ಫೆ.22 ರಂದು ಪರಿಸರ ಜಾಗೃತಿ ವಿಚಾರ ಸಂಕೀರ್ಣ ಕಾರ್ಯಕ್ರಮ
ಕೊಪ್ಪಳ : ಜಿಲ್ಲಾ ಬಚಾವೋ ಆಂದೋಲ ಸಮಿತಿಯ ನೇತೃತ್ವದಲ್ಲಿ ಬಲ್ದೋಟ ಉಕ್ಕಿನ ವಿನಾಶಕಾರಿ ಕಾರ್ಖಾನೆ ತೊಲಗಿಸಲು ನಿರಂತರ ಹೋರಾಟ ರೂಪಿಸಲು ನಾಳೆ ಫೆ. 22 ರಂದು ಬೆಳಗ್ಗೆ 10:30ಕ್ಕೆ ಖ್ಯಾತ ರಾಷ್ಟ್ರೀಯ ಪರಿಸರವಾದಿ, ಪರಿಸರ ವಿಜ್ಞಾನಿ ನಾಗೇಶ ಹೆಗಡೆಯವರಿಂದ ನಗರದ ಸಾಹಿತ್ಯ ಭವನದಲ್ಲಿ ಪರಿಸರ ಜಾಗೃತಿ ವಿಚಾರ ಸಂಕೀರ್ಣ ಜರುಗುವುದು ಎಂದು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಮುಖಂಡರಾದ ಅಲ್ಲಮಪ್ರಭು ಬೆಟ್ಟದೂರು ತಿಳಿಸಿದರು.
ಅವರು ಗುರುವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಎಂಎಸ್ಪಿಎಲ್ ಬಲ್ಲೋಟಾ ಇತರೆ 50 ಕ್ಕೂ ಹೆಚ್ಚಿನ ಕಾರ್ಖಾನೆಗಳ ಬೂದಿ, ಧೂಳು ಪರಿಸರ ಮಾಲಿನ್ಯದಿಂದ ಕೊಪ್ಪಳ ನಗರ ಹಾಗೂ ಸುತ್ತಲಿನ ಗ್ರಾಮಗಳ ಜನರು ಹಲವು ರೋಗಕ್ಕೆ ತುತ್ತಾಗಿ ತೊಂದರೆ ಅನುಭವಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ,
ಈ ಕಾರ್ಖಾನೆ ಬರುವುದರಿಂದ ಧೂಳು ಪರಿಸರ ಸೇರಿ ತೀವ್ರ ಅನಾರೋಗ್ಯಕರ ವಾತಾವರಣ ಸೃಷ್ಟಿಯಾಗಲಿದೆ, ಅಪಾಯಕಾರಿಯಾದ ಮಾನವ ವಿನಾಶದ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಅರಸಿನಕೇರಿ, ಚಿಕ್ಕಬೆಣಕಲ್ ಸ್ಥಳ ಪರೀಶೀಲನೆ ಮಾಡಲಾಗಿ ದೆ ಇದನ್ನು ಸಹ ವಿರೋಧಿಸಬೇಕಾಗಿದೆ, ಇವುಗಳ ಬಗ್ಗೆ ಜಿಲ್ಲೆಯ ಮಂತ್ರಿಗಳಿಗೆ ಮತ್ತು ಜಿಲ್ಲೆಯ ಸಂಸದರಿಗೆ, ಶಾಸಕರಿಗೆ ಮನವಿ ಸಲ್ಲಿಸಿ ಒತ್ತಾಯಿಸಬೇಕಾಗಿದೆ ಎಂದರು.
ಮುಖಂಡರಾದ ಬಸವರಾಜ್ ಸುಳಿಭಾವಿ ಮಾತನಾಡಿ ಕಾರ್ಖಾನೆಯೂ ಈಗಾಗಲೇ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ರೋಗರುಜಿನ ಉಂಟು ಮಾಡಿ ಪರಿಸರ ಹಾನಿ ಮಾಡಿದ್ದು ಈಗ ದೊಡ್ಡ ಪ್ರಮಾಣದ ವಿಸ್ತರಣೆಗೆ ಇಂತಹ ಕಾರ್ಖಾನೆಗಳಿಗೆ ಅವಕಾಶ ಬೇಡ ಎಂದರು.ಮುಖಂಡರಾದ ಡಿ.ಎಚ್ ಪೂಜಾರ ಮಾತನಾಡಿ ಫೆಬ್ರವರಿ 24ರಂದು ಕೊಪ್ಪಳ ಬಂದ್ ಎಲ್ಲರೂ ಸೇರಿ ಬೆಂಬಲಿಸಿ ಯಶಸ್ವಿಗೊಳಿಸೋಣ ಎಂದರು.ಸುದ್ದಿಗೋಷ್ಠಿಯಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿಯ ಮುಖಂಡರಾದ ಬಸವರಾಜ್ ಶೀಲವಂತರ, ಜ್ಯೋತಿ ಗೊಂಡಬಾಳ, ಶರಣು ಗಡ್ಡಿ ಉಪಸ್ಥಿತರಿದ್ದರು.