ಎಲ್ಲರ ಸಹಕಾರ ಹಾಗೂ ಜನಪ್ರತಿನಿಧಿಗಳ ಇಚ್ಚಾ ಶಕ್ತಿ ಬಹುಮುಖ್ಯವಾಗಿದೆ : ರುದ್ರ​‍್ಪ ಲಮಾಣಿ

Everyone's cooperation and the will power of people's representatives is very important: Rudra Lama

ಎಲ್ಲರ ಸಹಕಾರ ಹಾಗೂ ಜನಪ್ರತಿನಿಧಿಗಳ ಇಚ್ಚಾ ಶಕ್ತಿ ಬಹುಮುಖ್ಯವಾಗಿದೆ : ರುದ್ರ​‍್ಪ ಲಮಾಣಿ 

ಸವಣೂರ :ಗ್ರಾಮಾಭಿವೃದ್ಧಿಗೆ ಎಲ್ಲರ ಸಹಕಾರ ಹಾಗೂ ಜನಪ್ರತಿನಿಧಿಗಳ ಇಚ್ಚಾ ಶಕ್ತಿ ಬಹುಮುಖ್ಯವಾಗಿದೆ ಎಂದು ವಿಧಾನ ಸಭಾಉಪಸಭಾಧ್ಯಕ್ಷರು ಹಾಗೂ ಸ್ಥಳೀಯ ಶಾಸಕರಾದ ರುದ್ರ​‍್ಪ ಲಮಾಣಿ ಹೇಳಿದರು. 

       ತಾಲ್ಲೂಕಿನ ಕಳಸೂರ ಗ್ರಾಮ ಪಂಚಾಯತಿಯ ನೂತನ ರಾಜೀವಗಾಂಧಿ ಸೇವಾ ಕೇಂದ್ರ ಕಟ್ಟಡದ ಉದ್ಘಾಟನೆ ಕಾರ್ಯಕ್ರಮ ನೇರವೆರಿಸಿ ಹಾಗೂ ಹಾಲಿ-ಮಾಜಿ ಮತ್ತು ಗಣ್ಯರಿಗೆ ಗೌರವಿಸಿ ಸನ್ಮಾನಿಸಿ ಅವರು ಮಾತನಾಡಿದರು. 

