ರಾಮದುರ್ಗ: ಒಗ್ಗಟ್ಟನಿಂದ ಸಮಾಜ ಸಂಘಟನೆಗೆ ಎಲ್ಲರೂ ಶ್ರಮಿಸಬೇಕಿದೆ: ಲಕ್ಷ್ಮೀ ಹೆಬ್ಬಾಳ್ಕರ

ಲೋಕದರ್ಶನ ವರದಿ

ರಾಮದುರ್ಗ 17:  ಪಂಚಮಸಾಲಿ ಸಮಾಜದ ಜನತೆ ತಮ್ಮ ಹಕ್ಕು ಪಡೆಯಲು ಒಗ್ಗಟ್ಟು ಪ್ರದಶರ್ಿಸುವುದು ಅವಶ್ಯಕವಾಗಿದೆ. ಅನ್ಯ ಸಮಾಜ ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರನ್ನು ಪ್ರೀತಿಸುತ್ತಾ ಸಮಾಜ ಸಂಘಟನೆ ಮಾಡಬೇಕು. ಬ್ರಿಟೀಷರ ವಿರುದ್ಧ ಹೋರಾಡಿ ಶೌರ್ಯ ಮರೆದ ಚೆನ್ನಮ್ಮಾಜಿ ವಂಶಸ್ಥರಾದ ಪಂಚಮಸಾಲಿ ಸಮಾಜದ ಜನತೆ ಸ್ವಾಭಿಮಾನ, ಧಾನ ಧರ್ಮಕ್ಕೆ ಹೆಸರುವಾಸಿಯಾಗಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಹೇಳಿದರು.

ಪಟ್ಟಣದ ಮರಾಠಾ ಕಲ್ಯಾಣ ಮಂಟಪದಲ್ಲಿ ಶನಿವಾರ ಪಂಚಮಸಾಲಿ ಸಮಾಜದ ತಾಲೂಕಾ ಘಟಕ 2018-19 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ದ್ವೀತಿಯ ಪಿಯುಸಿ ಶೇಕಡಾ 90 ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾಥರ್ಿಗಳಿಗೆ ಏರ್ಪಡಿಸಿದ ಸತ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ರಾಮದುರ್ಗ ತಾಲೂಕಿನಲ್ಲಿ ನಿಮರ್ಿಸುತ್ತಿರುವ ಕಲ್ಯಾಣ ಮಂಟಪದಿಂದ ಸಮಾಜದ ಕಲ್ಯಾಣವಾಗಲಿ ಎಂದು ಆಶಾ ಭಾವನೆ ವ್ಯಕ್ತಪಡಿಸಿದ ಅವರು, ಸರ್ವರೂ ಒಂದಾಗಿ ಸಮಾಜದ ಬಗೆಗೆ ಕಳಕಳಿ ಹೊಂದಿ, ನಿರಂತರ ಪರಿಶ್ರಮವಹಿಸಿ ಕೆಲಸ ನಿರ್ವಹಿಸಿದಲ್ಲಿ ಮಾತ್ರ ನಿಶ್ಚಿತ ಗುರಿ ತಲುಪಲು ಸಾಧ್ಯವಾಗುತ್ತದೆ. ಸಮಾಜದ ಕಲ್ಯಾಣ ಮಂಟಪ ನಿಮರ್ಾಣಕ್ಕೆ 10 ಲಕ್ಷ ರೂ ನೀಡಿದ್ದು, ಸಮಾಜದ ಏಳಿಗೆಗೆ ಶ್ರಮಿಸಲು ತಾವು ಸದಾ ಸಿದ್ಧವೆಂದು ಎಂದರು.

ಮಾಜಿ ಸಚಿವ ಹಾಗೂ ಬೀಳಗಿ ಶಾಸಕ ಮುರಗೇಶ ನಿರಾಣಿ ಮಾತನಾಡಿ, ಸಮಾಜದ ಸರ್ವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಶಕ್ತಾನುಸಾರ ಧನ ಸಂಗ್ರಹಿಸಿ ಕಲ್ಯಾಣ ಮಂಟಪ ನಿಮರ್ಿಸಬೇಕು. ಅಂದಾಗ ಎಲ್ಲರ ಪ್ರೀತಿ ಸಮಾಜದ ಮೇಲೆ ಬರಲು ಸಾಧ್ಯವಿದೆ. ಸಮಾಜದ ಕಲ್ಯಾಣ ಮಂಟಪ ನಿಮರ್ಾಣಕ್ಕೆ ವೈಯಕ್ತಿಕವಾಗಿ 10 ಲಕ್ಷ ರೂ ನೀಡುವುದಾಗಿ ಭರವಸೆ ನೀಡಿದರು.

ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಸಮಾಜದ ಜನತೆ ಪಕ್ಷಬೇಧ ಮರೆತು ನಮ್ಮ ಸಮುದಾಯದ ಮುಖಂಡರಿಗೆ ಬೆನ್ನೆಲುವಾಗಿ ಅವರ ಏಳಿಗೆ ಶ್ರಮಿಸಬೇಕು. ಮಕ್ಕಳಲ್ಲಿ ಸಂಸ್ಕಾರಯುತ ಗುಣ ಬೆಳೆಸುವ ಮೂಲಕ ಸುಶಿಕ್ಷಿತರನ್ನಾಗಿಸಬೇಕೆಂದರು.

ಸನ್ಮಾನ ಸ್ವೀಕರಿಸಿ ನಿವೃತ್ತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಿ.ಬಿ. ಪಾಟೀಲ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಪಿ.ಎಫ್. ಪಾಟೀಲ, ಪಂಚಮಸಾಲಿ ಸಮಾಜದ ಸಂಸ್ಥಾಪಕ ಅಧ್ಯಕ್ಷೆ ಶ್ರೀದೇವಿ ಮಾದನ್ನವರ ಮಾತನಾಡಿದರು. ವೀರರಾಣಿ ಚೆನ್ನಮ್ಮ ಪಂಚಮಸಾಲಿ ಕ್ಷೇಮಾಭಿವೃದ್ಧಿ ಸಂಸ್ಥೆಯ ಕಾರ್ಯದಶರ್ಿ ಎನ್.ಬಿ. ದಂಡಿನದುಗರ್ಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಶೇಕಡಾ 90 ಕ್ಕಿಂತ ಅಧಿಕ ಅಂಕ ಪಡೆದ ಎಸ್.ಎಸ್.ಎಲ್.ಸಿ ಹಾಗೂ ದ್ವೀತಿಯ ಪಿಯುಸಿ ವಿದ್ಯಾಥರ್ಿಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವು ಮಹನಿಯರನ್ನು ಸಮಾಜದ ಪರವಾಗಿ ಸತ್ಕರಿಸಲಾಯಿತು.

ತಾಲೂಕಾ ಗೌರವಾಧ್ಯಕ್ಷ ಶಾಸನಗೌಡ ಪಾಟೀಲ ಸಮಾರಂಭದ ಗೌರವಾಧ್ಯಕ್ಷತೆ ವಹಿಸಿದ್ದರು. ಸಮಾಜದ ತಾಲೂಕಾ ಘಟಕದ ಅಧ್ಯಕ್ಷ ಮಾರುತಿ ಕೊಪ್ಪದ ಅಧ್ಯಕ್ಷತೆ ವಹಿಸಿದ್ದರು.

ಸವದತ್ತಿ ಹರ್ಷ ಶುಗರಸ್ ಲಿ. ವ್ಯವಸ್ಥಾಪಕ ನಿದರ್ೇಶಕ ಚನ್ನರಾಜ ಹಟ್ಟಿಹೊಳಿ, ವೀರರಾಣಿ ಚೆನ್ನಮ್ಮ ಪಂಚಮಸಾಲಿ ಕ್ಷೇಮಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಬಿ.ಎಫ್. ಬಸಿಡೋಣಿ,ಸಮಾಜದ ಮುಖಂಡರಾದ ವೈ. ಎಚ್. ಪಾಟೀಲ, ಟಿ.ಪಿ ಮುನೋಳಿ, ಪರುತಗೌಡ ಪಾಟೀಲ, ಮಲ್ಲಿಕಾಜರ್ುನ ಕೊಪ್ಪದ,ಬಿ. ಎಂ. ಪಾಟೀಲ, ಪ್ರಶಾಂತಗೌಡ ಪಾಟೀಲ, ಉಮೇಶ ಕೊಳವಿ,ಪ್ರೊ. ಬಿ.ಬಿ. ಹರನಟ್ಟಿ,  ಜಿ.ಪಿ. ಕೊಳ್ಳಿ, ಗೌಡಪ್ಪಗೌಡ ಪಾಟೀಲ, ಜಿ.ವ್ಹಿ. ನಾಡಗೌಡ್ರ, ಮಂಜುನಾಥ ನವಲಗುಂದ, ಬಿ.ಎಸ್. ಪಾಟೀಲ. ಮಾರುತಿ ಬಸಿಡೋಣಿ ಸೇರಿದಂತೆ ಇತರರಿದ್ದರು. ಮಹಾಲಿಂಗಪ್ಪ ಇಟ್ನಾಳ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ಎಸ್.ಎಂ ಐನಾಪೂರ ನಿರೂಪಿಸಿದರು. ನಿಂಗನಗೌಡ ಪಾಟೀಲ ವಂದಿಸಿದರು.