ಬಲ್ದೋಟ ಕಾರ್ಖಾನೆ ಆದಷ್ಟು ಬೇಗ ಸ್ಥಾಪಿಸಿ : ಸಿ.ಕೆ.ಮರಿಸ್ವಾಮಿ ಬರಗೂರು
ಕೊಪ್ಪಳ 05 : ಕೊಪ್ಪಳ ಜಿಲ್ಲೆಯ ಹಾಲವರ್ತಿ ಗ್ರಾಮದ ಎಂ ಎಸ್ ಪಿ ಎಲ್ ಹಾಗೂ ಬಲ್ದೋಟ ಸ್ಟೀಲ್ ಪವರ್ ಲಿಮಿಟೆಡ್ ಕಂಪನಿಯು ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಜಿಮ್ ಬಂಡವಾಳಶಾಯಿ ಹೂಡಿಕೆದಾರರ ಸಮಾವೇಶ-2025 ರಲ್ಲಿ ಕಂಪನಿಯು ರೂ.54 ಸಾವಿರ ಕೋಟಿ ಹೂಡಿಕೆಗೆ ಸರ್ಕಾರವು ಅನುಮೋಧಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಖಾನೆಯನ್ನು ಆದಷ್ಟು ಬೇಗ ಸ್ಥಾಪಿಸಬೇಕೆಂದು ಪ್ರಗತಿಪರ ಮತ್ತು ದಲಿತ ಪರ ಸಂಘಟನೆಗಳ ಒಕ್ಕೂಟದ ಮುಖಂಡ ಸಿ.ಕೆ.ಮರಿಸ್ವಾಮಿ ಬರಗೂರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುವುದಾಗಿ ಹೇಳಿದರು.ಅವರು ಬುಧವಾರದಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಕೊಪ್ಪಳ ಜಿಲ್ಲೆ, ಹಿಂದುಳಿದ ಜಿಲ್ಲೆಯಾಗಿದ್ದು, ಈಗ ತಾನೇ ಓದ್ದೋಗಿಕರಣದತ್ತ ದಾಪುಗಾಲು ಇಡುತ್ತಿದೆ, ಇದರಿಂದ ಜಿಲ್ಲೆಯು ಅಭಿವೃದ್ಧಿಯಾಗುತ್ತಿರುವುದು ಕಂಡುಬರುತ್ತದೆ, ಎಂಥಾ ಕಾರ್ಖಾನೆಗಳು ನಮ್ಮ ಜಿಲ್ಲೆಗೆ ಬರುವುದರಿಂದ ವಾಣಿಜ್ಯ ಉದ್ಯಮಗಳ ವೈಹಿವಾಟು ನಿರುದ್ಯೋಗಿಗಳಿಗೆ ಉದ್ಯೋಗ, ಸುತ್ತಮುತ್ತಲಿನ ಹಳ್ಳಿಗಳಲ್ಲಿ ಆರ್ಥಿಕವಾಗಿ ಮತ್ತು ಶೈಕ್ಷಣಿಕ ಬೆಳವಣಿಗೆ ಆಗುವುದರಲ್ಲಿ ಸಂದೇಹವಿಲ್ಲ ಹೀಗಾಗಿ ಈ ಕಾರ್ಖಾನೆ ಸ್ಥಾಪನೆಯಾಗಬೇಕು, ಕಾರ್ಖಾನೆ ಆದಷ್ಟು ಬೇಗನೆ ಸ್ಥಾಪಿಸುವುದರಿಂದ ನಿರುದ್ಯೋಗ ಯುವಕರಿಗೆ ಉದ್ಯೋಗ ಸೃಷ್ಟಿ, ಕೂಲಿ ಕಾರ್ಮಿಕರಿಗೆ ಗೂಳೇ ಹೋಗದಂತೆ ತಡೆಯುವಲ್ಲಿ ಯಶಸ್ವಿಯಾಗಲು ಅನುಮೋದನೆ ನೀಡಬೇಕೆಂದು ಒತ್ತಾಯಿಸುವುದಾಗಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಹುಲುಗೇಶ್ ದೇವರಮನೆ, ದೊಡ್ಡ ಭೋಜಪ್ಪ, ಶಂಕರ್ ಸಿದ್ದಾಪುರ, ಹುಲುಗಪ್ಪ ಮಾಗಿ, ಯಲ್ಲಪ್ಪ ಕಟ್ಟಿಮನಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.