      ಗ್ರಾಮ ಪಂಚಾಯತಿಗಳಲ್ಲಿ ಹಳ್ಳಿಗಳ ಅಭಿವೃದ್ಧಿಗೆ ಹೆಚ್ಚು ಅವಕಾಶಗಳಿವೆ. ಜನಪ್ರತಿನಿಧಿಗಳ ಆಸಕ್ತಿ ಹಾಗೂ ಇಚ್ಚಾ ಶಕ್ತಿ ಬೇಕಿದೆ.ಕಳಸೂರ ಗ್ರಾಪಂ ಗಳ ಕಳಸೂರ,ಮಂಟಗಣಿ,ಕಲಕೋಟಿ ಗ್ರಾಮಗಳ ಅಭಿವೃದ್ಧಿ ನಾನು ವಿಷೇಶವಾಗಿ ಕಾಳಜಿ ಇದೆ.ಕಳಸೂರ ಗ್ರಾಪಂ ನಲ್ಲಿ ಮಹಿಳೆಯರೇ ಅಧ್ಯಕ್ಷರು.ಉಪಾಧ್ಯಕ್ಷರು ಹಾಗೂ ಪಿಡಿಓ ಗಳು ಇದ್ದು,ಎಲ್ಲರ ಸಹಕಾರದಿಂದ ಈ ಬೃಹತ್ ಕಟ್ಟಡ ಕಟ್ಟಲು ಸಾಧ್ಯವಾಗಿದೆ.ಇಲ್ಲಿನ ಅನೇಕ ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಬಗೆಹರಿಸಲು ಪ್ತಯತ್ನಿಸಲಾಗುವುದು.ಗ್ರಾಪಂ ಆವರಣದಲ್ಲಿ ಸ್ಥಳಾವಕಾಶವಿದ್ದು,ಕಾಂಪೌಂಡ್ ಕಟ್ಟಲು ಅನುದಾನ ನೀಡುತ್ತೇನೆ. ಗ್ರಾಪಂ ಗಳಲ್ಲಿ ಹೆಚ್ಚಿನ ಅಧಿಕಾರ ಹಾಗೂ ಅನುದಾನ ಇದ್ದು ಸರಿಯಾಗಿ ಬಳಕೆ ಮಾಡಿಕೊಳ್ಳಲು ಸಾರ್ವಜನಿಕರು ಮುಂದಾಗಬೇಕು. ಹತ್ತಿಮತ್ತೂರಿನ ಹೋಬಳಿಯ ಜನರಿಗೆ ದಿನನಿತ್ಯ ಜಿಲ್ಲಾಡಳಿತ ಕಚೇರಿಗೆ ಹೋಗಿ ಬರಲು ಅನುಕೂಲವಾಗುವಂತೆ ವರದಾ ನದಿಗೆ ಪ್ರತ್ಯೇಕ ಬ್ರಿಡ್ಜ್‌ ನಿರ್ಮಾಣ ಮಾಡುವಂತೆ ಈ ಭಾಗದ ಜನರ ಒತ್ತಾಯವಾಗಿದ್ದು, ಈ ಬೇಡಿಕೆಯನ್ನು ಅಧಿವೇಶನದಲ್ಲಿ ಧ್ವನಿ ಎತ್ತಿಗೆ ಶೀಘ್ರವಾಗಿ ಪರಿಹಾರ ಕ್ರಮ ಕೈಗೊಳ್ಳಲು ಪ್ರಯತ್ನಿಸುತ್ತೇನೆ.  ಈ ಕಟ್ಟಡ ಕಟ್ಟಲು ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ರುದ್ರ​‍್ಪ ಲಮಾಣಿ ಅವರು ಹೆಚ್ಚುಗೆಯ ಮಾತನಾಡಿದರು.  

      ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾಪಂ ಸದಸ್ಯರಾದ ಶ್ರೀಧರ ದೊಡ್ಡಮನಿ ಈ ಕಚೇರಿಯ ಕಟ್ಟಲು ಎಲ್ಲರ ಸಹಕಾರವಿದೆ.ಶ್ರಮವಿದೆ.ಇದೊಂದು ಮಹತ್ವ ಪೂರ್ಣ ಕೆಲಸವಾಗಿದೆ. ಗ್ರಾಪಂ ಭಾಗದ ಜನರಿಗೆ ಉತ್ತಮ ಆಡಳಿತ ನೀಡಲು ಅವಕಾಶವಿದೆ ಎಂದರು.ಗ್ರಾಪಂ ಸದಸ್ಯರಾದ ಪುಟ್ಟಪ್ಪ ಮರಗಿ,ಜಗದೀಶ ಮಂಟಗಣಿ ಊರಿನ ಹಿರಿಯರಾದ ಶಿವಾಜಪ್ಪ ಪುಟ್ಟಣ್ಣನವರ,ಹೆಚ್,ಎಸ್ ಪಾಟೀಲ,ರಮೇಶ ಸಿಂಗಣ್ಣನವರ ಹಾಗೂ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 

