ಲೋಳಕದರ್ಶನ ವರದಿ
ಚನ್ನಮ್ಮನ ಕಿತ್ತೂರು 19: ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರವು ಕೇವಲ 14 ತಿಂಗಳಲ್ಲಿ ಸುಮಾರು 36 ಜನರನ್ನು ಭಾರತೀಯ ಸೇನೆಗೆ ಸೇರಿಸಿ, ಇಂದಿನ ಪಿಳೀಗೆ ದೇಶ ಸೇವೆ ಮಾಡಲು ಹುರುದುಂಬಿಸುವ ಕಾರ್ಯ ಶ್ಲಾಘನೀಯವಾದದ್ದು ಎಂದು ಮಾಜಿ ಕ್ಯಾಪ್ಟನ್ ಎಂ.ಎಸ್. ಪೂಜೇರ ಹೇಳಿದರು.
ಪಟ್ಟಣದ ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮನುಷ್ಯ ಮನಸ್ಸು ಮಾಡಿದರೇ ಸಾಧನೆ ಮಾಡಲು ಹಲವು ದಾರಿಗಳಿವೆ. ಈ ಮಾರ್ಗದಲ್ಲಿ ತರಬೇತಿ ಕೇಂದ್ರದ ಸಂಸ್ಥಾಪಕ ಪವರ್ೇಜ್ ಹವಾಲ್ದಾರ ಮತ್ತು ತಂಡ ನಡೆಯುತ್ತಿದ್ದು, ನಮ್ಮ ದೇಶಕ್ಕೆ ಬಲಿಷ್ಠ ಯುವಕರ ಪಡೆಯ ಅವಶ್ಯಕತೆಯಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಥರ್ಿಗಳು ಇವರ ಮಾರ್ಗದರ್ಶನದಲ್ಲಿ ಭಾರತೀಯ ಸೇನೆಗೆ ಸೇರುವಂತಾಗಲಿ ಎಂದು ಶುಭ ಹಾರೈಸಿದರು.
ಡಾ.ಎ.ಎಚ್.ಲಾಡಖಾನ್ ಮಾತನಾಡಿ, ನನಗೂ ಭಾರತೀಯ ಸೇನೆಗೆ ಸೇರುವ ಆಸೆಯಿತ್ತು, ಅದು ಕೈಗೂಡದ ಪರಿಣಾಮ ಕೊನೆಪಕ್ಷ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರ ಸೇವೆ ಮಾಡಬೇಕೆಂಬ ಉದ್ದೇಶದಿಂದ ಕಳೆದ ಹಲವು ವರ್ಷಗಳಿಂದ ಕೈಲಾದ ಮಟ್ಟಿಗೆ ನಿವೃತ್ತ ಯೋಧರಿಗೆ ಉಚಿತ ವೈದ್ಯಕೀಯ ಸೇವೆ ನೀಡುವ ಮೂಲಕ ದೇಶದ ಮೇಲಿನ ಋಣ ತೀರಿಸಿಕೊಳ್ಳುತ್ತಿದ್ದೇನೆ. ದೇಶಕ್ಕಾಗಿ ದುಡಿಯುವುದು ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಅದನ್ನೇ ನಾನು ಮಾಡುತ್ತಿದ್ದೆನಷ್ಟೇ ಎಂದರು.
ಡಾ.ಮಹಾಂತೇಶ ಕಲ್ಮಠ ಮಾತನಾಡಿ, ಇಲ್ಲಿನ ಯುವಕರ ಉತ್ಸಾಹ ಕಂಡು ನನ್ನ ಸಂತಸ ಇಮ್ಮಡಿಯಾಗಿದ್ದು, ಇನ್ಮುಂದೆ ನಾನೂ ಕೂಡ ನಿಮಗೆ ವೈದ್ಯಕೀಯ ಸೇವೆ ನೀಡಲು ಉತ್ಸುಕನಾಗಿದ್ದೇನೆ ಎಂದರು. ಲೇಖಕ ಪ್ರವೀಣ ಗಿರಿ ಮಾತನಾಡಿ, ಅತೀ ಕಡಿಮೆ ಅವಧಿಯಲ್ಲಿ ನಿರೀಕ್ಷೆಗೂ ಮೀರಿ ಬೆಳೆದು, ಹಲವಾರು ಬಡ ವಿದ್ಯಾಥರ್ಿಗಳ ಪಾಲಿನ ಕಾಮಧೇನುವಾಗಿ ಈ ಸೇನಾ ತರಬೇತಿ ಕೇಂದ್ರ ಮುನ್ನುಗ್ಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮಾಜಿ ಕ್ಯಾಪ್ಟನ್ಗಳಾದ ಎಸ್.ವೈ. ತಳವಾರ ಮತ್ತು ಲಕ್ಷ್ಮಣ, ಮಾಜಿ ಹವಾಲ್ದಾರ ಆರ್.ಎಸ್. ಚಿಕ್ಕಣ್ಣವರ, ಎಸ್.ಪಿ. ಹಿರೇಮಠ ಅವರು ಭಾರತೀಯ ಸೇನೆಯಲ್ಲಿನ ತಮ್ಮ ಅನುಭವಗಳನ್ನು ವಿದ್ಯಾಥರ್ಿಗಳೊಂದಿಗೆ ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ತರಬೇತಿ ಕೇಂದ್ರದ ವಿದ್ಯಾಥರ್ಿಗಳಿಗೆ ಉಚಿತ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಡಾ.ಎ.ಎಚ್. ಲಾಡಖಾನ್ ಮತ್ತು ಎಂ.ಎಸ್. ಕಲ್ಮಠ ಅವರನ್ನು ಸತ್ಕರಿಸಲಾಯಿತು. ಸಂಸ್ಥೆ ನಡೆಸಿದ ಕೆಲ ಸ್ಪಧರ್ೆಗಳಲ್ಲಿ ವಿಜೇತರಾಗಿ ಹೊರಹೊಮ್ಮಿದ ವಿದ್ಯಾಥರ್ಿಗಳಿಗೆ ಪ್ರಮಾಣ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು. ಸೇನಾ ತರಬೇತಿ ಕೇಂದ್ರದ ಸಂಸ್ಥಾಪಕ ಪವರ್ೇಜ್ ಹವಾಲ್ದಾರ, ಸಿಎಓ ಗಂಗಾಧರ ಪೂಜೇರ, ಎಂ.ಎಸ್. ಗುರುವೈಯನವರ, ಜಗದೀಶ ಮಾಳಗಿ, ಸುವಣರ್ಾ ಮಾಳಗಿ, ತನ್ವೀರ್ ಗೋಕಾಕ ಇತರರು ಇದ್ದರು.