ಧಾರವಾಡ 25: ಕ್ಷಯರೋಗ ನಿಯಂತ್ರಿಸಿ, ನಿವಾರಣೆ ಮಾಡಲು ರೋಗಿಗಳಲ್ಲಿ ಜಾಗೃತಿ ಮೂಡಿಸುವುದರೊಂದಿಗೆ ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದ್ದು ಎಲ್ಲರೂ ಸಹಕಾರ ನೀಡಿ ಕ್ಷಯರೋಗ ನಿವಾರಣೆಗೆ ಪ್ರಯತ್ನಿಸಬೇಕೆಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.
ಅವರು ಇಂದು ಬೆಳಿಗ್ಗೆ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಆಸ್ಪತ್ರೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ ಸಕ್ರೀಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ್ಷಯರೋಗದ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ನಿರಂತರವಾಗಿ ಔಷಧಿ ಸೇವಿಸುವದರಿಂದ ರೋಗ ಪೂರ್ಣವಾಗಿ ಗುಣಮುಖವಾಗುತ್ತದೆ. ಆದರೆ ಕ್ಷಯರೋಗ ನಿವಾರಣಾ ಔಷಧಿಯನ್ನು ನಿಗಧಿ ಪಡಿಸಿದ ಅವಧಿಯವರೆಗೆ ನಿರಂತರವಾಗಿ ಸೇವಿಸಬೇಕು. ಮಧ್ಯದಲ್ಲಿ ಔಷಧಿ ಸೇವಿಸುವುದನ್ನು ರೋಗಿಯು ಬಿಟ್ಟರೆ ರೋಗ ಮತ್ತಷ್ಟು ಉಲ್ಭನವಾಗುವ (ಡ್ರಗ್ ರಜಿಸ್ಟಂಟ್ ಟಿ.ಬಿ) ಸಾಧ್ಯತೆ ಇರುತ್ತದೆ. ಆದರಿಂದ ಔಷಧಿಯನ್ನು ನಿರಂತರವಾಗಿ ಸೇವಿಸಬೇಕು.ಕ್ಷಯರೋಗ ಸಂಬಂಧಿಸಿದ ಚಿಕಿತ್ಸೆ ಮತ್ತು ಔಷಧಿಗಳನ್ನು ಎಲ್ಲ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಅಭಿಯಾನದಲ್ಲಿ ಜಿಲ್ಲೆಯ ವಿವಿಧ ಪ್ರದೆಶಗಳ 3,21,221 ಜನರನ್ನು ಪರೀಕ್ಷೆಗೆ ಒಳಪಡಿಸಿ ಮತ್ತು ಕೊಳಚೆ ಪ್ರದೇಶ, ಟ್ರಕ್ ಟಮರ್ಿನಲ್, ಶಾಲಾ ಕಾಲೇಜು ಸೇರಿದಂತೆ ವಿವಿಧ ಸ್ಥಳಗಳಲ್ಲಿ "ರೋಗವನ್ನು ದೂರವಿಡಿ; ರೋಗಿಯನ್ನಲ್ಲ ಎಂಬ ಸಂದೇಶದೊಂದಿಗೆ ಜನಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಕ್ಷಯರೋಗ ಪತ್ತೆ ಅಭಿಯಾನದಲ್ಲಿ ಕೈಗಾರಿಕಾ ಪ್ರದೇಶ, ಕೊಳಚೆ ಪ್ರದೇಶ, ಶಾಲಾ ಕಾಲೇಜು, ವಾಹನಗಳ ಚಾಲಕರು, ಕಟ್ಟಡ ಕಾಮರ್ಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾತನಾಡಿ, 2025 ರೊಳಗೆ ಭಾರತವನ್ನು ಕ್ಷಯರೋಗ ಮುಕ್ತ ರಾಷ್ಟ್ರವಾಗಿ ರೂಪಿಸಲು ಭಾರತ ಸರಕಾರ ಗುರಿಹೊಂದಿದ್ದು, ಜಿಲ್ಲೆಯಲ್ಲಿ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಅಭಿಯಾನವನ್ನು ನ. 25ರಿಂದ ಡಿಸೆಂಬರ್ 10ರವರೆಗೆ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ತನುಜಾ.ಕೆ.ಎನ್ ಮಾತನಾಡಿ, ಜಿಲ್ಲೆಯಲ್ಲಿ ಕ್ಷಯರೋಗ ಪತ್ತೆಗಾಗಿ ಎಂಟು ಘಟಕಗಳಿವೆ. ಈಗಾಗಲೇ 1835 ಕ್ಷಯರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತು ಪ್ರತಿ ತಿಂಗಳು ಸಾವಿರದಿಂದ ಸಾವಿರದ ಐದು ನೂರು ಸಂಶಯಾಸ್ಪದ ಕ್ಷಯರೋಗಿಗಳ ಪರೀಕ್ಷೆ ಮಾಡಲಾಗುತ್ತಿದೆ. ಪ್ರಸ್ತುತ ವಿಶೇಷ ಅಭಿಯಾನದಲ್ಲಿ ಹೆಚ್ಚು ಜನರನ್ನು ಪರೀಕ್ಷಿಸುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು.
