಶದಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣೆ ಆಯೋಗ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. ಸದೃಢ ಪ್ರಜಾಪ್ರಭುತ್ವಕ್ಕಾಗಿ ಮತದಾರರ ಸಾಕ್ಷರತೆ ಅವಶ್ಯಕವಾಗಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ತಹಶೀಲ್ದಾರ ಚಂದ್ರಕಾಂತ ಭಜಂತ್ರಿ ಮಾತನಾಡಿ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ರಾಯಬಾಗ ಮತ್ತು ಕುಡಚಿ ಕ್ಷೇತ್ರದಲ್ಲಿ ಮತಗಟ್ಟೆ ಹಂತದಲ್ಲಿ ಅಧಿಕಾರಿಯಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ 10 ಜನ ಬಿಎಲ್ಒ ಗಳಿಗೆ ಪ್ರಶಂಸನಾ ಪತ್ರ ನೀಡಿ ಸತ್ಕರಿಸಿ, ಗೌರವಿಸಲಾಯಿತು. ಮತದಾನ ಅಭಿಯಾನ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪಧರ್ೆಗಳಲ್ಲಿ ವಿಜೇತರಾದ ವಿದ್ಯಾಥರ್ಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು.
ತಾ.ಪಂ.ಇಒ ಪ್ರಕಾಶ ವಡ್ಡರ, ಪ್ರಭಾರಿ ಬಿಇಒ ಎಚ್.ಎ.ಭಜಂತ್ರಿ, ಸಿಡಿಪಿಒ ಸಂತೋಷಕುಮಾರ ಕಾಂಬಳೆ, ಸಾಮಾಜಿಕಅರಣ್ಯ ವಲಯಾಧಿಕಾರಿಎಸ್.ಬಿ.ಹೇರೆಕರ, ಪರಮಾನಂದ ಮಂಗಸೂಳಿ, ಸುದೀಪ ಚೌಗಲಾ, ಕಿರಣದೊಡಮನಿ, ಪ್ರಶಾಂತ ಪಾಟೀಲ, ವಿ.ಬಿ.ರಜಪೂತ ಹಾಗೂ ವಿದ್ಯಾಥರ್ಿಗಳು, ಬಿಎಲ್ಒಗಳು ಉಪಸ್ಥಿತರಿದ್ದರು. ಶಿಕ್ಷಕ ಬಿ.ಎಲ್.ಘಂಟಿ ಸ್ವಾಗತಿಸಿ, ವಂದಿಸಿದರು. ಎ.ಎಸ್.ಕುಂಬಾರ ನಿರೂಪಿಸಿದರು.