ನೀರೀಕ್ಷೆಯಂತೆ ಫಲಿತಾಂಶ ಬರದಿದ್ದರೂ ಗುಣಮಟ್ಟದ ಫಲಿತಾಂಶ ಬಂದಿದೆ : ಪಾಂಡುರಂಗ ಭಂಡಾರೆ

Even though the results did not meet expectations, they were of high quality: Pandurang Bhandare

ನೀರೀಕ್ಷೆಯಂತೆ ಫಲಿತಾಂಶ ಬರದಿದ್ದರೂ ಗುಣಮಟ್ಟದ ಫಲಿತಾಂಶ ಬಂದಿದೆ : ಪಾಂಡುರಂಗ ಭಂಡಾರೆ 


ಚಿಕ್ಕೋಡಿ, : ಕಳೆದ ಸಾಲಿನಲ್ಲಿ ಹದಿನೈದನೆ ಸ್ಥಾನದಲ್ಲಿದ್ದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯು ಪ್ರಸಕ್ತ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ 24 ನೇ ಸ್ಥಾನಕ್ಕೆ ಕುಸಿದಿದೆ. ಪ್ರಸಕ್ತ ವರ್ಷದಲ್ಲಿ ಶೇ 66.76 ರಷ್ಟ್ರು ಫಲಿತಾಂಶ ದಾಖಲಿಸಿ ಕಳಫೆ ಮಟ್ಟ ಸಾಧನೆ ತೋರಿದೆ. 

  ಚಿಕ್ಕೋಡಿ ಪಟ್ಟಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ ಆರಂಭವಾದಾಗಿನಿಂದ ಇದು ಎರಡನೆ ಬಾರಿ ಫಲಿತಾಂಶ ಕುಸಿತಕ್ಕೆ ಕಾರಣವಾಗಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಅಥಣಿ, ಕಾಗವಾಡ, ರಾಯಬಾಗ, ಮೂಡಲಗಿ, ಗೋಕಾಕ, ಹುಕ್ಕೇರಿ, ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕು ಒಳಗೊಂಡ ಪದವಿ ಪೂರ್ವ ಕಾಲೇಜುಗಳ ಉಪನಿರ್ದೇಶಕರ ಕಚೇರಿಯು ಎಂಟು ತಾಲೂಕುಗಳನ್ನು ಒಳಗೊಂಡಿದೆ.  

ಮಾರ್ಚ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 30489 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದರು. 19373 ಮಕ್ಕಳು ತೇರ್ಗಡೆ ಹೊಂದಿ ಶೇ 66.76 ಫಲಿತಾಂಶ ದಾಖಲಿಸಿದ್ದಾರೆ. 15039 ಬಾಲಕರಲ್ಲಿ 7844 ಬಾಲಕರು ತೇರ್ಗಡೆಯಾಗಿದ್ದಾರೆ. 15450 ಬಾಲಕಿಯರ ಪೈಕಿ 11529 ಬಾಲಕಿಯರು ತೇರ್ಗಡೆಯಾಗಿದ್ದು, ಈ ಬಾರಿಯೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಬಾಲಕಿಯರೆ ಮೇಲುಗೈ ಸಾಧಿಸಿದ್ದಾರೆ.  

ಕಲಾ ವಿಭಾಗದಲ್ಲಿ 12066 ಮಕ್ಕಳು ಪರೀಕ್ಷೆ ಬರೆದಿದ್ದು, 6724 ಮಕ್ಕಳು ತೇರ್ಗಡೆಯಾಗಿ ಶೇ 55.73 ಫಲಿತಾಂಶ ದಾಖಲಾಗಿದೆ. ವಾಣಿಜ್ಯ ವಿಭಾಗದಲ್ಲಿ 6726 ಮಕ್ಕಳಲ್ಲಿ 4628 ಮಕ್ಕಳು ತೇರ್ಗಡೆಯಾಗಿ ಶೇ 68.81 ಫಲಿತಾಂಶ ದಾಖಲಾಗಿದೆ. ವಿಜ್ಞಾನ ವಿಭಾಗದಲ್ಲಿ 9566 ಮಕ್ಕಳಲ್ಲಿ 7581 ಮಕ್ಕಳು ತೇರ್ಗಡೆಯಾಗಿ ಶೇ 79.25 ರಷ್ಟ್ರು ಫಲಿತಾಂಶ ದಾಖಲಿಸಿದೆ. ಇದರಿಂದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಹೆಚ್ಚು ಫಲಿತಾಂಶ ದಾಖಲಾಗಿರುವುದು ಹೆಗ್ಗಳಿಕ್ಕೆಗೆ ಪಾತ್ರವಾಗಿದೆ.  

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯು ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದ ಮೂಲಕ ಉತ್ತಮ ರಾ​‍್ಯಂಕ ಪಡೆದು ರಾಜ್ಯದಲ್ಲಿ ಚಿಕ್ಕೋಡಿಯ ಕೀರ್ತಿ ಹೆಚ್ಚಿಸಿತ್ತು. ಆದರೆ ದ್ವಿತೀಯ ವರ್ಷದ ಫಲಿತಾಂಶ ಕಡಿಮೆ ಬರುತ್ತಿರುವುದು ಅವಲೋಕನಕ್ಕೆ ಕಾರಣವಾಗಿದೆ. ಎಸ್ಸೆಸ್ಸೆಲ್ಸಿ ಮಾದರಿಯಂತೆ ಪಿಯುಸಿಯಲ್ಲಿ ರಾಜ್ಯಕ್ಕೆ ಟಾಪ್ 10 ರಲ್ಲಿ ಸ್ಥಾನ ಪಡೆಯಬೇಕೆಂಬುದು ಗಡಿ ಭಾಗದ ಶಿಕ್ಷಣ ಪ್ರೇಮಿಗಳ ಆಸೆಯಾಗಿದೆ. 




====== 

ನೀರೀಕ್ಷೆಯಂತೆ ಫಲಿತಾಂಶ ಬರದೇ ಇದ್ದರೂ ಗುಣಮಟ್ಟದ ಫಲಿತಾಂಶ ಚಿಕ್ಕೋಡಿ ಶೈಕ್ಷಣಿಗೆ ಜಿಲ್ಲೆಗೆ ಬಂದಿದೆ. ಮಜಲಟ್ಟಿ ಕಾಲೇಜಿನ ವಿದ್ಯಾರ್ಥಿನಿ ರಾಜ್ಯಕ್ಕೆ ರಾ​‍್ಯಂಕ ಬಂದಿರುವುದು ಖುಷಿ ತರಿಸಿದೆ. ಮುಂದಿನ ವರ್ಷದಲ್ಲಿ ಫಲಿತಾಂಶ ಹೆಚ್ಚಳ ಮಾಡಲು ವಿಶೇಷ ಪ್ರಯತ್ನ ಮಾಡುತ್ತೇವೆ. ಪಾಂಡುರಂಗ ಭಂಡಾರೆ ಉಪನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಚಿಕ್ಕೋಡಿ