ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಹಾನಿ: ಶಿವಲಿಂಗ ಟಿರಕಿ
ಮಹಾಲಿಂಗಪುರ 23: ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಮತ್ತು ಚಹಾ ಪೇಪರ್ ಕಪ್‌ಗಳ ಬಳಕೆಯನ್ನು ನಿಲ್ಲಿಸಬೇಕು. ನೇಕಾರರು ತಯಾರಿಸಿದ ಕಾಟನ್ ಚೀಲಗಳ ಬಳಕೆ ಮಾಡುವ ಕುರಿತು ಒತ್ತಾಯಿಸಿ ಪುರಸಭೆ ಮುಖ್ಯಾಧಿಕಾರಿ ಮೂಲಕ ಜಿಲ್ಲಾಧಿಕಾರಿಗಳಿಗೆ ನೇಕಾರರಿಂದ ಮನವಿ ಪತ್ರ ಸಲ್ಲಿಸಿದರು.
ಬಾಗಲಕೋಟ ಜಿಲ್ಲೆಯು ರಾಜ್ಯದಲ್ಲಿಯೇ ಅತಿ ಹೆಚ್ಚು ಪ್ಲಾಸ್ಟಿಕ್ ಬಳಕೆಯಲ್ಲಿ ತೊಡಗಿದ್ದು ಇದರಿಂದ ಕ್ಯಾನ್ಸರ್‌ರಂತಹ ಮಹಾಮಾರಿ ಕೂಡಾ ಅತಿ ಹೆಚ್ಚಾಗಿ ಕಂಡು ಬರುತ್ತಿದೆ. ಇದನ್ನು ತಡೆಯಬೇಕಾದರೆ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಲ್ಲಿಸಬೇಕು.ಕ್ಯಾನ್ಸರ್ ರೋಗಕ್ಕೆ ಪೂರಕವಾಗುವ ಎಲ್ಲ ವಸ್ತುಗಳ ಮೇಲೆ ನಿಬಂರ್ಧ ಹೇರಬೇಕು.ಪ್ಲಾಸ್ಟಿಕನ್ನು ಎಲ್ಲೆಂದರಲ್ಲಿ ಬಿಸಾಡುವುದರಿಂದ ದನ, ಕರುಗಳು, ತಿಂದು ಅವುಗಳಿಗೂ ಕೂಡ ರೋಗಗಳು ಬರುತ್ತವೆ. ಪ್ಲಾಸ್ಟಿಕ್ ಚೀಲಗಳ ಬದಲಾಗಿ ನೇಕಾರರು ತಯಾರಿಸಿದ ಕಾಟನ್ ಬಟ್ಟೆಯ ಚೀಲಗಳನ್ನು ಉಪಯೋಗಿಸಿ ಸಂಕಷ್ಟದಲ್ಲಿರುವ ನೇಕಾರರಿಗೆ, ಗುಡಿ ಕೈಗಾರಿಕೆಗಾರರಿಗೆ ಉದ್ಯೋಗ ಒದಗಿಸಿ, ಎಲ್ಲಾ ನಗರ ಮತ್ತು ಗ್ರಾಮಗಳಲ್ಲಿ ಚಹಾ ಕುಡಿಯಲು ಬಳಸುತ್ತಿರುವ ಕಪ್ ಗಳನ್ನು ನಿಬಂರ್ಧಿಸಿ, ಸಾರ್ವಜನಿಕರಿಗೆ ಮತ್ತು ಪರಿಸರ ಹಾನಿಯಾಗದಂತೆ ನೋಡಿಕೊಳ್ಳುವಲ್ಲಿ ಸರಕಾರ ಮತ್ತು ಜಿಲ್ಲಾಡಳಿತ ಮುಂದಾಗಬೇಕು ಎಂದು ನೇಕಾರ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಒತ್ತಾಯಿಸಿದರು.
ಪುರಸಭೆ ಸದಸ್ಯ ರವಿ ಜವಳಗಿ, ಮುಖ್ಯಾಧಿಕಾರಿ ಈರಣ್ಣ ದಡ್ಡಿ, ರಾಜೇಂದ್ರ ಮಿರ್ಜಿ, ಸಂಜು ಜಿಡ್ಡಿಮನಿ, ಈರ್ಪ ಢವಳೇಶ್ವರ, ಶಂಕರ ಮುಂಡಗನೂರ, ಮೂಸಾ ಯಡಹಳ್ಳಿ, ಮಹಾಲಿಂಗಪ್ಪ ಮುಂಡಗನೂರ, ಶಂಕರ ಪಂಕಿ, ಈರ್ಪ ನಾಗರಾಳ, ಸಂಗಪ್ಪ ಹಳ್ಳೂರ ಸೇರಿದಂತೆ ಅನೇಕ ಇದ್ದರು