ಪ್ರತಿ ಗ್ರಾಮಗಳಲ್ಲಿ ದಲಿತ ಸಂಘರ್ಷ ಸಮಿತಿ ಸ್ಥಾಪಿಸಿ: ಬನಸೋಡೆ
ಸಂಬರಗಿ23: ಸಂಘಟಿತ ಹೋರಾಟಪರಿಣಾಮಕಾರಿಯಾಗುತ್ತದೆ. ಅನ್ಯಾಯದ ವಿರುದ್ಧ ಹೋರಾಡಲು ಸಿದ್ಧರಾಗಿ ಆಪತ್ಕಾಲದಲ್ಲಿ ನಮಗೆ ಸಹಾಯ ಮಾಡುವವರ ಬೆಂಬಲಕ್ಕೆ ನಿಲ್ಲುತ್ತೇವೆ. ನಮ್ಮನ್ನು ವಿರೋಧಿಸುವವರಿಗೆ ಸರಿಯಾದ ಸಮಯದಲ್ಲಿ ಉತ್ತರ ನೀಡುತ್ತೇವೆಂದು ದಲಿತ ಸಂಘರ್ಷ ಸಮಿತಿ ಬೆಳಗಾವಿ ಜಿಲ್ಲಾ ಸಂಘಟನೆ ಸಂಚಾಲಕ ಕುಮಾರ ಬನಸೋಡೆ ಹೇಳಿದರು.ಅನಂತಪುರ ಗ್ರಾಮದಲ್ಲಿ ಗಡಿಭಾಗದ ದಲಿತ ಸಂಘರ್ಷ ಸಮಿತಿ ಪದಾಧಿಕಾರಿ ಹಾಗೂ ಕಾಂಗ್ರೆಸ್ ಮುಖಂಡರು ಸೇರಿ ನಡೆಸಿದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.ಗ್ರಾಮೀಣ ಪ್ರದೇಶದ ಪ್ರತಿ ಗ್ರಾಮಗಳಲ್ಲಿ ದಲಿತ ಸಂಘರ್ಷ ಸಮಿತಿಯನ್ನು ಸ್ಥಾಪಿಸುವ ಮೂಲಕ ಸಮಾಜವನ್ನು ಬಲಪಡಿಸಬೇಕು. ಸರಕಾರದ ನಾನಾ ಯೋಜನೆಗಳು ತಳಮಟ್ಟಕ್ಕೂ ತಲುಪಬೇಕು ಹಾಗಾಗಿ ಯುವಕರ ಸಹಭಾಗಿತ್ವ ಬಹುಮುಖ್ಯವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸುವ ಮೂಲಕ ಸಮುದಾಯದ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಿ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ವಿರೋಧ ಪಡಿಸಿದವರಿಗೆ ಜಿಲ್ಲಾ ಪಂಚಾಯಿತಿತಾಲೂಕು ಪಂಚಾಯಿತಿಗೆ ಚುನಾವಣೆಗೆ ಅಭ್ಯರ್ಥಿ ಸ್ಥಾನ ನೀಡಬಾರದು. ಪ್ರತಿಪಕ್ಷದ ಸರ್ಕಾರ ಇದ್ದಾಗಲೂ ಅವರೇ ಮುಂದೆ, ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಅವರೇ ಮುಂದೆ ಇದ್ದಾರೆ. ಗೆದ್ದ ಎತ್ತಿನ ಬಾಲ ಹಿಡಿವ ಜನ ಬಹಳ ಇದ್ದಾರೆ. ಅವರಿಗೆ ತಕ್ಕ ಪಾಠಕಲಿಸಲು ನಾವೆಲ್ಲ ಒಕ್ಕಟಾಗಬೇಕೆಂದು ಅವರು ಸಲಹೆ ನೀಡಿದರು.
ಪಂಡಿತ್ ಕಾಂಬಳೆ,ಮಾಂತೇಶ್ ಕಾಂಬಳೆ, ದುಂಡಿರಾಮ ಸುತಾರ್, ಮಚೇಂದ್ರ ಖಂಡೇಕರ್, ಗಂಗಾರಾಮ ಕಾಂಬಳೆ, ವಿಜಯ್ ಅಠವಾಲೆ, ಭಾಸ್ಕರ್ ಕಾಂಬಳೆ, ಗ್ರಾಮ ಪಂಚಾಯತ್ ಸದಸ್ಯೆ ಸವಿತಾ ಬಾನಸೋಡಿ ಸ್ವಪ್ನಿಲ್ ಬನಸೋಡೆ, ಚಂದು ಬನಸೋಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.