ಲೋಕದರ್ಶನ ವರದಿ
ಬ್ಯಾಡಗಿ15: ಇಂಡಿಯನ್ ಅಚೀವರ್ಸ್ ಫೋರಮ್ ಇವರು ದೆಹಲಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ 46 ನೇ ನ್ಯಾಶನಲ್ ಸ್ಟಾರ್ಟಪ್ ಮತ್ತು ಎನಕರೇಜ್ ಇನ್ ಇಂಡಸ್ಟ್ರೀ ಕಾರ್ಯಕ್ರಮದಲ್ಲಿ ಸ್ಥಳೀಯ ಮೆಣಸಿನಕಾಯಿ ಮಾರುಕಟ್ಟೆ ಉದ್ಯಮಿ ಮೆಹಬೂಬ್ಲಿ ಭೂಷಿ (ಮೆಬಹೂಬ ಟ್ರೇಡಿಂಗ್ ಕಂಪನಿ) ಇವರು ಪ್ರಶಸ್ತಿ ಪಡೆದಿದ್ದಾರೆ.
ಸಂಸದರಾದ ಡಾ.ಸುಬ್ರಮಣಿಯನ್ ಸ್ವಾಮಿ, ಮನೋಜ ತಿವಾರಿ, ರೇಣುಕಾಶಮರ್ಾ, ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಚೇರಮನ್ ಇವರು ಇತ್ತೀಚೆಗೆ ಪ್ರಶಸ್ತಿ ಪ್ರಧಾನ ಮಾಡಿದರು.
ಪ್ರಶಸ್ತಿ ಪಡೆದ ಮೆಹಬೂಬ್ಲಿ ಭೂಷಿಯವರಿಗೆ ಸ್ಥಳೀಯ ಎಪಿಎಂಸಿ ಕಾರ್ಯದಶರ್ಿ ನ್ಯಾಮಗೌಡ ಸೇರಿದಂತೆ ಮೆಣಸಿನಕಾಯಿ ಮಾರುಕಟ್ಟೆ ವರ್ತಕರು ಅಭಿನಂದಿಸಿದ್ದಾರೆ.