ಭಾರತೀಯ ಸಂವಿಧಾನದ ತಿಳುವಳಿಕೆ ಪ್ರತಿಯೊಬ್ಬರಿಗೂ ಅವಶ್ಯ: ನ್ಯಾ. ಸಂಗ್ರೇಶಿ

ಗದಗ 29: ಭಾರತದ ಪ್ರಜೆಗಳಾದ ನಾವು, ನಮ್ಮ ಸಂವಿಧಾನದ ಬಗ್ಗೆ ತಿಳಿದುಕೊಳ್ಳುವುದು ಅತೀ ಅವಶ್ಯವಿದೆ, ನಾವೆಲ್ಲಾ ಜೀವನ ಸಾಗಿಸುತ್ತಿರುವುದು ಸಂವಿಧಾನದ ಅಡಿಯಲ್ಲಿ. ನಮ್ಮ ಸಂವಿಧಾನ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠ ಸಂವಿಧಾನ ಎಂದು ಹೆಸರು ಪಡೆದಿದೆ.  ಪ್ರತಿಯೊಬ್ಬರು ಕೂಡಾ ಸಂವಿಧಾನದ ಪ್ರಸ್ತಾವನೆ, ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಅರಿತಾಗ ಮಾತ್ರ ಸಮಾಜದಲ್ಲಿ ಸ್ವಾಸ್ಥ್ಯ ಕಾಪಾಡಲು ಸಾಧ್ಯ.  ನಮ್ಮಲ್ಲಿ ಬಹಳಷ್ಟು ಜನರಿಗೆ ಕಾನೂನಿನ ಜ್ಞಾನ ಅರಿವು ಇಲ್ಲದೇ ಇರುವುದರಿಂದ ದೌರ್ಜನ್ಯ, ಅಪರಾಧಗಳು ಜರುಗುತ್ತಿದ್ದು ಇವುಗಳನ್ನು ತಡೆಗಟ್ಟಲು ಪ್ರತಿ ಮನೆ ಮನೆಗೆ, ಹಳ್ಳಿ ಹಳ್ಳಿಗೆ ಕಾನೂನು ಸಾಕ್ಷರತೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.  ಆ ದಿಶೆಯಲ್ಲಿ ಇಂದು ನವೆಂಬರ್ 26 ರಂದು ಸಂವಿಧಾನ ದಿನವನ್ನು ಈ ಒಂದು ಹಿಂದುಳಿದ ಪ್ರದೇಶದ ಜನರಿಗೆ ಹಮ್ಮಿಕೊಳ್ಳಲಾಗಿದೆ.  ತಮಗೆ ಯಾವುದೇ ಕಾನೂನಾತ್ಮಕ ಸಮಸ್ಯೆಗಳಿದ್ದರೆ ಸಮೀಪದ ಕಾನೂನು ಸೇವಾ ಪ್ರಾಧಿಕಾರ ಸಂಪಕರ್ಿಸಿ ಉಚಿತ ಸಲಹೆ ಹಾಗೂ ಕಾನೂನು ನೆರವು ಪಡೆದುಕೊಳ್ಳಬಹುದು, ಹೆಣ್ಣು ಮಕ್ಕಳನ್ನು ಉಳಿಸಿ, ಪೊಷಿಸಿ, ಶಿಕ್ಷಣ ಕೊಡಿಸಿ ಅಂದಾಗ ಲಿಂಗ ತಾರತಮ್ಯ ಹೊಗಲಾಡಿಸಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ಜಿ.ಎಸ್.ಸಂಗ್ರೇಶಿಯವರು ನುಡಿದರು.

ಅವರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ವಕೀಲರ ಸಂಘ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗದಗ ಇವರ ಸಂಯುಕ್ತಾಶ್ರಯದಲ್ಲಿ ಎಸ್.ಎಮ್.ಕೃಷ್ಣಾ ನಗರದ ಸಮುದಾಯ ಭವನದಲ್ಲಿ ಜರುಗಿದ ಭಾರತೀಯ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸುವುದರ ಮೂಲಕ ಮಾತನಾಡಿದರು. 

ಸಮಾರಂಭದಲ್ಲಿ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶರಾದ ಶ್ರೀನಿವಾಸ, ಅಪರ ಹಿರಿಯ ದಿವಾಣಿ ನ್ಯಾಯಾಧೀಶರಾದ ಜರಿನಾ, ಪ್ರಧಾನ ದಿವಾಣಿ ನ್ಯಾಯಾಧೀಶರಾದ ಎ.ಎಂ.ಬಡಿಗೇರ, 2ನೇ ಜೆ.ಎಂ.ಎಫ್.ಸಿ ದಿವಾಣಿ ನ್ಯಾಯಾಧೀಶರಾದ ಶ್ರೀಶೈಲಜಾ,  ಪ್ಯಾನಲ್ ವಕೀಲರಾದ ಜಿ.ಎಸ್.ಪಾಟೀಲ್ ಉಪಸ್ಥಿತರಿದ್ದರು.  ಸಮಾರಂಭದ ಅಧ್ಯಕ್ಷತೆಯನ್ನು ನಗರಸಭೆ ಸದಸ್ಯರಾದ ಅಮೃತಾ ಪಾಟೀಲ್ ವಹಿಸಿದ್ದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ  ಸದಸ್ಯ ಕಾರ್ಯದಶರ್ಿಗಳಾದ ರೇಣುಕಾ ಜಿ. ಕುಲಕಣರ್ಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.  ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಪ್ಯಾನಲ್ ವಕೀಲರಾದ ಬಿ.ಎನ್.ಸಂಶಿ ಅವರು ಭಾರತೀಯ ಸಂವಿಧಾನದ ಮಹತ್ವ ಮತ್ತು ಆಶೋತ್ತರಗಳ ಕುರಿತು ಮಾತನಾಡಿ ನಮ್ಮ ರಾಷ್ಟ್ರದ ಸಂವಿಧಾನ ರಚನಾ ಸಭೆಯು ನವೆಂಬರ್-1949 ಇಪ್ಪತ್ತಾರನೆಯ ದಿನದಂದು, ಈ ಮೂಲಕ ಅಪರ್ಿಸಿಕೊಂಡು, ಜಾರಿಯೊಂದಿಗೆ ಈ ಸಂವಿಧಾನವನ್ನು ನಮಗೆ ನಾವೇ ಸಮಪರ್ಿಸಿಕೊಂಡಿದ್ದೇವೆ ಎಂದು ಮಾತನಾಡಿದರು.

ಪ್ರಾರಂಭದಲ್ಲಿ ಸುನಿತಾ ಶಿವಶಿಂಪಗೇರ ಪ್ರಾಥರ್ಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿಯರಾದ ರೂಪಾ ಗಂಧದ ಸರ್ವರನ್ನು ಸ್ವಾಗತಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಶಿರಸ್ತೇದಾರರಾದ ಬಿ.ಎಮ್.ಕುಕನೂರ ಕಾರ್ಯಕ್ರಮವನ್ನು ನಿರೂಪಿಸಿ ಕೊನೆಯಲ್ಲಿ ವಂದಿಸಿದರು.