ಮೌಲ್ಯಮಾಪನ ನೀಲನಕ್ಷೆ ಪ್ರಶ್ನೆಪತ್ರಿಕೆ ಕಾರ್ಯಗಾರ

ಧಾರವಾಡ:28: ಧಾರವಾಡದಲ್ಲಿ ಶಿಕ್ಷಕ ಶಿಕ್ಷಕಿಯರಿಗಾಗಿ ಸಿಸಿಇ ಆಧಾರಿತ ಮೌಲ್ಯಮಾಪನ ನೀಲನಕ್ಷೆ ಪ್ರಶ್ನೆ ಪತ್ರಿಕೆ ತಯಾರಿಕೆ ಕಾಯರ್ಾಗಾರವನ್ನು ಹಮ್ಮಿಕೊಳ್ಳುವುದರ ಮುಖಾಂತರ ಕನರ್ಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತನ್ನ ಬದ್ಧತೆಯನ್ನು ತೋರಿಸಿದೆ ಎಂದು ಕನರ್ಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಧಾರವಾಡ ಹಾಗೂ ಆಳ್ನಾವರ ಘಟಕದ ವತಿಯಿಂದ ಏರ್ಪಡಿಸಿದ ಸಿಸಿಇ ಆಧಾರಿತ ಮೌಲ್ಯಮಾಪನ ನೀಲನಕ್ಷೆ ಪ್ರಶ್ನೆಪತ್ರಿಕೆ ಕಾಯರ್ಾಗಾರ ಉದ್ಘಾಟಿಸಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡ ಜಿಲ್ಲೆಯ ನೂತನ ಉಪನಿದರ್ೇಶಕರಾದ ಗಜಾನನ ಮನ್ನಿಕೇರಿ ಹೇಳಿದರು.

ಶಿಕ್ಷಕರ ಮೇಲೆ ಗುರುತರವಾದ ಜವಾಬ್ದಾರಿ ಇದ್ದು, ವಿದ್ಯಾಥರ್ಿಗಳ ಪ್ರಗತಿಗೆ ಶ್ರಮಿಸುವುದರ ಜೊತೆಗೆ ಸಮಯಪಾಲನೆಗೆ ಹೆಚ್ಚಿನ ಮಹತ್ವ ನೀಡಬೇಕೆಂದರು. 

ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಫೆಡರೇಶನ್ ನವದೆಹಲಿಯ ಉಪಾಧ್ಯಕ್ಷರಾದ ಬಸವರಾಜ ಗುರಿಕಾರ ಮಾತನಾಡಿ ನಿರಂತರ ವ್ಯಾಪಕ ಮೌಲ್ಯಮಾಪನದ ಮುಖಾಂತರ ಆಗುವ ಹೊರೆಯನ್ನು ತಪ್ಪಿಸುವ ಕಾರ್ಯವಾಗಬೇಕಿದೆ ಎಂದರು. ಇದರ ಸರಳೀಕರಣಕ್ಕಾಗಿ ಸಂಘ ಶ್ರಮಿಸಿದೆ ಎಂದರು. 

  ಮುಖ್ಯ ಅತಿಥಿಗಳಾಗಿ ಜಿಲ್ಲಾಧ್ಯಕ್ಷರಾದ ವಾಯ್.ಎಚ್. ಬಣವಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿದ್ಯಾ ನಾಡಗೀರ, ಡೈಟ್ ಹಿರಿಯ ಉಪನ್ಯಾಸಕರಾದ ಜಯಶ್ರೀ ಕಾರೇಕರ ಸಂಘದ ಪ್ರಧಾನ ಕಾರ್ಯದಶರ್ಿ ರಾಜಶೇಖರ ಹೊನ್ನಪ್ಪನವರ, ಕ್ಷೇತ್ರ ಸಮನ್ವಯ ಪ್ರಭಾರಿ ಅಧಿಕಾರಿ ಎಸ್.ಬಿ.ಅರಸನಾಳ ಇದರ ಜೊತೆಗೆ ಅಳ್ನಾವರ ಅದ್ಯಕ್ಷರಾದ ಎಂ.ಜಿ ಖುದ್ದುನವರ ಪ್ರಧಾನಕಾರ್ಯದಶರ್ಿ ಈ.ಕೆ.ಹೊನಗೆಕರ, ಕೋಶಾಧ್ಯಕ್ಷ ವಾಯ್.ವಿ.ಸಿಂಪಿ, ಧಾರವಾಡ ಘಟಕದ ಪದಾಧಿಕಾರಿಗಳಾದ ಆರ್.ಎಸ್.ಪಾಟೀಲ, ಎನ್.ಎಸ್.ಕಮ್ಮಾರ, ಶೋಭಾ ಶಿರಿಯನ್ನವರ, ಕೆ.ಎಂ.ಬೊಂಗಾಳೆ, ಭಾರತಿ ಮನ್ನೀಕೇರಿ, ಶೈಲಜಾ ಹಾಸಲಕರ, ಬಿ.ಎಂ.ದೊಡ್ಡವಾಡ, ಎಂ.ಡಿ.ಹೊಸಮನಿ, ಎ.ಎ.ಚಕೋಲಿ, ಸಿದ್ದು ವಾರದ, ರಾಜೀವ ಹಲವಾಯಿ, ಗೌರವಾಧ್ಯಕ್ಷರಾದ ಎಸ್.ಎಂ.ದಾನಪ್ಪಗೌಡರ, ಆರ್.ಬಿ.ಮುನವಳ್ಳಿ, ಡಿ.ಎನ್.ಖಾನಾಪೂರ, ಪಿ.ಎಚ್.ಹೊರಪೇಟ ಎಂ.ಆರ್.ಪಾಲತಿ, ರಾಧಾ ಹಳ್ಳೂರ, ಎಸ್.ಡಿ.ಅಮಾತೆನ್ನವರ, ಬಸವರಾಜ ಗದ್ದಿಕೇರಿ, ಸತೀಶ ವಗ್ಗನವರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.