ಅಭಿಯಾನ ಯಶಸ್ವಿಗೊಳಿಸಲು 284 ತಂಡಗಳನ್ನು ರಚಿಸಲಾಗಿದೆ. ಇದರಲ್ಲಿ ಆಶಾ, ಆರೋಗ್ಯ ಕಾರ್ಯಕರ್ತರು, ಸಕರ್ಾರೇತರ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳು ಸೇರಿದಂತೆ ಒಟ್ಟು 568 ಜನ ಪಾಲ್ಗೋಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಶವಂತ ಮದೀನಕರ ಪ್ರಾಸ್ತಾವಿಕವಾಗಿ ಮಾತನಾಡಿ, ಕ್ಷಯರೋಗ ನಿಯಂತ್ರಣಕ್ಕಾಗಿ ಇಲಾಖೆಯಿಂದ ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಕ್ಷಯರೋಗಿಗಳಿಗೆ ಚಿಕಿತ್ಸೆ ಅವಧಿ ಪೂರ್ಣಗೊಳ್ಳುವರೆಗೆ ಪ್ರತಿತಿಂಗಳು ನಿಕ್ಷಯ ಪೋಷಣೆ ಯೋಜನೆಯಡಿ 500 ರೂ. ಗಳ ಸಹಾಯಧನ ನೀಡಲಾಗುತ್ತಿದೆ. ಮತ್ತು ಕ್ಷಯರೋಗಿಯನ್ನು ಗುರುತಿಸುವ ಖಾಸಗಿ ವೈದ್ಯರಿಗೆ 500 ರೂ.ಗಳ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಿವಕುಮಾರ ಮಾನಕರ, ಆರ್.ಸಿ.ಎಚ್ ಅಧಿಕಾರಿ ಡಾ.ಎಸ್.ಎಂ.ಹೊನಕೇರಿ, ನಿವೃತ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿ.ಡಿ.ಕಪರ್ೂರಮಠ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ಸುಜಾತಾ ಹಸವಿಮಠ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಶಶಿ ಪಾಟೀಲ, ಜಿಲ್ಲಾ ಆಸ್ಪತ್ರೆಯ ವೈದ್ಯರುಗಳಾದ ಡಾ. ಟಿ.ಎ.ಶೆಪೂರ, ಡಾ.ಶ್ರೀಕಾಂತ ಸಾಂಬ್ರಾಣಿ, ಡಾ. ಕೆ.ವಿ.ಅಚ್ಚುತ, ಡಾ.ವಿ.ವಿ.ಮನಗೂಳಿ ಡಾ. ಕವಿತಾ ಕೋರಿ, ಡಾ.ದೀಲಿಪ ಮುನೊಳ್ಳಿ, ಡಾ.ಎಸ್.ಬಿ.ಕಡಕೊಳ್ಳ, ಡಾ.ಎ.ಸಿ.ಸ್ವಾಮಿ, ಧಾರವಾಡ ತಾಲೂಕು ವೈದ್ಯಾಧಿಕಾರಿ ಡಾ. ಅಯ್ಯನಗೌಡ ಪಾಟೀಲ, ಸೇರಿದಂತೆ ವಿವಿಧ ವೈದ್ಯಾಧಿಕಾರಿಗಳು, ವೈದ್ಯ ಮತ್ತು ನಸರ್ಿಂಗ್ ಕಾಲೇಜು ವಿದ್ಯಾಥರ್ಿಗಳು, ಸಕರ್ಾರೇತರ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ನಂತರ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಕ್ಷಯರೋಗ ಕುರಿತ ಜಾಗೃತಿ ಮಾಹಿತಿಯುಳ್ಳ ಸ್ಟಿಕರ್ ಅನ್ನು ತಮ್ಮ ಕಾರಿಗೆ ಅಂಟಿಸುವ ಮೂಲಕ ಐಇಸಿ ಸಾಮಗ್ರಿಗಳ ವಿತರಣೆಗೆ ಜಿಲ್ಲಾ ಪಂಚಾಯತ ಸಿಇಓ ಡಾ.ಬಿ.ಸಿ.ಸತೀಶ ಅವರೊಂದಿಗೆ ಚಾಲನೆ ನೀಡಿದರು.