   ಹತ್ತಿಮತ್ತೂರಿನ ವಿತಕ್ತಮಠದ ಶ್ರೀ ಮ.ನಿ.ಪ್ರ.ನಿಜಗುಣ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಗ್ರಾಮ ಸರ್ಕಾರದಿಂದ ಉತ್ತಮ ಆಡಳಿತವನ್ನು ಸಾರ್ವಜನಿಕರಿಗೆ ನೀಡಲು ಉತ್ತಮ ಕಟ್ಟಡದ ನಿರ್ಮಾಣ ಮಾಡಿದ್ದು ಎಲ್ಲರಿಗೂ ಸಂತೋಷಕರ.ಮಹಿಳೆಯರು ಹಾಗೂ ಎಲ್ಲಾ ಪುರುಷ ಜನಪ್ರತಿನಿಧಿಗಳು ಹೆಚ್ಚು ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ ಅವರಿಗೆ ಅಭಿನಂದನೆಗಳು. ದೇವರು ಅವರಿಗೆ ಇನ್ನೂ ಹೆಚ್ಚು ಜನಸೇವೆ ಮಾಡಲು ಶಕ್ತಿ ನೀಡಲಿ.ಈ ಗ್ರಾಪಂ ಮಾದರಿಯಾಗಿ ಹೊರಹೊಮ್ಮಲಿ ಎಂದು ಶುಭ ಕೋರಿ ಆರ್ಶಿವಚನ ನೀಡಿದರು.  

          ಕಾರ್ಯಕ್ರಮದಲ್ಲಿ ಹಾಲಿ ಮಾಜಿ ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ,ಸದಸ್ಯರುಗಳಿಗೆ ಪಿಡಿಓ ಗಳಿಗೆ,ಗಣ್ಯರಿಗೆ ಹಾಗೂ ಗ್ರಾಪಂ ಸಿಬ್ಬಂದಿ ವರ್ಗದವರಿಗೆ ಗೌರವಿಸಿ ಸನ್ಮಾನಿಸಲಾಯಿತು.ಅಭಿವೃದ್ಧಿಗೆ ಕಂಕಣ ಬದ್ಧರಾಗಿರುವ ಶಾಸಕರಾದ ರುದ್ರ​‍್ಪ ಲಮಾಣಿ ಅವರಿಗೆ ಹಾಗೂ ವಿರಕ್ತಮಠದ ಮಹಾಸ್ವಾಮಿಗಳಿಗೆ ಗ್ರಾಪಂ ವತಿಯಿಂದ ಗೌರವಿಸಲಾಯಿತು.  

     ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಗ್ರಾಪಂ ಅಧ್ಯಕ್ಷರಾದ ಶ್ರೀಮತಿ ಪವಿತ್ರಾ ಬಸವಣ್ಣೆಪ್ಪ ಮಂಟಗಣಿ ಅವರು ಅಭಿವೃದ್ಧಿಗೆ ಎಲ್ಲರ ಸಹಕಾರ ಕೋರಿ ಹಾಗೂ ಕಟ್ಟಡ ಕಟ್ಟಲು ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಹಾವೇರಿ ತಾಲ್ಲೂಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ  ಅಧ್ಯಕ್ಷರಾದ ಎಂ ಎಂ ಮೈದೂರ,ಸವಣೂರ ತಾಲ್ಲೂಕ ಅಧ್ಯಕ್ಷರಾದ ಸುಭಾಷ ಮಜ್ಜಗಿ,ಗ್ರಾಪಂ ಉಪಾಧ್ಯಕ್ಷರಾದ ಶ್ರೀಮತಿ ಶ್ವೇತಾ ಬಳ್ಳಾರಿ,ಕಳಸೂರ,ಹಿರೇಮುಗದೂರ,ಡಂಬರಮತ್ತೂರ,ಹಿರೇಮರಳಿಹಳ್ಳಿ ಗ್ರಾಪಂ ಜನಪ್ರತಿನಿಧಿಗಳು, ಹಾಲಿ ಮಾಜಿ ಜನಪ್ರತಿನಿಧಿಗಳು,ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು,ಕಳಸೂರ,ಮಂಟಗಣಿ,ಕಲಕೋಟಿ ಗ್ರಾಮಗಳ ಗುರು ಹಿರಿಯರು, ಮಹಿಳೆಯರು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.ಗ್ರಾಪಂ ಸಿಬ್ಬಂದಿ ರಮೇಶ ಕ್ಯಾಲಕೊಂಡ ಕಾರ್ಯಕ್ರಮ ನಿರೂಪಣೆಯನ್ನು ಅಚ್ಚುಕಟ್ಟಾಗಿ ಮಾಡಿದರು.